ETV Bharat / state

ದಲಿತ ಯುವಕನ ಮೇಲೆ ಹಲ್ಲೆ ಪ್ರಕರಣ: ದೇವಾಲಯದ ಬೀಗ ಒಡೆದು ರಂಗನಾಥನಿಗೆ ಪೂಜೆ - ಚಿಕ್ಕಮಗಳೂರು

ಕಾಫಿ ನಾಡಲ್ಲಿ ಅಸ್ಪೃಶ್ಯತೆ ಪ್ರಕರಣ ನಡೆದಿದೆ. ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿ ವಿವಿಧ ದಲಿತ ಸಂಘಟನೆಗಳ ಮುಖಂಡರು ಆಗಮಿಸಿ ಗೊಲ್ಲರಹಟ್ಟಿಯ ರಂಗನಾಥ ದೇವಸ್ಥಾನಕ್ಕೆ ಪ್ರವೇಶ ಮಾಡಿ ದೇವರ ದರ್ಶನ ಪಡೆದಿದ್ದಾರೆ.

ದಲಿತರಿಂದ ಪೂಜೆ
ದಲಿತರಿಂದ ಪೂಜೆ
author img

By ETV Bharat Karnataka Team

Published : Jan 10, 2024, 8:19 AM IST

Updated : Jan 10, 2024, 11:40 AM IST

ರಂಗನಾಥ ದೇವರಿಗೆ ದಲಿತರಿಂದ ಪೂಜೆ

ಚಿಕ್ಕಮಗಳೂರು: ದಲಿತ ಯುವಕ ಮೇಲೆ ಹಲ್ಲೆ ನಡೆಸಿದ ಘಟನೆ ಕಾಫಿನಾಡಲ್ಲಿ ತೀವ್ರ ಸ್ವರೂಪ ಪಡೆದಿದೆ. ಮಂಗಳವಾರ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವಿವಿಧ ದಲಿತ ಸಂಘಟನೆಗಳ ಮುಖಂಡರು ತರೀಕೆರೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಗೇರು ಮರಡಿ ಗ್ರಾಮಕ್ಕೆ ಬಂದು ಗೊಲ್ಲರಹಟ್ಟಿಯ ರಂಗನಾಥ ದೇವಸ್ಥಾನ ಪ್ರವೇಶಕ್ಕೆ ಪಟ್ಟು ಹಿಡಿದರು.

ದಲಿತರು ಏಕೆ ದೇವಸ್ಥಾನ ಪ್ರವೇಶ ಮಾಡಬಾರದು, ನಾವು ಮನುಷ್ಯರೇ ಎಂದು ದಲಿತ ಮುಖಂಡರ ಯೋಜನೆಯಂತೆ ಗ್ರಾಮದ ಗೊಲ್ಲರ ಆರಾಧ್ಯ ದೈವ ರಂಗನಾಥ ಸ್ವಾಮಿ ದೇವಾಲಯಕ್ಕೆ ಪ್ರವೇಶ ಮಾಡಿದರು. ಗೊಲ್ಲರಹಟ್ಟಿ ಮುಖಂಡನ ಮನವೊಲಿಸಲು ಪ್ರಯತ್ನ ಮಾಡಿದ್ದು, ದೇವಾಲಯದ ಬಾಗಿಲ ಕೀ ನೀಡದೆ ಇದ್ದಾಗ ತರೀಕೆರೆ ತಾಲೂಕು ಆಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ದೇವಾಲಯದ ಬಾಗಿಲ ಬೀಗ ಒಡೆದು ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದರು. ಹಲ್ಲೆಗೊಳಗಾಗಿದ್ದ ಯುವಕ ಮಾರುತಿ‌ ದೇವರಿಗೆ ಪೂಜೆ ಸಲ್ಲಿಸಿ ಅಸ್ಪೃಶ್ಯತೆ ಬಗ್ಗೆ ಆಕ್ರೋಶ ಹೊರಹಾಕಿದರು.

ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಗೇರುಮರಡಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್​ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನ ಗ್ರಾಮದ ಮುಖ್ಯದ್ವಾರಕ್ಕೆ ಪೊಲೀಸರನ್ನು ನಿಯೋಜಿಸಲಾಗಿತ್ತು. ರಾಜ್ಯದ ಹಲವು ಭಾಗಗಳಿಂದ ಗ್ರಾಮಕ್ಕೆ ಆಗಮಿಸಿದ್ದ ಸುಮಾರು 200ಕ್ಕೂ ಹೆಚ್ಚು ದಲಿತ ಮುಖಂಡರು ಪೊಲೀಸ್​ ಭದ್ರತೆಯಲ್ಲಿ ದೇವಸ್ಥಾನ ಪ್ರವೇಶಿಸಿ ದೇವರಿಗೆ ನಮನ ಸಲ್ಲಿಸಿದರು. ಜೊತೆಗೆ ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ ಇನ್ನುಳಿದ ಆರೋಪಿಗಳನ್ನು ಬಂಧಿಸುವಂತೆ ಪೊಲೀಸ್ ಇಲಾಖೆ ಹಾಗು ಜಿಲ್ಲಾಡಳಿತಕ್ಕೆ ಆಗ್ರಹಿಸಿದರು. ಪ್ರಕರಣ ಸಂಬಂಧ 15 ಆರೋಪಿಗಳ ಪೈಕಿ ನಾಲ್ವರನ್ನು ಬಂಧಿಸಿರುವ ಪೊಲೀಸ್ ಇಲಾಖೆ ಇನ್ನುಳಿದ ಆರೋಪಿಗಳನ್ನು ಕೂಡಲೇ ಬಂಧಿಸಿ ನ್ಯಾಯ ಒದಗಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ದೇವಾಲಯದ ಒಳ ಪ್ರವೇಶ ಮಾಡಿ ಅಸ್ಪೃಶ್ಯತೆ ದೇಶದಿಂದ ತೊಲಗುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇನ್ನು ದೇವಾಲಯದ ಬಾಗಿಲ ಬೀಗ ಒಡೆದ ಹಿನ್ನೆಲೆ ದೇವಾಲಯವನ್ನು ತಾಲೂಕು ಆಡಳಿತದ ಸಿಬ್ಬಂದಿಗಳು ಸೀಲ್ ಮಾಡಿದ್ದಾರೆ.

ಹಲ್ಲೆಗೊಳಗಾದ ಯುವಕ ಮಾರುತಿ ಹೇಳಿಕೆ: ಈ ಊರಿನ ಜನ ನನಗೆ ಹೊಡೆದು ಬಡೆದು ತುಂಬಾ ತೊಂದರೆ ಕೊಟ್ಟಿದ್ದರು. ಇವರಿಗೆ ದೇವರು ಒಳ್ಳೆದು ಮಾಡಲಿ, ಒಳ್ಳೆ ಬುದ್ಧಿ ಕೊಡಲಿ ಅಂತ ಬಯುಸುತ್ತೇನೆ. ನಾನು ಅವರನ್ನು ದ್ವೇಷ ಮಾಡಲ್ಲ ಪ್ರೀತಿ ಮಾಡುತ್ತೇನೆ. ಇಂದು ದೇವಾಲಯ ಪ್ರವೇಶ ಮಾಡಿ ಪೂಜೆ ಮಾಡಿರುವುದರಿಂದ ನೆಮ್ಮದಿಯಾಗಿದೆ. ದೇವರು ಎಲ್ಲರಿಗೂ ಒಂದೇ. ಅಸ್ಪೃಶ್ಯತೆ ಈ ಊರಿನಿಂದಲೇ ತೊಲಗಬೇಕು ಎಂದು ಮಾರುತಿ ಹೇಳಿದರು.

ತಾಲೂಕು ಉಪ ವಿಭಾಗಾಧಿಕಾರಿ ಪ್ರತಿಕ್ರಿಯೆ: ತಾಲೂಕು ಉಪ ವಿಭಾಗಾಧಿಕಾರಿ ಕಾಂತರಾಜು ಈ ಕುರಿತು ಮಾಹಿತಿ ನೀಡಿದ್ದಾರೆ. ಈ ಊರಿನಲ್ಲಿ ಅಸ್ಪೃಶ್ಯತೆ ಆಚರಣೆ ಇತ್ತು. ಆದರೆ ನಮಗೆ ಮೊನ್ನೆಯ ಘಟನೆ ಬಳಿಕ ಬೆಳಕಿಗೆ ಬಂತು. ಇದರ ಬಳಿಕ ನಮ್ಮ ಜಿಲ್ಲಾಧಕಾರಿ, ಎಸ್ಪಿ, ಜಿಲ್ಲಾ ಪಂಚಾಯತ್​ ಅಧಿಕಾರಿಗಳ, ಸಮಾಜ ಕಲ್ಯಾಣ ಇಲಾಖೆಯ ಸೂಚನೆಯಂತೆ ಈ ಗ್ರಾಮದಲ್ಲಿ ಅಸ್ಪೃಶ್ಯತೆ ಬಗ್ಗೆ ಶಾಂತಿ ಸಭೆಯನ್ನು ಮಾಡಬೇಕು ಎಂದು ಅಸ್ಪೃಶ್ಯತೆಯ ಬಗ್ಗೆ ಈಗಾಗಲೇ ಮನವರಿಕೆ ಮಾಡಿದ್ದೇವೆ. ನಂತರದಲ್ಲಿ ಅಧಿಕಾರಿಗಳಿಂದ ಈ ಆಚರಣೆಯ ವಿರುದ್ಧ ಸೂಕ್ತ ಕ್ರಮವಹಿಸಬೇಕೆಂದು ಹೇಳಿದ ಹಿನ್ನೆಲೆ ಗ್ರಾಮಸ್ಥರ ಸಮ್ಮುಖದಲ್ಲೇ ರಂಗನಾಥ ದೇವಾಲಯವನ್ನು ತೆರೆದು ಹಲ್ಲೆಗೊಳಗಾದ ಮಾರುತಿ ಅವರಿಂದಲೇ ಪೂಜೆ ಮಾಡಿಸಲಾಯಿತು. ಎಲ್ಲರಿಗೂ ಪೂಜೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ತಾಲೂಕು ಉಪ ವಿಭಾಗಾಧಿಕಾರಿ ವಿವರಿಸಿದ್ದಾರೆ.

ಇದನ್ನೂ ಓದಿ: ದಲಿತ ಯುವಕನ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಬಂಧನ, ದೇವಸ್ಥಾನಕ್ಕೆ ಬೀಗ

Last Updated : Jan 10, 2024, 11:40 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.