ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಾಡು ಕೋಣಗಳ ಹಾವಳಿ ಹೆಚ್ಚಾಗಿದೆ. ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿರುವ ಕಾಡುಕೋಣಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿವೆ.
ಕಾಡು ಆನೆಗಳ ದಾಳಿಯಾಯ್ತು ಈಗ ಕಾಡುಕೋಣಗಳು ಊರು ಹೊಕ್ಕು ಜನರನ್ನು ಆತಂಕಕ್ಕೀಡು ಮಾಡಿವೆ. ಜಿಲ್ಲೆಯ ದತ್ತಪೀಠದ ತಿಪ್ಪೇನಹಳ್ಳಿ ಕಾಫಿ ಎಸ್ಟೇಟ್ ಒಳಗೆ 20ಕ್ಕೂ ಹೆಚ್ಚು ಕಾಡುಕೋಣಗಳು ಹಾದು ಹೋಗುವ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತದೆ. ಇನ್ನೂ ಕಾಫಿನಾಡು ಪ್ರಸಿದ್ಧ ಪ್ರವಾಸಿ ತಾಣಗಳಿಂದ ಕೂಡಿದ್ದು, ಸದ್ಯ ಪ್ರವಾಸಿಗರಲ್ಲಿ ಭಯಹುಟ್ಟಿಸಿದೆ.