ETV Bharat / state

ಚಿಕ್ಕಮಗಳೂರು: ಕಾಡು ಕೋಣ ದಾಳಿಗೆ ವ್ಯಕ್ತಿ ಬಲಿ - wild buffalo attack in Chikkamagaluru

ತೋಟಕ್ಕೆ ಹೋಗಿದ್ದಾಗ ಕಾಡು ಕೋಣ ದಾಳಿ ನಡೆಸಿದ್ದು ಸೋಮಶೇಖರ ಎಂಬವರು ಸ್ಥಳದಲ್ಲೇ ಮೃತಪಟ್ಟರು.

ಕಾಡು ಕೋಣ
ಕಾಡು ಕೋಣ
author img

By

Published : Dec 29, 2022, 3:55 PM IST

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಇತ್ತೀಚೆಗೆ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದೆ. ಇತ್ತೀಚೆಗೆ ಕಾಡಾನೆ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಇದರ ಬೆನ್ನಲೇ ಕಾಡುಕೋಣ ದಾಳಿಗೆ ಕಾಫಿ ಬೆಳೆಗಾರರೊಬ್ಬರು ಸಾವಿಗೀಡಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ತೋಟದೂರು ಸಮೀಪ ಇಂದು ಬೆಳಗ್ಗೆ 10:30 ರ ಸಮಯದಲ್ಲಿ ಘಟನೆ ಸಂಭವಿಸಿದೆ. ಕಳಿಹಿತ್ಲು ಬಳಿಯ ತೋಟಕ್ಕೆಂದು ಬಂದಿದ್ದಾಗ ಸೋಮಶೇಖರ (45) ಎಂಬವರು ಕಾಡು ಕೋಣ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಕಾಡು ಕೋಣ ಕೊಂಬಿನಿಂದ ತಿವಿದು ತೀವ್ರವಾಗಿ ಗಾಯಗೊಳಿಸಿದ್ದು, ರಕ್ತ ಸ್ರಾವದಿಂದಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೋಮಶೇಖರ್ ಜಯಪುರ ನಿವಾಸಿ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಅನುಮಾನಾಸ್ಪದವಾಗಿ ಕಾಡುಕೋಣ ಸಾವು

ಕಳಿಹಿತ್ಲು ಭಾಗದಲ್ಲಿ ಕಾಡುಪ್ರಾಣಿ ತೊಂದರೆ ಹೆಚ್ಚಿದ್ದು, ರೈತರ ಬೆಳೆಗೆ ಅಪಾರ ಹಾನಿಯುಂಟು ಮಾಡುತ್ತಿವೆ. ಶಾಶ್ವತ ಪರಿಹಾರಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮತ್ತೆ ಕಾಡುಕೋಣ ಪ್ರತ್ಯಕ್ಷ... ಭಯದ ನೆರಳಲ್ಲಿ ಮಲೆನಾಡಿನ ಜನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.