ETV Bharat / state

ವಿದ್ಯಾರ್ಥಿನಿ, ಶಿಕ್ಷಕಿಯರ ಜೊತೆ ಅಸಭ್ಯ ವರ್ತನೆ.. ಕ್ಯಾಬ್​ ಚಾಲಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಕಾಫಿನಾಡ ಜನ - ವಿದ್ಯಾರ್ಥಿನಿ ಶಿಕ್ಷಕಿಯರ ಜೊತೆ ಅಸಭ್ಯ ವರ್ತನೆ

ಶಾಲಾ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರ ಜೊತೆ ಅಸಭ್ಯ ವರ್ತನೆ ತೋರಿದ ಕ್ಯಾಬ್​ ಚಾಲಕನನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಥಳಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

Kn_ckm
ವಿದ್ಯಾರ್ಥಿನಿ ಶಿಕ್ಷರ ಜೊತೆ ಚಾಲಕನ ಅಸಭ್ಯ ವರ್ತನೆ
author img

By

Published : Nov 26, 2022, 12:30 PM IST

Updated : Nov 26, 2022, 1:33 PM IST

ಚಿಕ್ಕಮಗಳೂರು: ಕ್ಯಾಬ್ ಚಾಲಕನೊಬ್ಬ ವಿದ್ಯಾರ್ಥಿನಿ ಮತ್ತು ಶಿಕ್ಷಕಿಯರ ಜೊತೆ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆ ಗ್ರಾಮಸ್ಥರು ಥಳಿಸಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಿದ್ದರಹಳ್ಳಿಯಲ್ಲಿ ನಡೆದಿದೆ.

ಶಿಕ್ಷಕಿಯರನ್ನು ಶಾಲೆಗೆ ಬಿಡುವ ಮತ್ತು ಕರೆದುಕೊಂಡು ಬರುವ ಕೆಲಸವನ್ನು ಕ್ಯಾಬ್​ ಚಾಲಕ ಮಾಡುತ್ತಿದ್ದ. ಅಲ್ಲದೇ ಶಿಕ್ಷಕಿಯರನ್ನು ಶಾಲೆಗ ಬಿಟ್ಟ ನಂತರ ಅದೇ ಶಾಲೆಯ ಬಳಿಯೇ ಠಿಕಾಣಿ ಹೂಡುತ್ತಿದ್ದ ಎನ್ನಲಾಗ್ತಿದೆ.

ಚಾಲಕನು ಶಿಕ್ಷಕಿಯರು ಮತ್ತು ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ವಿಷಯವನ್ನು ವಿದ್ಯಾರ್ಥಿನಿಯರು ಗ್ರಾಮದ ಹಿರಿಯರಿಗೆ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಜನರು ಚಾಲಕನನ್ನು ವಿದ್ಯುತ್​ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.

ಬಳಿಕ ಚಾಲಕನ ವಿರುದ್ಧ ಸುಖರಾಯಪಟ್ಟಣದಲ್ಲಿ ಪೋಕ್ಸೋ ಕೇಸ್​ ದಾಖಲು ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಅತ್ಯಾಚಾರ ಯತ್ನ: ದೊಡ್ಡಬಳ್ಳಾಪುರದಲ್ಲಿ ವಿರೋಧ ವ್ಯಕ್ತಪಡಿಸಿದ ಮಹಿಳೆ ಮೇಲೆ ಪೈಶಾಚಿಕ ಕೃತ್ಯ

Last Updated : Nov 26, 2022, 1:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.