ಚಿಕ್ಕಮಗಳೂರು : ಹೊಸದಾಗಿ ಆರಂಭವಾಗಿರುವ ಬಾರ್ ಮುಚ್ಚಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲೆಯ ಕಡೂರು ತಾಲೂಕಿನ ಎಮ್ಮೆದೊಡ್ಡಿ ಸಮೀಪದ ಮುಸ್ಲಾಪುರ ಗ್ರಾಮದಲ್ಲಿ ನಿನ್ನೆ ಹೊಸದಾಗಿ ಬಾರ್ ಪ್ರಾರಂಭಿಸಲಾಗಿದೆ. ಅಷ್ಟೇ ಅಲ್ಲ, ಅದೇ ಮಾರ್ಗವಾಗಿ ಶಾಲೆ ಕೂಡ ಇದೆ. ಇದರಿಂದ ಸುತ್ತಮುತ್ತಲಿನ 20 ಹಳ್ಳಿಗಳಿಗೆ ತೊಂದರೆಯಾಗಲಿದೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟಿಸುತ್ತಿದ್ದಾರೆ.
ಈ ಭಾಗದಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರಿದ್ದು, ಎಮ್ಮೆದೊಡ್ಡಿ ಸುತ್ತಮುತ್ತ ಯಾವುದೇ ಬಾರ್ ಇರಲಿಲ್ಲ. ವಾರಕ್ಕೊಮ್ಮೆ ಸಂತೆಗೆಂದು ಕಡೂರಿಗೆ ಹೋದಾಗ ಕುಡಿದು ಬರುತ್ತಿದ್ದರು. ಈಗ ಇಲ್ಲೇ ಬಾರ್ ಆರಂಭವಾಗಿರೋದ್ರಿಂದ ದಿನ ಕುಡಿಯಲು ಆರಂಭಿಸುತ್ತಾರೆ. ದುಡಿದದ್ದನ್ನೆಲ್ಲ ಬಾರ್ಗೆ ಹಾಕಿದರೆ ಹೆಂಡತಿ-ಮಕ್ಕಳ ಹೊಟ್ಟೆ ತುಂಬೋದು ಹೇಗೆಂದು ಆಕ್ರೋಶ ಹೊರ ಹಾಕಿದರು.
ಓದಿ: ಅಧಿವೇಶನದ ಬಳಿಕ 1-5ನೇ ತರಗತಿ ಪುನಾರಂಭ ಕುರಿತು ಅಂತಿಮ ನಿರ್ಧಾರ: ಸಚಿವ ಬಿ.ಸಿ.ನಾಗೇಶ್