ETV Bharat / state

ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಗ್ರಾಮಸ್ಥರ ಆಕ್ರೋಶ! - villagers outraged against Shobha at Jambala village in Moodigere taluk

ಶಾಲಾ ಮಕ್ಕಳಿಗೆ ಆನ್​ಲೈನ್​ ಶಿಕ್ಷಣ ನಡೆಯುತ್ತಿದ್ದು, ಸರಿಯಾದ ನೆಟ್​ವರ್ಕ್​ ಇಲ್ಲದೆ ಸೂಕ್ತ ಶಿಕ್ಷಣ ದೊರಕುತ್ತಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಿ ಎಂದು ಗ್ರಾಮಸ್ಥರು ಸಂಸದೆ ಶೋಭಾ ಕರಂದ್ಲಾಜೆ ಬಳಿ ಮನವಿ ಮಾಡಿದಾಗ ಮಾತಿಗೆ ಮಾತು ಬೆಳೆದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.

villagers outraged against Shobha  at Jambala village in Moodigere taluk
ಪಂಚಾಯಿತಿ ಚುನಾವಣೆ ಪ್ರಚಾರಕ್ಕೆ ತೆರಳಿದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ದ ಗ್ರಾಮಸ್ಥರ ಕಿಡಿ
author img

By

Published : Dec 16, 2020, 4:10 PM IST

ಚಿಕ್ಕಮಗಳೂರು: ಗ್ರಾಮ ಪಂಚಾಯತ್​​ ಚುನಾವಣೆಯ ಪ್ರಚಾರಕ್ಕೆ ತೆರಳಿದ್ದ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾಂಬಳೆ ಗ್ರಾಮದ ಜನರೊಂದಿಗೆ ಮಾತನಾಡುತ್ತಿದ್ದ ಸಂಸದೆ ಶೋಭಾ ಕರಂದ್ಲಾಜೆ, ಮೊಬೈಲ್ ನೆಟ್​ವರ್ಕ್​ ಸಮಸ್ಯೆ ಬಗೆಹರಿಸುವ ಕುರಿತು ಗ್ರಾಮಸ್ಥರ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡುವಲ್ಲಿ ವಿಫಲರಾದಾಗ ರೊಚ್ಚಿಗೆದ್ದ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಗ್ರಾಮಸ್ಥರ ಕಿಡಿ

ಓದಿ: ಜೆಡಿಎಸ್​ ಎಂಬ ಮಗು ಮಿಠಾಯಿ ತೋರಿಸಿದವರ ಕಡೆ ಹೋಗುತ್ತೆ: ಹೆಚ್​.ವಿಶ್ವನಾಥ್

ಜೊತೆಗೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿಯನ್ನು ಗ್ರಾಮಸ್ಥರು ಪ್ರಶ್ನೆ ಮಾಡಿದ್ದು, ಈ ವೇಳೆ ಬಿಜೆಪಿ ಮುಖಂಡರು-ಸ್ಥಳೀಯರ ನಡುವೆ ಜಟಾಪಟಿ ನಡೆದಿದೆ. ಹಲವು ವರ್ಷಗಳಿಂದ ಕುದುರೆಮುಖ, ಜಾಂಬಳೆ, ಕೆಂಕನಕೊಂಡ, ಬಿಳಗಲ್, ನೆಲ್ಲಿಬೀಡಲ್ಲಿ ನೆಟ್​ವರ್ಕ್ ಸಮಸ್ಯೆ ಎದುರಾಗಿದೆ. ಶಾಲಾ ಮಕ್ಕಳಿಗೆ ಆನ್​​ಲೈನ್ ಶಿಕ್ಷಣ ನಡೆಯುತ್ತಿದ್ದು, ಸರಿಯಾದ ನೆಟ್​ವರ್ಕ್​ ಇಲ್ಲದೇ ಸರಿಯಾದ ಶಿಕ್ಷಣ ದೊರಕುತ್ತಿಲ್ಲ. ಈ ಸಮಸ್ಯೆ ಬಗೆಹರಿಸಿ ಎಂದು ಗ್ರಾಮಸ್ಥರು ಸಂಸದೆ ಬಳಿ ಮನವಿ ಮಾಡಿದಾಗ ಮಾತಿಗೆ ಮಾತು ಬೆಳೆದು ಈ ಘಟನೆ ನಡೆದಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.