ETV Bharat / state

Chikkamagaluru accident: ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ.. ಇಬ್ಬರು ಸ್ಥಳದಲ್ಲೇ ಸಾವು - ಕಾರು ಮತ್ತು ಬೈಕ್ ಡಿಕ್ಕಿ

ಚಿಕ್ಕಮಗಳೂರು ಜಿಲ್ಲೆಯ ಕಡೂರು ನಗರದಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Chikkamagaluru
ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ
author img

By

Published : Jul 15, 2023, 7:09 AM IST

Updated : Jul 15, 2023, 1:21 PM IST

ಕಡೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತ

ಚಿಕ್ಕಮಗಳೂರು : ಬೈಕ್ ಮತ್ತು ಕಾರಿನ ನಡುವಿನ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಿನ್ನೆ ರಾತ್ರಿ ಜಿಲ್ಲೆಯ ಕಡೂರು ನಗರದಲ್ಲಿ ನಡೆದಿದೆ. ಹೊಸದುರ್ಗ ತಾಲೂಕಿನ ಅಗಲಕೆರೆ ಗ್ರಾಮದ ಲೋಹಿತ್ (35), ನಾಗರಾಜ್ (40) ಮೃತರು. ಇವರಿಬ್ಬರೂ ಚಿಕ್ಕಮಗಳೂರು ಮಾರ್ಗದಿಂದ ಕಡೂರು ಪಟ್ಟಣದ ಕಡೆ ಬೈಕ್​ನಲ್ಲಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.

ರಭಸವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದ ಹಿನ್ನೆಲೆ ದ್ವಿಚಕ್ರ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡು, ಸ್ಥಳದಲ್ಲೇ ಹೊತ್ತಿ ಉರಿದಿದೆ. ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಕಡೂರು ಪೊಲೀಸ್ ಠಾಣೆಯ ಪಿಎಸ್​ಐ ಧನಂಜಯ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಸ್ತೆ ಅಪಘಾತದಿಂದಾಗಿ ಕೆಲ ಕಾಲ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿತ್ತು. ಘಟನೆ ಮನಗಂಡ ಪೊಲೀಸರು, ರಸ್ತೆ ಸಂಚಾರವನ್ನು ಸುಗಮಗೊಳಿಸಿದ್ದು, ಕಡೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.

ಕಂದಕಕ್ಕೆ ಬಿದ್ದ ಕಾರು: ಬೊಲೆರೋ ಕಾರೊಂದು ಆಳವಾದ ಕಂದಕಕ್ಕೆ ಬಿದ್ದ ಪರಿಣಾಮ ಐವರು ಸಾವನ್ನಪ್ಪಿದ್ದು, 4 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಕಳೆದ 2 ದಿನಗಳ ಹಿಂದೆ ಸಂಭವಿಸಿತ್ತು. ಗುರುವಾರ (ಜು. 13) ರಂದು ಇಲ್ಲಿನ ಕಮ್ರುನಾಗ್ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದಾಗ ತಡರಾತ್ರಿ ಈ ದುರ್ಘಟನೆ ಸಂಭವಿಸಿತ್ತು. ಮೃತರು ಸುಂದರನಗರ ನಿವಾಸಿಗಳಾದ ಲಾಲಾ ರಾಮ್ (50), ರೂಪ್ ಲಾಲ್ (55), ಸುನೀಲ್ ಕುಮಾರ್ (35), ಗೋಬಿಂದ್ ರಾಮ್ (60) ಹಾಗೂ ಮೋಹ್ನಾ (55) ಮತ್ತು ಅನಿಲ್ ದತ್, ಸಂಜೀವ್ ಕುಮಾರ್, ಕಿರ್ಪಾ ರಾಮ್ ಮತ್ತು ಕಮಲ್ ಕುಮಾರ್ ಎಂಬುವರು ಗಾಯಗೊಂಡಿದ್ದರು. ಇವರನ್ನು ನೆರ್​ಚೌಕ್​ ಮೆಡಿಕಲ್ ಕಾಲೇಜ್​ ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತಾ ಪೊಲೀಸರು ಮಾಹಿತಿ ನೀಡಿದ್ದರು.

ಇದನ್ನೂ ಓದಿ : ಪ್ರತ್ಯೇಕ ಘಟನೆ: ಕಂದಕಕ್ಕೆ ಬಿದ್ದ ಬೊಲೆರೋ, ಟ್ರಕ್.. ಎಂಟು ಮಂದಿ ದುರ್ಮರಣ

ಕಾಶ್ಮೀರದಲ್ಲಿ ಮೂವರು ಸಾವು : ಮತ್ತೊಂದೆಡೆ, ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಶುಕ್ರವಾರ (ನಿನ್ನೆ) ವಾಹನವೊಂದು ರಸ್ತೆಯಿಂದ ಸ್ಕಿಡ್ ಆಗಿ ಕಮರಿಗೆ ಉರುಳಿ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ. ನಿರ್ಮಾಣ ಹಂತದಲ್ಲಿರುವ ಕಿರು ಜಲ ವಿದ್ಯುತ್ ಯೋಜನೆಗೆ ಸೇರಿದ ಖಾಸಗಿ ವಾಹನ ಇದಾಗಿತ್ತು. ಜನರನ್ನು ಹೊತ್ತೊಯ್ಯುತ್ತಿದ್ದ ಟ್ರಕ್​ವೊಂದು ಕಿರು ಜಲ ವಿದ್ಯುತ್ ಯೋಜನೆ ಕಾಮಗಾರಿ ಸ್ಥಳದ ಕಡೆ ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ​ಕಮರಿಗೆ ಉರುಳಿದೆ. ಪರಿಣಾಮ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಚಾಲಕ ಬಾದಲ್ ಕುಮಾರ್, ಅಶ್ಫಾಕ್ ಹುಸೇನ್ ಮತ್ತು ಚಂಜಗು ರಾಮ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ : 400 ಅಡಿ ಆಳ ಕಂದಕಕ್ಕೆ ಬಿದ್ದ ಬಸ್: ಓರ್ವ ಮಹಿಳೆ ಸಾವು, 18 ಮಂದಿಗೆ ಗಾಯ

Last Updated : Jul 15, 2023, 1:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.