ಚಿಕ್ಕಮಗಳೂರು: ಬೈಕ್ ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ನಲ್ಲಿ ತೆರಳುತ್ತಿದ್ದ ಇಬ್ಬರು ಸ್ನೇಹಿತರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಚಿದಾನಂದ್ (28) ಮತ್ತು ಶೋಭಾ (30) ಮೃತರು. ಚಿದಾನಂದ್ ಚಿಕ್ಕಮಗಳೂರಿನ ಕೆ.ಆರ್ ಪೇಟೆ ನಿವಾಸಿಯಾಗಿದ್ದು, ಶೋಭಾ ಚಿಕ್ಕಮಗಳೂರಿನ ಟಿಪ್ಪು ನಗರ ನಿವಾಸಿಯಾಗಿದ್ದಾರೆ. ತರೀಕೆರೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಅರಮನೆ ಹೊಟೇಲ್ ಮುಂಭಾಗ ಈ ಅಪಘಾತ ಸಂಭವಿಸಿದೆ.
ತರೀಕೆರೆಯಿಂದ ಶಿವಮೊಗ್ಗದ ಕಡೆ ಕೆಎಸ್ಆರ್ಟಿಸಿ ಬಸ್ ಹೋಗುತ್ತಿತ್ತು. ಬೈಕ್ನಲ್ಲಿದ್ದ ಇಬ್ಬರು ಸ್ನೇಹಿತರು ತರೀಕೆರೆ ನಗರಕ್ಕೆ ಬರುವ ವೇಳೆ ಈ ದುರಂತ ನಡೆದಿದೆ. ಇಬ್ಬರು ಗಂಭೀರವಾಗಿ ಗಾಯಗೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.