ETV Bharat / state

ಅಭಿವೃದ್ದಿಗಾಗಿ ಮರಗಳ ಮಾರಣಹೋಮ: ಬೇರೆ ಗಿಡಗಳನ್ನ ಬೆಳೆಸಲು ಅರಣ್ಯ ಇಲಾಖೆ ಹಿಂದೇಟು..! - ರಣ್ಯ ಇಲಾಖೆಯ ಮರಗಳು

ಅಭಿವೃದ್ದಿ ಯೋಜನೆಗಳಿಗಾಗಿ ರಾಜ್ಯದಲ್ಲಿ ಅರಣ್ಯ ಇಲಾಖೆಯ ಮರಗಳನ್ನು ಕಡಿಯಲಾಗುತ್ತಿದೆ. ಆ ಮರಗಳ ಬದಲಾಗಿ ದುಪ್ಪಟ್ಟು ಮರಗಳನ್ನು ಬೆಳೆಸಬೇಕು ಎಂಬ ಕಾನೂನು ಇದೆ. ಇದೇ ರೀತಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮರಗಳನ್ನು ಕಡಿಯಲಾಗುತ್ತಿದೆ. ಆದರೆ, ಬೇರೆ ಗಿಡಗಳನ್ನು ಬೆಳೆಸಲು ಅರಣ್ಯ ಇಲಾಖೆ ಮುಂದಾಗುತ್ತಿಲ್ಲ.

Harvesting of trees for development projects
ಅಭಿವೃದ್ದಿ ಯೋಜನೆಗಳಿಗಾಗಿ ಮರಗಳ ಮಾರಣಹೋಮ
author img

By

Published : Oct 10, 2020, 5:46 PM IST

ಚಿಕ್ಕಮಗಳೂರು: ಅಭಿವೃದ್ಧಿ ಕೆಲಸಗಳಿಗಾಗಿ ಸಾವಿರಾರು ಮರಗಳನ್ನು ಕಡಿಯಲಾಗುತ್ತಿದ್ದು, ಜಿಲ್ಲೆಯ ಪ್ರಾದೇಶಿಕ ವಿಭಾಗದಿಂದ 96.61 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ ನಿರ್ಮಾಣ ಮಾಡಲು ಸುಮಾರು 5,746 ಮರಗಳ ಕಡಿಯಲು ಆದೇಶ ನೀಡಲಾಗಿದೆ.

ಈಗಾಗಲೇ ಹಂತ ಹಂತವಾಗಿ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಪ್ರಾಧಿಕಾರವು ಮರಗಳನ್ನು ಕಡಿಯಲು ಶುರು ಮಾಡಿದ್ದಾರೆ. ಪ್ರಾಧಿಕಾರದಿಂದ ರಾಜ್ಯ ಸರ್ಕಾರಕ್ಕೆ ಮರಗಳನ್ನು ಕಡಿದ ಬದಲಾಗಿ 1 ಕೋಟಿ 72 ಲಕ್ಷದ 38 ಸಾವಿರ ಹಣ ಹಾಗೂ ಒಂದು ಗಿಡದ ಬದಲಾಗಿ ಹತ್ತು ಗಿಡ ನೆಡುವುದಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಹಾಗೂ ಪ್ರತಿ ಕಿ.ಮೀ ಅರಣ್ಯ ಕರಣಕ್ಕೆ ಮೂರು ಲಕ್ಷದಂತೆ 1 ಕೋಟಿ 92 ಲಕ್ಷವನ್ನು ಸರ್ಕಾರಕ್ಕೆ ಜಮಾ ಮಾಡಲಾಗಿದೆ. ಈ ಜಮಾ ಮಾಡಿದ ಹಣದಲ್ಲಿ ಅರಣ್ಯ ಇಲಾಖೆ, ಸರ್ಕಾರಿ ಪ್ರದೇಶ ಅಥವಾ ಡೀಮ್ಡ್ ಫಾರೆಸ್ಟ್​​​ನಲ್ಲಿ ಅರಣ್ಯ ನಿರ್ಮಾಣ ಮಾಡಲು ಜಿಲ್ಲಾ ಅರಣ್ಯ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಅನುದಾನಕ್ಕಾಗಿ ಮನವಿ ಸಲ್ಲಿಕೆ ಮಾಡಲಾಗಿದ್ದು, ಸ್ಥಳಗಳ ಲಭ್ಯತೆ ಮೇರೆಗೆ ವಿವಿಧ ವಲಯಗಳಲ್ಲಿ ಸ್ಥಳಗಳನ್ನು ಗುರುತು ಮಾಡಲಾಗಿದೆ.

ಅಭಿವೃದ್ದಿ ಯೋಜನೆಗಳಿಗಾಗಿ ಮರಗಳ ಮಾರಣಹೋಮ

ಕಡೂರು ತಾಲೂಕಿನ ವಲಯದಲ್ಲಿ ಬೆಟ್ಟದ ಹಳ್ಳಿಯಿಂದ ಬಾಣಾವರದ ವರೆಗೂ, ಸಖರಾಯಪಟ್ಟಣದಿಂದ ಕಡೂರು ಹಾಗೂ ಕಡೂರಿನಿಂದ ಚಿಕ್ಕಮಗಳೂರು. ಈ ಮೂರು ಪ್ರದೇಶಗಳಲ್ಲಿ ಸ್ಥಳಗಳನ್ನು ಗುರುತು ಮಾಡಲಾಗಿದ್ದು, ಸಸ್ಯ ಕ್ಷೇತ್ರದಲ್ಲಿ ಎತ್ತರದ ಗಿಡಗಳು ಆಲ, ಅರಳಿ, ಗೋಣಿ, ಹುಣಸೆ, ಹಲಸು ಸೇರಿದಂತೆ ಇತರ ಮರಗಳನ್ನು ಬೆಳೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈ ಕುರಿತಾಗಿ ಉಪ ವಲಯ ಅರಣ್ಯಧಿಕಾರಿ ಜಗನ್ನಾಥ್ ಮಾತನಾಡಿದ್ದು, ಹೆಚ್ಚಿನ ಮರಗಳನ್ನು ಕಡಿದಾಗ ಪ್ರಾಕೃತಿಕ ಅಸಮತೋಲನ ಆಗುವುದು ಸಾಮಾನ್ಯ. ಆದರೆ, ಅಭಿವೃದ್ದಿ ಸಂರಕ್ಷಣೆ ಎಂಬ ವಿಚಾರ ಬಂದಾಗ ಅಭಿವೃದ್ದಿಗೆ ಒತ್ತು ನೀಡಬೇಕಾಗುತ್ತದೆ. ಕೂಡಲೇ ಮತ್ತೆ ಗಿಡಗಳನ್ನು ನೆಡುವುದರ ಮೂಲಕ ಅದರ ಸಮತೋಲನ ಕಾಪಾಡುತ್ತೇವೆ ಎಂದು ತಿಳಿಸಿದ್ದಾರೆ. ಈ ವರ್ಷವೇ ಈ ಕೆಲಸ ಮಾಡಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇವೆ. ಆದರೆ, ಅನುದಾನದ ಕೊರತೆಯಿಂದ ಮಾಡಲು ಸಾಧ್ಯವಾಗಿಲ್ಲ. ಆದರೇ ಮುಂದಿನ ಸಾಲಿನಲ್ಲಿ ಈ ಕೆಲಸ ಮಾಡಿ ಮುಗಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ಈ ಕುರಿತು ಪರಿಸರ ತಜ್ಞ ಗಿರಿಜಾ ಶಂಕರ್ ಮಾತನಾಡಿದ್ದು, ಈ ವಿಚಾರದಲ್ಲಿ ಯಾವುದೇ ದುಡ್ಡಿನ ಕೊರತೆಯಿಲ್ಲ. ರಸ್ತೆಯ ಪಕ್ಕದಲ್ಲಿಯೇ ಮರಗಳನ್ನು ಬೆಳೆಸಬೇಕು. ಇದರಿಂದ ಜನರಿಗೆ ಹಾಗೂ ಪ್ರಾಣಿಗಳಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದ್ದಾರೆ. ರಸ್ತೆ ಅಗಲ ಆಗಿರುವ ಜಾಗದಲ್ಲಿ ಕೂಡಲೇ ಅರಣ್ಯ ಇಲಾಖೆ ಮರಗಳನ್ನು ನೆಡಬೇಕು. ಇಲ್ಲಿ ಅರಣ್ಯ ಇಲಾಖೆಯ ಮೇಲೆ ದೊಡ್ಡ ಜವಾದ್ದಾರಿ ಇದೆ. ಇದನ್ನು ಸರಿಯಾಗಿ ಪಾಲಿಸಬೇಕು ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.