ಚಿಕ್ಕಮಗಳೂರು: ಕಳೆದ 4 ದಿನಗಳಿಂದ 6ರನೇ ವೇತನ ಜಾರಿಗೆ ಆಗ್ರಹಿಸಿ ಕೆಎಸ್ಆರ್ಟಿಸಿ ನೌಕರರು ಹಮ್ಮಿಕೊಂಡಿರುವ ಮುಷ್ಕರ ಹಿನ್ನೆಲೆ ಚಿಕ್ಕಮಗಳೂರು ವಿಭಾಗದ 25 ಮಂದಿ ಸಾರಿಗೆ ನೌಕರರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
21 ಚಾಲಕ ಹಾಗೂ ನಾಲ್ವರು ನಿರ್ವಾಹಕರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದ್ದು, ಚಿಕ್ಕಮಗಳೂರು ವಿಭಾಗದಿಂದ ಪುತ್ತೂರು ವಿಭಾಗಕ್ಕೆ ಈ ನೌಕರರನ್ನು ವರ್ಗಾವಣೆ ಮಾಡಲಾಗಿದೆ. ಇಬ್ಬರು ಕಿರಿಯ ಸಹಾಯಕರು, ಇಬ್ಬರು ಮೆಕ್ಯಾನಿಕ್ಗಳ ವರ್ಗಾವಣೆ ಸಹ ಆಗಿದ್ದು, ಕೆಎಸ್ಆರ್ಟಿಸಿ ಮುಖ್ಯ ಸಂಚಾಲಕರು ಈ ಆದೇಶ ಹೊರಡಿಸಿದ್ದಾರೆ.