ETV Bharat / state

ಚಿಕ್ಕಮಗಳೂರಿಗೆ ಪ್ರವಾಸಿಗರ ಲಗ್ಗೆ : ಎಲ್ಲೆಲ್ಲೂ ಜನ, ಫಾಲ್ಸ್​ಗಳಲ್ಲಿ ಮೋಜು-ಮಸ್ತಿ - ಚಿಕ್ಕಮಗಳೂರು ಫಾಲ್ಸ್​ಗಳು

ಕ್ಷಣ- ಕ್ಷಣಕ್ಕೂ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ರಸ್ತೆ ಸಂಚಾರದಲ್ಲಿ ಅಡಚಣೆ ಉಂಟಾಗುತ್ತಿದೆ. ಮಂಜು ಮುಸುಕಿದ ವಾತಾವರಣ ಹಾಗೂ ನಿರಂತರ ಸುರಿಯುತ್ತಿರುವ ಮಳೆಗೆ, ಮಲೆನಾಡಿನ ಸೌಂದರ್ಯ ನೂರ್ಮಡಿಯಾಗಿದ್ದು, ಪ್ರವಾಸಿಗರ ಮನಸೂರೆಗೊಳ್ಳುತ್ತಿದೆ..

chikmagalore
ಪ್ರವಾಸಿಗರ ಸಂಖ್ಯೆ ಹೆಚ್ಚಳ
author img

By

Published : Jul 12, 2021, 3:10 PM IST

ಚಿಕ್ಕಮಗಳೂರು : ಕೊರೊನಾ ಎರಡನೇ ಅಲೆ ಹಿನ್ನೆಲೆ ಹೇರಿದ್ದ ಲಾಕ್​ಡೌನ್​ ತೆರವುಗೊಂಡಿದ್ದೇ ತಡ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗ್ತಿದೆ. ಕೊರೊನಾ ಕಾಟದಿಂದ ಬೇಸತ್ತಿದ್ದ ಜನ್ರು ರಿಲ್ಯಾಕ್ಸ್​​ಗಾಗಿ ಚಿಕ್ಕಮಗಳೂರು ಜಿಲ್ಲೆಗೆ ಲಗ್ಗೆ ಇಡುತ್ತಿದ್ದು, ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಪ್ರವಾಸಿಗರು ದಂಡು-ದಂಡಾಗಿ ಕಾಣುತ್ತಿದ್ದಾರೆ.

ಪ್ರವಾಸಿಗರ ಸಂಖ್ಯೆ ಹೆಚ್ಚಳ

ಈ ಭಾಗದಲ್ಲಿ ಪ್ರಕೃತಿ ಸೌಂದರ್ಯ ಅನಾವರಣಗೊಂಡಿದೆ. ಹಚ್ಚಹಸುರಿನ ಬೆಟ್ಟ-ಗುಡ್ಡಗಳು ಹಾಗೂ ರಸ್ತೆ ಯುದ್ದಕ್ಕೂ ಸುರಿಯುವ ಜಲಪಾತಗಳು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿವೆ. ದಾರಿ ಮಧ್ಯೆ ಸಿಗುವ ಫಾಲ್ಸ್​ಗಳ ಬಳಿ ಪ್ರವಾಸಿಗರು ಕಿಕ್ಕಿರಿದು ಸೇರಿದ್ದಾರೆ.

ಯಾವುದೇ ಕೊರೊನಾ ನಿಯಮವನ್ನೂ ಪಾಲಿಸದೇ ಮೈಮರೆತು ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದು, ಮೊಬೈಲ್​ನಲ್ಲಿ ಸೆಲ್ಫಿ ತೆಗೆದುಕೊಳ್ಳುವಲ್ಲಿ ಮುಳುಗಿದ್ದಾರೆ. ಕೆಲವರು ಬಂಡೆ ಬಂಡೆಗಳ ಮೇಲೆ ಹತ್ತಿ ಫೋಟೋ ತೆಗೆಸಿಕೊಳ್ಳಲು ಮುಂದಾಗುತ್ತಿದ್ದು, ಇದು ಅಪಾಯಕ್ಕೆ ದಾರಿ ಮಾಡಿಕೊಟ್ಟಂತಾಗಿದೆ.

ಕ್ಷಣ- ಕ್ಷಣಕ್ಕೂ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ರಸ್ತೆ ಸಂಚಾರದಲ್ಲಿ ಅಡಚಣೆ ಉಂಟಾಗುತ್ತಿದೆ. ಮಂಜು ಮುಸುಕಿದ ವಾತಾವರಣ ಹಾಗೂ ನಿರಂತರ ಸುರಿಯುತ್ತಿರುವ ಮಳೆಗೆ, ಮಲೆನಾಡಿನ ಸೌಂದರ್ಯ ನೂರ್ಮಡಿಯಾಗಿದ್ದು, ಪ್ರವಾಸಿಗರ ಮನಸೂರೆಗೊಳ್ಳುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.