ETV Bharat / state

ಆಯುಧ ಪೂಜೆಯಂದೇ ನೀರುಪಾಲಾದ ಚಿಕ್ಕಮಗಳೂರಿನ ಮೂವರು ಬಾಲಕರು! - ಮೂವರು ಬಾಲಕರು ನೀರು ಪಾಲು

ಆಯುಧ ಪೂಜೆಗೆಂದು ಕೆರೆಯಲ್ಲಿ ಸೈಕಲ್​ಗಳನ್ನ ತೊಳೆದು ಈಜಲು ಹೋದ ಮೂವರು ಬಾಲಕರು ನೀರಿನಲ್ಲಿ ಮುಳಗಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬಿಳೇಕಲ್ಲಳ್ಳಿ ಗ್ರಾಮದ ಕಂಚಿಕಟ್ಟೆಯಲ್ಲಿ ನಡೆದಿದೆ.

ಬಾಲಕರು ನೀರು ಪಾಲು
author img

By

Published : Oct 8, 2019, 10:59 AM IST

Updated : Oct 8, 2019, 11:21 AM IST

ಚಿಕ್ಕಮಗಳೂರು: ಆಯುಧ ಪೂಜೆಗೆ ಎಂದು ಕೆರೆಯಲ್ಲಿ ಸೈಕಲ್​ಗಳನ್ನ ತೊಳೆದು ಈಜಲು ಹೋದ ಮೂವರು ಬಾಲಕರು ನೀರಿನಲ್ಲಿ ಮುಳಗಿ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಆಯುಧ ಪೂಜೆಯಂದೇ ನೀರುಪಾಲಾದ ಚಿಕ್ಕಮಗಳೂರಿನ ಮೂವರು ಬಾಲಕರು!

ಮುರುಳಿ‌ (15), ಜೀವಿತ್ (14) ಹಾಗೂ ಚಿರಾಗ್ (15) ಮೃತ ಬಾಲಕರು. ಚಿಕ್ಕಮಗಳೂರು ತಾಲೂಕಿನ ಬಿಳೇಕಲ್ಲಳ್ಳಿ ಗ್ರಾಮದ ಕಂಚಿಕಟ್ಟೆ ಕೆರೆಯಲ್ಲಿ ಘಟನೆ ನಡೆದಿದೆ. ಮುರುಳಿ ಹಾಗೂ ಜೀವಿತ್ ಮೃತ ದೇಹ ಪತ್ತೆಯಾಗಿದ್ದು, ಚಿರಾಗ್ ಮೃತ ದೇಹಕ್ಕಾಗಿ ಪೊಲೀಸರು ಹಾಗೂ ಸ್ಥಳೀಯರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Intro:Kn_ckm_01_Neeru palu_av_7202347Body:ಚಿಕ್ಕಮಗಳೂರು : -

ಚಿಕ್ಕಮಗಳೂರಿನಲ್ಲಿ ಮೂವರು ಬಾಲಕರು ನೀರುಪಾಲು ಆಗಿರುವ ಘಟನೆ ನಡೆದಿದೆ. ಆಯುಧ ಪೂಜೆ ಸಂಭ್ರಮದಲ್ಲಿ ಈಜಲು ತೆರಳಿದ ಮೂವರು ಬಾಲಕರು ನೀರಿನಲ್ಲಿ ಮುಳಗಿ ಸಾವನಪ್ಪಿದು ಸೈಕಲ್‌ ಗಳನ್ನ ತೊಳೆದು, ಕೆರೆಯಲ್ಲಿ ಈಜಲು ಹೋದಾಗ ಈ ಘಟನೆ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಬಿಳೇಕಲ್ಲಳ್ಳಿ ಗ್ರಾಮದ ಕಂಚಿಕಟ್ಟೆ ಕೆರೆಯಲ್ಲಿ ಘಟನೆ ನಡೆದಿದ್ದು ಮೃತ ಬಾಲಕರು ಹೌಸಿಂಗ್ ಬೋರ್ಡ್ ನಿವಾಸಿಗಳಗಿದ್ದು ನಿನ್ನೆ ಸಂಜೆ ಕೆರೆಯಲ್ಲಿ ಈಜಲು ಮೂರು ಜನ ಬಾಲಕರು ಹೋಗಿದ್ದರು. ಇಬ್ಬರ ಮೃತ ದೇಹ ಪತ್ತೆಯಾಗಿದ್ದು ಇನ್ನೊಬ್ಬ ಮೃತ ದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಮುರುಳಿ‌ (15) ಜೀವಿತ್ (14) ಮೃತ ದೇಹ ಪತ್ತೆ ಯಾಗಿದ್ದು ಚಿರಾಗ್ (15) ಮೃತ ದೇಹಕ್ಕಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಪೊಲೀಸರು ಹಾಗೂ ಸ್ಥಳೀಯರಿಂದ ಹುಡುಕಾಟ ನಡೆಯುತ್ತಿದ್ದು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಕೊಂಡಿದ್ದಾರೆ....

Conclusion:ರಾಜಕುಮಾರ್....
ಈಟಿವಿ ಭಾರತ್....
ಚಿಕ್ಕಮಗಳೂರು....
Last Updated : Oct 8, 2019, 11:21 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.