ETV Bharat / state

ಅವರದ್ದು ತಂದೆ-ಮಕ್ಕಳ ಸಂಬಂಧವಲ್ಲ, ಪರಸ್ಪರರನ್ನು ಮುಗಿಸುವ ರಾಜಕೀಯ ದುಷ್ಟಕೂಟ: ಸಿಟಿ ರವಿ - ಸಚಿವ ಸಂಪುಟ ವಿಸ್ತರಣೆ

ಕುಮಾರಸ್ವಾಮಿ, ದೇವೇಗೌಡ ಅವರ ಸಂಬಂಧ ತಂದೆ ಮಕ್ಕಳಂತೆ ಇರಲಿಲ್ಲ. ಪರಸ್ಪರರನ್ನು ಮುಗಿಸಲು ರಚಿಸಿಕೊಂಡ ರಾಜಕೀಯ ದುಷ್ಟಕೂಟ ಎಂಬಂತಿದೆ ಎಂದು ಸಚಿವ ಸಿ.ಟಿ.ರವಿ ಟೀಕಿಸಿದ್ದಾರೆ

they wanted to finish other parties off politically
author img

By

Published : Aug 26, 2019, 6:45 PM IST

ಚಿಕ್ಕಮಗಳೂರು: ಜೆಡಿಎಸ್ ಮತ್ತು ಕಾಂಗ್ರೆಸ್​ನದು ವಿಶ್ವಾಸದ ಮೈತ್ರಿ ಆಗಿರಲಿಲ್ಲ. ಈ ಹಿಂದೆ ಬಿಜೆಪಿ ಮುಗಿಸಲು ರಚಿಸಿದ ರಾಜಕೀಯ ಸಂಚಿನ ಕೂಟ. ಇದು ಆರೋಪ ಅಲ್ಲ. ಈಗ ಸತ್ಯ ಏನೆಂಬುದು ಸಾಬೀತಾಗಿದೆ ಎಂದು ಸಚಿವ ಸಿ.ಟಿ.ರವಿ ಆರೋಪಿಸಿದರು.

ಕರಗಡ ನೀರಾವರಿ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿ, ದೇವೇಗೌಡ ಅವರ ಸಂಬಂಧ ತಂದೆ ಮಕ್ಕಳಂತೆ ಇರಲಿಲ್ಲ. ಪರಸ್ಪರರನ್ನು ಮುಗಿಸಲು ರಚಿಸಿಕೊಂಡ ರಾಜಕೀಯ ದುಷ್ಟಕೂಟ ಎಂಬಂತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಸಚಿವ ಸಿ ಟಿ ರವಿ

ಅತೃಪ್ತರ ಇಂದಿನ ಪರಿಸ್ಥಿಗೆ ಸಭಾಧ್ಯಕ್ಷ ರಮೇಶ್ ಕುಮಾರ್ ಕಾರಣ. ಅನರ್ಹರಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಶೀಘ್ರದಲ್ಲೇ​ ತೀರ್ಪು ಹೊರ ಬರಲಿದೆ. ಬಳಿಕ ಮುಂದಿನ ನಡೆಯ ಕುರಿತು ಚರ್ಚಿಸಲಾಗುತ್ತದೆ. ಬಿಜೆಪಿ ಕೇಡರ್ ಬೇಸ್ಡ್ ಪಾರ್ಟಿಯಾಗಿದ್ದು, ಚುನಾವಣೆ ಬಗ್ಗೆ ಆತಂಕ ಇಲ್ಲ. ಸರ್ಕಾರ ಇರುವವರೆಗೂ ಉತ್ತಮ ಆಡಳಿತ ನೀಡುತ್ತೇವೆ ಎಂದು ಭರವಸೆ ನೀಡಿದರು.

ಖಾತೆ ಹಂಚಿಕೆ‌ ವಿಚಾರದಲ್ಲಿ ನಾನು ಮಂತ್ರಿ ಸ್ಥಾನವನ್ನೇ ಬಯಸಿರಲಿಲ್ಲ. ಹಾಗಾಗಿ ಇದೇ ಖಾತೆ ಬೇಕು ಬೇಕು ಎಂದೂ ಕೇಳುವುದಿಲ್ಲ, ಕೊಟ್ಟಿದ್ದನ್ನೂ ಸ್ವೀಕರಿಸುತ್ತೇನೆ ಎಂದರು.

Intro:Kn_Ckm_04_Minister Ct Ravi_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ಕರಗಡ ನೀರಾವರಿ ಕಾಮಗಾರಿ ವೀಕ್ಷಣೆ ಮಾಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸಿ ಟಿ ರವಿ ಮೈತ್ರಿ ಸರ್ಕಾರದ ಘಟಾನುಘಟಿ ನಾಯಕರ ವಾಗ್ವಾದ ವಿಚಾರವಾಗಿ ಎಚ್ ಡಿ ಕೆ, ಸಿದ್ದರಾಮಯ್ಯ ಗೆ ಸಚಿವ ಸಿ ಟಿ ರವಿ ಟಾಂಗ್ ನೀಡಿದ್ದಾರೆ. ಅವರದ್ದು ವಿಶ್ವಾಸದ ಮೈತ್ರಿ ಅಲ್ಲ. ಈ ಹಿಂದೆ ಬಿಜೆಪಿಯನ್ನು ಮುಗಿಸಲು ಮಾತ್ರ ರಚಿಸಿದ ರಾಜಕೀಯ ಸಂಚಿನ ಕೂಟವಾಗಿದ್ದು ಇದು ಆರೋಪ ಅಲ್ಲ. ಈಗ ಸತ್ಯ ಎಂಬುದು ಸಾಭೀತಾಗಿದೆ. ಇವರದ್ದು ತಂದೆ ಮಕ್ಕಳ ಸಂಬಂಧ ಅಲ್ಲ ಇದು ಪರಸ್ಪರರನ್ನು ಮುಗಿಸಲು ರಚಿಸಿಕೊಂಡ ರಾಜಕೀಯ ದುಷ್ಟಕೂಟ ಎಂದೂ ಹೇಳಿದರು. ಅತೃಪ್ತರ ಇವತ್ತಿನ ಪರಿಸ್ಥಿಗೆ ಹಿಂದಿನ ಸಭಾಧ್ಯಕ್ಷರು ರಮೇಶ್ ಕುಮಾರ್ ಅವರೇ ಕಾರಣ. ಈ ಬಗ್ಗೆ ತೀರ್ಮಾನ ಕೊಡಬೇಕಾಗಿರುವುದು ಸರ್ವೋಚ್ಛ ನ್ಯಾಯಾಲಯ. ನ್ಯಾಯಾಲಯ ಕೊಡುವ ತೀರ್ಪಿನ ಮೇಲೆ ಮುಂದೆ ತೀರ್ಮಾನ ತಗೆದು ಕೊಳ್ಳಬೇಕಾಗುತ್ತದೆ. ಬಿಜೆಪಿ ಕೇಡರ್ ಬೇಸ್ಡ್ ಪಾರ್ಟಿಯಾಗಿದ್ದು ಚುನಾವಣೆ ಬಗ್ಗೆ ನಮಗೆ ಯಾವುದೇ ಹೆದರಿಕೆ ಇಲ್ಲ. ಸರ್ಕಾರ ಎಷ್ಟು ದಿನ ಇರುತ್ತದೆಯೋ ಅಷ್ಟು ದಿನ‌ ಒಳ್ಳೆ ಕೆಲಸ ಮಾಡುತ್ತೇವೆ. ನಮಗೆ ಚುನಾವಣೆ ಅಥವಾ ಸರ್ಕಾರದ ಅಳಿವು ಉಳಿವಿನ ಬಗ್ಗೆ ಆತಂಕ ಇಲ್ಲ. ಖಾತೆ ಹಂಚಿಕೆ‌ ವಿಚಾರವಾಗಿ ನಾನು ಮಂತ್ರಿ ಸ್ಥಾನವನ್ನೇ ಬಯಸಿರಲಿಲ್ಲ ಹಾಗಾಗಿ ಇದೇ ಖಾತೆ ಬೇಕು ಅನ್ನೋ ಬೇಡಿಕೆ ಇಲ್ಲ ಯಾವ ಖಾತೆಯನ್ನು ನೀಡಿದರೂ ನಾವೇ ಕೆಲಸ ಮಾಡಬೇಕು ಎಂದೂ ಚಿಕ್ಕಮಗಳೂರಿನಲ್ಲಿ ಸಚಿವ ಸಿ ಟಿ ರವಿ ಹೇಳಿದರು......

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು.....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.