ETV Bharat / state

ಚುರ್ಚೆಗುಡ್ಡ: ಒಂದೇ ವಾರದಲ್ಲಿ 50ಕ್ಕೂ ಹೆಚ್ಚು ಶ್ರೀಗಂಧ ಮರ ಕಳ್ಳತನ

author img

By

Published : Mar 25, 2021, 7:36 PM IST

ಚಿಕ್ಕಮಗಳೂರು-ಕಡೂರು ಹೆದ್ದಾರಿ ಬದಿಯ ಚುರ್ಚೆಗುಡ್ಡದಲ್ಲಿರುವ ಶ್ರೀಗಂಧ ಮರಗಳು ಕಳ್ಳರ ಪಾಲಾಗುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Theft of sandalwood trees in Chikmagalur
ಮರಗಳ್ಳರ ವಿರುದ್ಧ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ

ಚಿಕ್ಕಮಗಳೂರು : ತಾಲೂಕಿನ ಸಖರಾಯಪಟ್ಟಣದ ಚಿಕ್ಕಮಗಳೂರು-ಕಡೂರು ಹೆದ್ದಾರಿ ಪಕ್ಕದಲ್ಲಿರುವ ಚುರ್ಚೆಗುಡ್ಡದಲ್ಲಿರುವ ಶ್ರೀಗಂಧದ ಮರಗಳ ಮೇಲೆ ಮರಗಳ್ಳರ ಕಣ್ಣು ಬಿದ್ದಿದೆ. ಒಂದು ವಾರದಲ್ಲಿ 50ಕ್ಕೂ ಹೆಚ್ಚು ಗಂಧದ ಮರಗಳು ಕಳ್ಳರ ಪಾಲಾಗಿವೆ.

ಚುರ್ಚೆಗುಡ್ಡ ಸುಮಾರು 10 ಸಾವಿರ ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಇಲ್ಲಿ ಸ್ವಾಭಾವಿಕವಾಗಿ ಬೆಳೆದಿರುವ ಶ್ರೀಗಂಧದ ಮರಗಳ ಮೇಲೆ ಕಣ್ಣು ಹಾಕಿರುವ ಕಳ್ಳರು, ಮರಗಳನ್ನು ಕಡಿದು ಎಸ್ಕೇಪ್ ಆಗ್ತಿದ್ದಾರೆ. ಮರಗಳ್ಳರ ಗ್ಯಾಂಗ್, ಮರ ಕಡಿಯುವ ಮುನ್ನ ಕಾಡಿನ ಯಾವುದಾದರು ಒಂದು ಭಾಗಕ್ಕೆ ಬೆಂಕಿಯಟ್ಟು, ಇನ್ನೊಂದು ಭಾಗದಲ್ಲಿ ಸಲೀಸಾಗಿ ಮರಗಳ್ಳತನ ಮಾಡುತ್ತಿದ್ದಾರೆ. ಈ ಮೂಲಕ ಅರಣ್ಯ ಅಧಿಕಾರಿಗಳ ದಿಕ್ಕು ತಪ್ಪಿಸಲಾಗ್ತಿದೆ.

ಮರಗಳ್ಳರ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರ ಆಗ್ರಹ

ಇದನ್ನೂ ಓದಿ : ಗುಡಿಸಲಿಗೆ ಬೆಂಕಿ : ಐದು ಲಕ್ಷ ರೂ. ಹಣ, ಚಿನ್ನಾಭರಣ ಕಣ್ಣೆದುರೇ ಸುಟ್ಟು ಕರಕಲು!

ಶ್ರೀಗಂಧ ಮರಗಳನ್ನು ಕಡಿಯುವ ಕಳ್ಳರು, ಅವುಗಳನ್ನು ಕೇರಳ, ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಹೇಳಲಾಗ್ತಿದೆ. ತಮಿಳುನಾಡಿನಿಂದ ಬರುವ ಇವರು ಮರಗಳನ್ನು ಕಡಿಯುತ್ತಿದ್ದಾರೆ ಎಂಬ ಮಾಹಿತಿ ಇದ್ದು, ಕೆಲ ಸ್ಥಳೀಯರು ಸಾಥ್ ನೀಡುತ್ತಿದ್ದಾರೆ ಎಂದು ಹೇಳಲಾಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.