ETV Bharat / state

ಚಿಕ್ಕಮಗಳೂರಿನಲ್ಲಿ ಶ್ರೀಗಂಧದ ಮರಗಳು ಕಣ್ಮರೆ: ಕಣ್ಮುಚ್ಚಿ ಕುಳಿತಿದೆಯೇ ಅರಣ್ಯ ಇಲಾಖೆ?

ಜಿಲ್ಲೆಯ ಚುರ್ಚೆ ಗುಡ್ಡದಲ್ಲಿ ನೈಸರ್ಗಿಕವಾಗಿ ಸಾವಿರಾರು ಸಂಖ್ಯೆಯಲ್ಲಿ ಶ್ರೀಗಂಧದ ಮರಗಳು ಬೆಳೆದಿವೆ. ಆದ್ರೆ, ಇಲ್ಲಿ ರಾತ್ರೋ ರಾತ್ರಿ ಗಿಡಗಳು ಕಣ್ಮರೆ ಆಗುತ್ತಿವೆ.

ರಾತ್ರೋ ರಾತ್ರಿ ಶ್ರೀಗಂಧ ಗಿಡಗಳ ಕಣ್ಮರೆ.
author img

By

Published : Jul 13, 2019, 9:05 PM IST

Updated : Jul 13, 2019, 9:10 PM IST

ಚಿಕ್ಕಮಗಳೂರು : ನಗರದ ಹೊರವಲಯದ ಚುರ್ಚೆ ಗುಡ್ಡದಲ್ಲಿ ನೈಸರ್ಗಿಕವಾಗಿ ಸಾವಿರಾರು ಸಂಖ್ಯೆಯಲ್ಲಿದ್ದ ಶ್ರೀಗಂಧದ ಮರಗಳು ರಾತ್ರೋರಾತ್ರಿ ಕಳ್ಳರ ಪಾಲಾಗುತ್ತಿವೆ.

ಚಿಕ್ಕಮಗಳೂರು ಜಿಲ್ಲೆಯ ಹೊರವಲಯದಲ್ಲಿರುವ ಚುರ್ಚೆ ಗುಡ್ಡ

ಕರ್ನಾಟಕದ ಶ್ರೀಗಂಧಕ್ಕೆ ಜಗತ್ತಿನೆಲ್ಲೆಡೆಯಿಂದ ಬೇಡಿಕೆ ಇದೆ. ದೇಶದಲ್ಲಿಯೇ ಅತಿ ಹೆಚ್ಚು ಶ್ರೀಗಂಧ ಬೆಳೆಯುವ ರಾಜ್ಯ ಕರ್ನಾಟಕ. ಚಿಕ್ಕಮಗಳೂರು ಜಿಲ್ಲೆ ಶ್ರೀಗಂಧದ ಮರಗಳಿಗೂ ಹೆಸರುವಾಸಿಯಾದ ಜಿಲ್ಲೆ. ಇಲ್ಲಿನ ಚುರ್ಚೆಗುಡ್ಡದಲ್ಲಿ ನೈಸರ್ಗಿಕವಾಗಿ ಸಾವಿರಾರು ಸಂಖ್ಯೆಯಲ್ಲಿ ಶ್ರೀಗಂಧ ಮರಗಳನ್ನು ಬೆಳೆಯಲಾಗಿದೆ. ಆದ್ರೆ, ಈ ಗುಡ್ಡಕ್ಕೆ ರಾತ್ರೋ ರಾತ್ರಿ ದಾಂಗುಡಿ ಇಡುವ ಕಳ್ಳರು ಶ್ರೀಗಂಧದ ಮರಗಳನ್ನು ಕಡಿದು ಸಾಗಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಶ್ರೀಗಂಧ ಬೆಳೆಯುವುದಕ್ಕಾಗಿ ಮತ್ತು ಅದರ ಪಾಲನೆ ಪೋಷಣೆಗಾಗಿ "ಸಿರಿಗಂಧ" ಎಂಬ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಅದಕ್ಕಾಗಿಯೇ ಕೋಟ್ಯಂತರ ರೂಪಾಯಿ ಹಣವನ್ನು ಅರಣ್ಯ ಇಲಾಖೆ ವೆಚ್ಚ ಮಾಡುತ್ತಿದೆ. ಆದರೆ ಅದರ ಪಾಲನೆ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಅರಣ್ಯ ಇಲಾಖೆಯಿಂದ ಆಗುತ್ತಿಲ್ಲ. ಸುವಾಸನೆಭರಿತ ಶ್ರೀಗಂಧದ ಚಕ್ಕೆಗಾಗಿ ಕಳ್ಳರು ಪುಟ್ಟಪುಟ್ಟ ಮರಗಳಿಗೆ ಕೊಡಲಿ ಪೆಟ್ಟು ಹಾಕುತ್ತಿದ್ದಾರೆ. ಈ ಮೂಲಕ ಅಕ್ರಮ ಅವ್ಯಾಹತವಾಗಿ ನಡೆಯುತ್ತಿದೆ.

ಚಿಕ್ಕಮಗಳೂರಿನಲ್ಲಿ ಇರುವ ಲಕ್ಷಾಂತರ ಶ್ರೀಗಂಧದ ಗಿಡಗಳ ಪೋಷಣೆ, ಉಳಿಸಿಕೊಳ್ಳುವ ಜವಾಬ್ದಾರಿ ಹಾಗೂ ಹೊಣೆ ಎಲ್ಲರ ಮೇಲೂ ಇದೆ. ಶ್ರೀಗಂಧದ ಗಿಡಗಳ ರಕ್ಷಣೆಗೆ ಅರಣ್ಯ ಇಲಾಖೆ ಪ್ರತಿದಿನ ಗಸ್ತು ತಿರುಗಿ ಕಳ್ಳತನ ತೆಡೆಯಲು ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕಿದೆ.

Intro:kn_ckm_01_Sandal_pkg_7202347

Body:

ಚಿಕ್ಕಮಗಳೂರು :-

ಕರ್ನಾಟಕಕ್ಕೆ ಶ್ರೀಗಂಧದ ನಾಡು ಚೆಂದದ ಬೀಡು ಎಂಬ ಮಾತಿದೆ. ಒಂದು ಕಾಲದಲ್ಲಿ ಶಶ್ರೀಗಂಧ ಬೆಳೆಯೋದರಲ್ಲಿ ಕರ್ನಾಟಕ ಮೊದಲ ಸ್ಥಾನದಲಿತ್ತು. ಅದೇ ನಿಟ್ಟಿನಲ್ಲಿ ಚಿಕ್ಕಮಗಳೂರಿನಲ್ಲಿಯೂ ಸಹ ಅತಿ ಹೇರಳವಾಗಿ ಶ್ರೀಗಂಧ ಬೆಳೆಯುತ್ತಿತ್ತು.ನಗರದ ಹೊರವಲಯದ ಚುರ್ಚೆ ಗುಡ್ಡದಲ್ಲಿ ನೈಸರ್ಗಿಕವಾಗಿ ಸಾವಿರಾರು ಸಂಖ್ಯೆಯಲ್ಲಿ ಶ್ರೀಗಂಧದ ಬೆಳೆಯುತ್ತಿದ್ದರು ರಾತ್ರೋ ರಾತ್ರಿ ಈ ಗಿಡಗಳು ಕಳ್ಳರ ಪಾಲಾಗುತ್ತಿದೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ....

ಹೌದು ಕರ್ನಾಟಕ ಶ್ರೀಗಂಧದ ನಾಡು.ಕರ್ನಾಟಕದ ಶ್ರೀಗಂದಕ್ಕೆ ತುಂಬಾ ಬೇಡಿಕೆ ಇದೆ. ಅಷ್ಟೇ ಹೆಸರುವಾಸಿ ಕೂಡ ಹೌದು. ದೇಶದಲ್ಲಿಯೇ ಅತಿ ಹೆಚ್ಚು ಶ್ರೀಗಂಧ ಬೆಳೆಯೋದು ಎಂದರೇ ಅತಿಶಯೋಕ್ತಿ ಆಗಲಾರದು. ಚಿಕ್ಕಮಗಳೂರು ಜಿಲೆಯಲ್ಲಿಯೂ ಸಹ ಅತಿ ಹೆಚ್ಚಾಗ್ಗಿ ಶ್ರೀಗಂಧದ ಮರ ಬೆಳೆಯೋದಕ್ಕೆ ಹೆಸರುವಾಸಿ. ನಗರದ ಹೊರವಲಯದಲ್ಲಿರುವ ಚುರ್ಚೆ ಗುಡ್ಡದಲ್ಲಿ ನೈಸರ್ಗಿಕವಾಗಿ ಸಾವಿರಾರು ಸಂಖ್ಯೆಯಲ್ಲಿ ಶ್ರೀಗಂಧ ಬೆಳೆದಿದೆ. ಈ ಗುಡ್ಡದಲ್ಲಿ ಎಲ್ಲಿ ನೋಡಿದರೂ ನೋಡೋಕ್ಕೆ ಸಿಗೋದು ಶ್ರೀಗಂಧ. ಆದ್ರೆ ಈ ಗುಡ್ಡದಲ್ಲಿ ರಾತ್ರೋ ರಾತ್ರಿ ಶ್ರೀಗಂಧದ ಗಿಡಗಳು ಕಣ್ಮರೆ ಆಗುತ್ತಿದೆ.ಇಲ್ಲಿನ ಮರಗಳಿಗೆ ರಾತ್ರಿ ಹೊತ್ತು ಕೊಡಲಿ ಪೆಟ್ಟು ಬೀಳುತ್ತಿದೆ. ಬೆಳಗ್ಗೆ ಹೊತ್ತಿಗ್ಗೆ ಮರಗಳು ಇಲ್ಲವಾಗುತ್ತಿವೆ. ಸ್ವಲ್ಪ ದಪ್ಪನಾದ ಮರಗಳು ಬೆಳಗ್ಗೆ ವೇಳೆಗೆ ಮಯವಾಗುತ್ತಿವೆ.

ಜಿಲ್ಲೆಯಲ್ಲಿ ಶ್ರೀಗಂಧ ಬೆಳೆಯೊದಕ್ಕಾಗಿ ಮತ್ತು ಅದರ ಪಾಲನೆ ಪೋಷಣೆಗಾಗಿ ಸಿರಿಗಂದ ಎಂಬ ಯೋಜನೆಯನ್ನು ಜಾರಿ ಮಾಡಲಾಗಿದ್ದು ಅದಕ್ಕಾಗಿಯೇ ಕೋಟ್ಯಂತರ ರೂ. ಅರಣ್ಯ ಇಲಾಖೆ ವೆಚ್ಚ ಮಾಡುತ್ತಿದೆ. ಆದರೆ ಅದರ ಪಾಲನೆ ಪೋಷಣೆ ಅರಣ್ಯ ಇಲಾಖೆಯಿಂದ ಮಾತ್ರ ಆಗುತ್ತಿಲ್ಲ. ಇದರ ಸುವಾಸನೆ ಶ್ರೀಗಂಧದ ಚೆಗಿಗಾಗಿ ಪುಟ್ಟ ಪುಟ್ಟ ಮರಗಳಿಗೆ ಕೊಡಲಿ ಪೆಟ್ಟು ಬೀಳುತ್ತಿದೆ. ಈ ಮರಗಳಿಗೆ ಹೆಚ್ಚು ಬೆಲೆ ಹಾಗೂ ಅಮೂಲ್ಯ ವಾದ ಕಾರಣ ಬೆಳಗ್ಗೆ ರಾತ್ರಿ ಎನ್ನದೆ ಕಳ್ಳರು ಕಳ್ಳತನದಲ್ಲಿ ತೊಡಗಿದ್ದಾರೆ.

ಒಟ್ಟಾರೆಯಾಗಿ ಚಿಕ್ಕಮಗಳೂರಿನಲ್ಲಿ ಇರುವ ಲಕ್ಷಾಂತರ ಶ್ರೀಗಂಧದ ಗಿಡಗಳ ಪಾಲನೆ ಪೋಷಣೆ ಮತ್ತು ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಹಾಗೂ ಹೊಣೆ ಎಲ್ಲರ ಮೇಲೂ ಇದೆ. ಇಲ್ಲಿನ ಗಿಡ ರಕ್ಷಣೆಗೆ ಅರಣ್ಯ ಇಲಾಖೆ ದಿನ ಗಸ್ತು ತಿರುಗಿ ಕಳ್ಳತನ ತೆಡೆಯಲು ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕಿದೆ....

byte :- ಸುಬ್ರಹ್ಮಣ್ಯ ಭಟ್.... ಸ್ಥಳೀಯರು. (ಬಿಳಿ ಕೂದಲು ಇರುವ ವ್ಯಕ್ತಿ)

byte:- ವಿಶ್ವನಾಥ್..... ಸ್ಥಳೀಯರು....

walk throug ಕೂಡ ಇದೆ ಸರ್.....

Conclusion:ರಾಜಕುಮಾರ್.....
ಈಟಿವಿ ಭಾರತ್....
ಚಿಕ್ಕಮಗಳೂರು......
Last Updated : Jul 13, 2019, 9:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.