ETV Bharat / state

ನಾ ನಿನ್‌ ಬಿಡ್ತೀನಾ,, ನಾನೇನ್‌ ಸುಮ್ನಿರ್ತೀನಾ,,

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಗರದ ಮುಖ್ಯರಸ್ತೆಯಲ್ಲಿಯೇ 2 ಗೂಳಿಗಳ ಕಾಳಗ ಮಾಡಿವೆ.

ಗೂಳಿ ಕಾಳಗ
author img

By

Published : Sep 8, 2019, 12:54 PM IST

ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ನಗರದ ಮುಖ್ಯರಸ್ತೆಯಲ್ಲಿಯೇ ಎರಡು ಗೂಳಿಗಳು ಪರಸ್ಪರ ಕಾಳಗಕ್ಕಿಳಿದು ಜನರಲ್ಲಿ ಆತಂಕವನ್ನುಂಟು ಮಾಡಿದ್ದವು.

ಒಂದರ ಮೇಲೆ ಇನ್ನೊಂದಕ್ಕೆ ಕೋಪ. ರಸ್ತೆಯಲ್ಲಿ ಓಡಾಡುವ ವಾಹನವನ್ನೂ ಗಮನಿಸದೇ ಗೂಳಿಗಳು ಗುದ್ದಾಡಿಕೊಂಡಿವೆ. ರಸ್ತೆಯಲ್ಲಿ ಹೋಗುತ್ತಿದ್ದ ಕಾರಿಗೆ ಗುದ್ದಿವೆ. ಅಂಗಡಿ ಮುಂದೆ ಇದ್ದ ಬೋರ್ಡ್ ಮುರಿದು ಹಾಕಿವೆ. ಮುಖ್ಯರಸ್ತೆಯಲ್ಲಿಯೇ ಇರುವ ಹೋಟೆಲ್‌ನೊಳಗೂ ನುಗ್ಗಿವೆ.

ನಾ ನಿನ್ನ ಬಿಡಲಾರೆ..

ಈ ಎರಡೂ ಗೂಳಿಗಳು ಗುದ್ದಾಡುವುದನ್ನು ನೋಡಿ ಸ್ಥಳೀಯರು ಬೆಚ್ಚಿ ಬಿದ್ದಿದ್ದರು. ಪೊಲೀಸ್ ಪೇದೆ ಬಿಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಹೋಟೆಲ್‌ನೊಳಗೆ ಎರಡೂ ಗೂಳಿಗಳು ಗುದ್ದಾಡಿ ಸಾಕಷ್ಟು ವಸ್ತುಗಳನ್ನು ಹಾನಿ ಮಾಡಿವೆ. ಈ ವಿಡಿಯೋ ಈಗ ವೈರಲ್‌ ಆಗಿದೆ.

Intro:Kn_Ckm_05_Guuli kalaga_av_7202347Body:ಚಿಕ್ಕಮಗಳೂರು :-

ಒಂದು ಕಡೆ ಮಳೆ,ಇನ್ನೋಂದು ಕಡೆ ತಮಟೆ ಸದ್ದಿನೊಂದಿಗೆ ಗಣಪನನ್ನು ಕರೆದ್ಯೋಯುತ್ತಿರುವ ಯುವಕರು.ಇವೆರಡರ ನಡುವೆ ಮುಖ್ಯರಸ್ತೆಯಲ್ಲಿಯೇ ಎರಡೂ ಗೂಳಿಗಳ ಕಾಳಗ.ಹೌದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಗರದ ಪ್ರಮಖ ರಸ್ತೆಯಲ್ಲಿ ಇದ್ದಕ್ಕಿಂದತೆಯೇ ಎರಡೂ ಗೂಳಿಗಳು ಕಾಳಗಕ್ಕೆ ನಿಂತಿದೆ.ಒಂದರ ಮೇಲೆ ಇನ್ನೋಂದಕ್ಕೆ ಕೋಪ ಎರಡೂ ಯುದ್ದಕ್ಕೆ ನಿಂತೂ ಗುದ್ದಾಡಿ ಕೊಂಡಿವೆ.ರಸ್ತೆಯಲ್ಲಿ ಓಡಾಡುವ ವಾಹನವನ್ನು ಗಮನಿಸದೇ ಜನರ ಕಡೆ ಗಮನವನ್ನು ನೀಡದೇ ನಾನ ಇಲ್ಲ ನಿನ್ನ ಎಂಬಂತೆ ಎರಡೂ ಗೂಳಿಗಳು ಗುದ್ದಾಡಿ ಕೊಂಡಿದ್ದು ರಸ್ತೆಯಲ್ಲಿ ಹೋಗುತ್ತಿದ್ದ ಕಾರಿಗೆ ಗುದ್ದಿವೆ.ನಂತರ ಅಂಗಡಿ ಮುಂದೆ ಇದ್ದ ಬೋರ್ಡ್ ಮುರಿದು ಹಾಕಿವೆ.ನಂತರ ಮುಖ್ಯರಸ್ತೆಯಲ್ಲಿಯೇ ಇರುವ ಹೊಟೇಲ್ ಪುಡ್ ಮ್ಯಾಜಿಕ್ ಒಳಗೆ ನುಗ್ಗಿ ಅಲ್ಲಿಯೇ ಗುದ್ದಾಡಿಕೊಂಡು ಹೊಟೇಲ್ ಪೂರ್ತಿ ಮಾಜಿಕ್ ಮಾಡಿ ಬಂದಿವೆ.ಈ ಎರಡೂ ಗೂಳಿಗಳು ಗುದ್ದಾಡುವುದನ್ನು ನೋಡಿ ಸ್ಥಳೀಯರು ಬೆಚ್ಚಿ ಬಿದ್ದಿದ್ದು ಪೋಲಿಸ್ ಪೇದೆ ಬಿಡಿಸುವ ಪ್ರಯತ್ನ ಮಾಡಿದ್ದಾರೆ.ನಂತರ ಇವುಗಳ ಯುದ್ದ ನೋಡಿ ಎರಡೂ ಕಾಲು ಹಿಂದಿಟ್ಟಿದ್ದಾರೆ. ಹೊಟೇಲ್ ಒಳ ಭಾಗದಲ್ಲಿಯೇ ಎರಡೂ ಗೂಳಿಗಳು ಗುದ್ದಾಡಿ ಸಾಕಷ್ಟು ವಸ್ತುಗಳು ಹಾನಿ ಮಾಡಿವೆ. ಎಲ್ಲರೂ ಈ ಯುದ್ದವನ್ನು ನೋಡುತ್ತಿದ್ದರೇ ಹೊರತು ಬಿಡಿಸುವ ಪ್ರಯತ್ನಕ್ಕೆ ಹೋಗಿಲ್ಲ.ನಂತರ ಸ್ಥಳೀಯ ಯುವಕರು ಸೇರಿ ಈ ಎರಡೂ ಗೂಳಿಗಳ ಕಾಳಗವನ್ನು ನಿಲ್ಲಿಸುವ ಪ್ರಯತ್ನವನ್ನು ಮಾಡಿದರು....

Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು.....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.