ಚಿಕ್ಕಮಗಳೂರು: ವಾರದ ಹಿಂದಷ್ಟೇ ಲೋಕಾರ್ಪಣೆಗೊಂಡ ಇಲ್ಲಿನ ಸೇತುವೆಯೊಂದು ಕುಸಿದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಕೇವಲ ಪಿಕಪ್ ವಾಹನ ಹೋಗಿದ್ದಕ್ಕೆ ಸೇತುವೆಯ ಕಾಂಕ್ರಿಟ್ ಗೋಡೆ ಕಳಚಿ ಬಿದ್ದಿದೆ. 30 ಲಕ್ಷ ರೂ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿತ್ತು. ಕಳಸ ತಾಲೂಕಿನ ನೆಲ್ಲಿಬೀಡು ಗ್ರಾಮದಲ್ಲಿ ಘಟನೆ ನಡೆದಿದೆ. ಕಂದಕಕ್ಕೆ ಬೀಳುವ ಹಂತದಲ್ಲಿದ್ದ ಪಿಕಪ್ ವಾಹನವನ್ನು ಮೇಲೆತ್ತಲು ಸ್ಥಳೀಯರು ಹರಸಾಹಸಪಟ್ಟರು.
ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ವಾಹನ ಸಂಪೂರ್ಣ ನಜ್ಜುಗುಜ್ಜಾಗುತ್ತಿತ್ತು. ವಾಹನ ಚಾಲಕ ಮತ್ತು ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚೌಡಿ ಬಿಳಲ್, ಕಟ್ಟೆಮನೆ, ಕೊಣೆಮನೆ, ಈಚಲಹೊಳೆ ಸೇರಿದಂತೆ ಐದಾರು ಹಳ್ಳಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆ ಕಳೆದ ವರ್ಷ ಅತಿವೃಷ್ಟಿಯಿಂದ ಕೊಚ್ಚಿ ಹೋಗಿತ್ತು. ಇಂಜಿನಿಯರ್, ಕಂಟ್ರಾಕ್ಟರ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಟೈರ್ ಪಂಕ್ಚರ್ ಆಗಿ ಎದುರಿಗೆ ಬರುತ್ತಿದ್ದ ಟ್ಯಾಂಕರ್ಗೆ ಗುದ್ದಿದ ಕಾರು.. ದರ್ಗಾಕ್ಕೆ ತೆರಳುತ್ತಿದ್ದ ಐವರು ಸ್ಥಳದಲ್ಲೇ ಸಾವು!