ETV Bharat / state

ಸ್ವಗ್ರಾಮಕ್ಕೆ ಆಗಮಿಸಿದ ಸಿದ್ಧಾರ್ಥ್​​​ ಹೆಗಡೆ ಪಾರ್ಥಿವ ಶರೀರ

ಕಾಫಿ ಡೇ ಮಾಲೀಕ ಸಿದ್ಧಾರ್ಥ್​ ಹೆಗಡೆಯವರ ಪಾರ್ಥಿವ ಶರೀರ ಸ್ವಗ್ರಾಮ ಚೇತನ ಹಳ್ಳಿಗೆ ಆಗಮಿಸಿದ್ದು, ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆಯನ್ನು ಕುಟುಂಬವರ್ಗ ಮಾಡಿಕೊಂಡಿದೆ.

author img

By

Published : Jul 31, 2019, 6:06 PM IST

Updated : Jul 31, 2019, 6:11 PM IST

ಸ್ವಗ್ರಾಮಕ್ಕೆ ಆಗಮಿಸಿದ ಸಿದ್ಧಾರ್ಥ್ ಹೆಗಡೆ ಪಾರ್ಥಿವ ಶರೀರ

ಚಿಕ್ಕಮಗಳೂರು: ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಹೆಗಡೆಯವರ ಪಾರ್ಥಿವ ಶರೀರ ಸ್ವಗ್ರಾಮ ಚೇತನಹಳ್ಳಿಗೆ ಆಗಮಿಸಿದ್ದು, ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆಯನ್ನು ಕುಟುಂಬವರ್ಗ ಮಾಡಿಕೊಂಡಿದೆ.

ಸ್ವಗ್ರಾಮಕ್ಕೆ ಆಗಮಿಸಿದ ಸಿದ್ಧಾರ್ಥ್ ಹೆಗಡೆ ಪಾರ್ಥಿವ ಶರೀರ

ಚಿಕ್ಕಮಗಳೂರಿನಿಂದ ಪಾರ್ಥಿವ ಶರೀರವನ್ನು ವಿಶೇಷ ತುರ್ತು ವಾಹನದಲ್ಲಿ ತರಲಾಯಿತು. ಈಗಾಗಲೇ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಚೇತನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು, ಕಾಫಿ ಎಸ್ಟೇಟ್ ಕೂಲಿ ಕಾರ್ಮಿಕರು ಸೇರಿದಂತೆ ಸಾವಿರಾರು ಮಂದಿ ಆಗಮಿಸಿದ್ದಾರೆ. ಕೆಲ ನಿಮಿಷಗಳ ಕಾಲ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಬಳಿಕ ಒಕ್ಕಲಿಗ ಸಂಪ್ರದಾಯದ ಪ್ರಕಾರ ವಿಧಿ ವಿಧಾನ ನೆರವೇರಿಸಿ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ.

ಈಗಾಗಲೇ ಚೇತನಹಳ್ಳಿಯ ಎಸ್ಟೇಟ್​​ನಲ್ಲಿರುವ ಸಿದ್ಧಾರ್ಥ್ ಮನೆಯಲ್ಲಿ ನೀರವ ಮೌನ ಆವರಿಸಿದ್ದು, ಸಿದ್ಧಾರ್ಥ ಹೆಗಡೆಯವರ ತಾಯಿ ವಸಂತಿ ಹೆಗಡೆ, ಮಾಜಿ ಮುಖ್ಯಮಂತ್ರಿ ಎಸ್​​.ಎಂ.ಕೃಷ್ಣ ಕೂಡ ಸ್ವಗ್ರಾಮಕ್ಕೆ ಆಗಮಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದಾರೆ.

Intro:ಚೇತನಹಳ್ಳಿ: ಕಾಫಿ ಡೇ ಮಾಲೀಕ ಸಿದ್ದಾರ್ಥ ಹೆಗಡೆಯವರ ಸ್ವಗ್ರಾಮ ಚೇತನ ಹಳ್ಳಿಗೆ ಇನ್ನು ಕೆಲವೇ ನಿಮಿಷದಲ್ಲಿ ಪಾರ್ಥಿವರು ಆಗಮಿಸಲಿದ್ದು ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆಯನ್ನು ಕುಟುಂಬವರ್ಗ ಮಾಡಿಕೊಂಡಿದೆ.

ಈಗಾಗಲೇ ಚೇತನ ಹಳ್ಳಿಯ ಎಸ್ಟೇಟ್ ನಲ್ಲಿರುವ ಮನೆಯಲ್ಲಿ ಈಗ ನೀರವಮೌನ ಆವರಿಸಿದೆ. ಇನ್ನು ಸ್ವಗ್ರಾಮಕ್ಕೆ ಆಗಮಿಸಿದ ಸಿದ್ಧಾರ್ಥ ಹೆಗಡೆಯವರ ತಾಯಿ ವಸಂತಿ ಹೆಗಡೆ ಕೂಡ ಮನೆಗೆ ಆಗಮಿಸಿದ್ದು ಮಗನನ್ನು ಕಳೆದುಕೊಂಡ ಅವರ ವೇದನೆ ಹೇಳತೀರದಾಗಿದೆ. ಮಾಧ್ಯಮದವರೊಂದಿಗೆ ಕೂಡ ಮಾತನಾಡಲು ಸಾಧ್ಯವಾಗದೆ ದುಃಖ ಉಮ್ಮಳಿಸಿ ಬರುತ್ತಿತ್ತು.

ಏನೋ ಮೃತ ಸಿದ್ದಾರ್ಥ ರ ಮಾವ ಹಾಗೂ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಕೂಡ ಚೇತನಹಳ್ಳಿ ಎಸ್ಟೇಟ್ಗೆ ಆಗಮಿಸಿದ್ದು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ರು.

ಇನ್ನು ಚಿಕ್ಕಮಗಳೂರಿನಿಂದ ಮೃತದೇಹ ವಿಶೇಷ ತುರ್ತು ವಾಹನದಲ್ಲಿ ಆಗಮಿಸುತ್ತಿದ್ದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ಇನ್ನು ಈಗಾಗಲೇ ಮೃತರ ಪಾರ್ಥಿವ ಶರೀರಕ್ಕೆ ಅಂತಿಮ ದರ್ಶನ ಪಡೆಯಲು ಚೇತನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ಕಾಫಿ ಎಸ್ಟೇಟ್ ಕೂಲಿ ಕಾರ್ಮಿಕರು ಸೇರಿದಂತೆ ಸಾವಿರಾರು ಮಂದಿ ಆಗಮಿಸಿದ್ದು ಕೆಲ ನಿಮಿಷಗಳಕಾಲ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು ಬಳಿಕ ಒಕ್ಕಲಿಗ ಸಂಪ್ರದಾಯದ ಪ್ರಕಾರ ವಿಧಿವಿಧಾನ ನೆರವೇರಿಸಿ ಅಗ್ನಿಸ್ಪರ್ಶ ಮಾಡಲಾಗುವುದು.

Body:0

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
Last Updated : Jul 31, 2019, 6:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.