ETV Bharat / state

ಒಬ್ಬಿಬ್ಬರು ಓಡಾಡಿದ್ರೂ ತೂಗಾಡುತ್ತಿದೆ ಕಾಫಿನಾಡಿನ ತೂಗುಸೇತುವೆ.. ಅಪಾಯಕ್ಕೂ ಮುನ್ನ ಬೇಕಿದೆ ಕಾಯಕಲ್ಪ - ಕಾಫಿನಾಡಿನ ತೂಗುಸೇತುವೆ

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದಲ್ಲಿರುವ ಸೇತುವೆ ಸರಿಯಾದ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆಗೆ ತಲುಪಿದೆ.

ನೆಮ್ಮಾರ್ ತೂಗು ಸೇತುವೆ
ನೆಮ್ಮಾರ್ ತೂಗು ಸೇತುವೆ
author img

By

Published : Nov 3, 2022, 4:34 PM IST

ಚಿಕ್ಕಮಗಳೂರು: ಗುಜರಾತ್​ನ ಮೊರ್ಬಿ ತೂಗುಸೇತುವೆ ಮುರಿದುಬಿದ್ದು ನೂರಾರು ಜನರು ಜಲಸಮಾಧಿ ಆಗಿರುವ ಪ್ರಕರಣ ವಿಶ್ವದಾದ್ಯಂತ ಸುದ್ದಿಯಾಗ್ತಿದೆ. ಈ ಮಧ್ಯೆ ಕಾಫಿನಾಡಿನಲ್ಲೊಂದು ಹ್ಯಾಂಗಿಂಗ್ ಬ್ರಿಡ್ಜ್ ಮುನ್ನಲೆಗೆ ಬಂದಿದೆ. ಅದು ಸುಮಾರು 20 ವರ್ಷಗಳಷ್ಟು ಹಳೆಯದು. ಅದನ್ನು ಕಟ್ಟಿ ಹೋದ ಸರ್ಕಾರ ಇಂದಿಗೂ ಅದು ಹೇಗಿದೆ ಅಂತ ತಿರುಗಿಯೂ ನೋಡಿಲ್ಲ. ಅದನ್ನು ಎರಡು ಹಳ್ಳಿಯ ನೂರಾರು ಕುಟುಂಬಗಳು ಸಂಚಾರಕ್ಕೆ ಅವಲಂಬಿಸಿವೆ. ಸೊಸೈಟಿಯ ಅಕ್ಕಿಯನ್ನೂ ಅದರ ಮೇಲೆ ಹೊತ್ಕೊಂಡು ಹೋಗಬೇಕು. ಶಾಲಾ ಮಕ್ಕಳಿಗೂ ಇದೇ ಹೆದ್ದಾರಿಯಾಗಿದೆ. ಆದ್ರೆ, ಆ ಬ್ರಿಡ್ಜ್​ನ ಕಂಬಿಗಳು ಕಿತ್ತು ಹೋಗಿವೆ.

ಹೌದು, ನಿರ್ವಹಣೆ ಇಲ್ಲದೆ ಒಬ್ಬರು ಓಡಾಡಿದ್ರು ಜೋಕಾಲಿಯಂತೆ ಈ ತೂಗುಸೇತುವೆ ಅಲ್ಲಾಡುತ್ತೆ. ನಾಳೆ ಏನಾದ್ರು ಅನಾಹುತ ಸಂಭವಿಸಿದ ಮೇಲೆ ಸರ್ಕಾರ ಅಯ್ಯೋ ದೇವ್ರೇ ಅನ್ನೋದಕ್ಕಿಂತ ಮುಂಚೆ ಆ ಹ್ಯಾಂಗಿಂಗ್ ಬ್ರಿಡ್ಜ್​​ಗೊಂದು ಭದ್ರತೆ ಕಲ್ಪಿಸಬೇಕಿದೆ.

ಕಿತ್ತು ಬಂದಿರುವ ತಂತಿಗಳು. ಬ್ಯಾಲೆನ್ಸ್​ ಇಲ್ಲದೆ ಸಾಮರ್ಥ್ಯ ಕಳೆದುಕೊಂಡಿರುವ ಸೇತುವೆಯ ತಡೆಗೋಡೆಗಳು. ಒಬ್ಬರ ಓಡಾಟಕ್ಕೆ ಜೋತಾಡೋ ಸೇತುವೆ ಮೇಲೆ ಸಂಚರಿಸಲು ಸ್ಥಳೀಯರಿಗೂ ಭಯ. ಇದು ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದಲ್ಲಿರುವ ತೂಗುಸೇತುವೆಯ ದೃಶ್ಯ. ಈ ಸೇತುವೆಯನ್ನು ನಂಬಿಕೊಂಡೇ ಸುಂಕದಮಕ್ಕಿ ಹಾಗೂ ಹೆಡದಾಳು ಗ್ರಾಮದ ನೂರಾರು ಕುಟುಂಬಗಳು ಬದುಕುತ್ತಿವೆ.

ಸಾಮರ್ಥ್ಯ ಕಳೆದುಕೊಂಡ ಸೇತುವೆ: ಸುಮಾರು 150ಕ್ಕೂ ಹೆಚ್ಚು ಕುಟುಂಬಗಳು, 500ಕ್ಕೂ ಅಧಿಕ ಜನ. ಇವರಿಗೆ ಬೇರೆ ಮಾರ್ಗ ಇದ್ರು 12 ಕಿ.ಮೀ ಸುತ್ತಿ ಬರಬೇಕು. ಹಾಗಾಗಿ 20 ವರ್ಷಗಳ ಹಿಂದೆ ಸರ್ಕಾರವೇ ತೂಗು ಸೇತುವೆ ನಿರ್ಮಿಸಿ ಕೊಟ್ಟಿತ್ತು. ಆದ್ರೆ, ಟೇಪ್ ಕಟ್ ಮಾಡಿ, ಉದ್ಘಾಟಿಸಿ ಹೋದ ರಾಜಕಾರಣಿಗಳು-ಅಧಿಕಾರಿಗಳು ಅದು ಹೇಗಿದೆ ಅಂತ ಮತ್ತೆ ಈ ಕಡೆ ತಲೆ ಹಾಕಿಲ್ಲ. ಇದೀಗ ನಿರ್ವಹಣೆ ಇಲ್ಲದೆ ಸೇತುವೆ ತನ್ನ ಸಾಮರ್ಥ್ಯವನ್ನು ಕಳೆದುಕೊಂಡಿದೆ.

ನೆಮ್ಮಾರ್​ ಸೇತುವೆ ಬಂದೋಬಸ್ತ್​ಗೆ ಮನವಿ: ಸೇತುವೆಗೆ ಹಾಕಿರುವ ಗ್ರಿಲ್​ಗಳು ಕಿತ್ತು ಬಂದಿವೆ. ಸೇತುವೆಯ ಫುಟ್​ಪಾತ್​ ಹಾಗೂ ತಡೆಗೋಡೆಗೆ ಹಾಕಿರುವ ಗ್ರಿಲ್​ಗಳ ಜಾಂಯ್ಟ್ ಕೂಡ ಬೇರ್ಪಟ್ಟಿದ್ದು, ಸ್ವಲ್ಪ ಯಾಮಾರಿದ್ರು ಕಾಲು ಕೆಳಗೆ ಹೋಗುತ್ತೆ. ಹಣೆ ಬರಹ ತೀರಾ ಕೆಟ್ಟಿದ್ರೆ ತುಂಗಾನದಿ ಪಾಲಾದ್ರು ಆಶ್ಚರ್ಯ ಇಲ್ಲ. ಹಾಗಾಗಿ, ಸರ್ಕಾರ ಕೂಡಲೇ ಇತ್ತ ಗಮನ ಹರಿಸಿ ಸೇತುವೆಗೆ ಬಣ್ಣ ಹೊಡೆದು, ಗ್ರೀಸ್ ಹಾಕಿ ಬಂದೋಬಸ್ತ್ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಸೇತುವೆ ಸ್ಥಿತಿ ಬಗ್ಗೆ ಸ್ಥಳೀಯರು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ, ಸ್ಥಳಕ್ಕೆ ಬಂದು ಹೋಗುವ ಅಧಿಕಾರಿಗಳ ಕಥೆ ಬಂದ ಪುಟ್ಟ ಹೋದ ಪುಟ್ಟ ಎಂಬಂತಾಗಿದೆ. ಒಂದು ವೇಳೆ ಈ ಸೇತುವೆ ಹಾಳಾದ್ರೆ, ಈ ಭಾಗದ ಜನ ಸಣ್ಣ ಕೆಲಸಕ್ಕೂ ಹೆದ್ದಾರಿಗೆ ಬರಬೇಕಂದ್ರೆ ಕನಿಷ್ಠ 10 ಕಿ.ಮೀ. ಸುತ್ತಿ ಬಳಸಿ ಬರಬೇಕು ಎನ್ನುವುದು ಸ್ಥಳೀಯರ ಆರೋಪ.

ಓಡಾಡೋಕೆ ಭಯವಾಗುತ್ತೆ ಅಂತಾರೆ ಸ್ಥಳೀಯರು: ಮಳೆಗಾಲದಲ್ಲಿ ಆ 10 ಕಿ. ಮೀ ಹೋಗೋದು ಅಸಾಧ್ಯದ ಮಾತು. ಮಕ್ಕಳು ಶಾಲಾ-ಕಾಲೇಜಿಗೆ ಹೋಗೋದಕ್ಕೆ ಆಗಲ್ಲ. ನಿತ್ಯ 20 ಕಿ. ಮೀ ನಡೆದು ಹೋಗಬೇಕಾಗುತ್ತದೆ. ಈ ಸೇತುವೆ ನಿರ್ಮಾಣವಾದಗಿನಿಂದ ಒಂದೇ ಒಂದು ಬಾರಿ ಮಾತ್ರ ಬಣ್ಣ-ಗ್ರೀಸ್ ಕಂಡಿದೆ. ಮೊದಲೆಲ್ಲಾ 4-5 ಜನ ಓಡಾಡಿದ್ರು ಏನೂ ಆಗ್ತಿರಲ್ಲಿಲ್ಲ. ಈಗ ಒಬ್ಬಿಬ್ಬರು ಓಡಾಡಿದ್ರೆ ತೂಗಾಡುತ್ತೆ. ಓಡಾಡೋಕೆ ಭಯವಾಗುತ್ತೆ ಅಂತಾರೆ ಸ್ಥಳೀಯರು.

ಶಿಥಿಲಾವಸ್ಥೆ ತಲುಪಿದ ನೆಮ್ಮಾರ್​ ಸೇತುವೆ: ಒಟ್ಟಾರೆಯಾಗಿ ಸರ್ಕಾರ ಬಡ ಜನರಿಗೆಂದು ತೂಗು ಸೇತುವೆಯನ್ನೇನೋ ನಿರ್ಮಿಸಿ ಕೊಡ್ತು. ಆದ್ರೆ, ಅದರ ನಿರ್ವಹಣೆ ಮರೆತಿದೆ. ಸರ್ಕಾರವೇ ಮರೆತ ಕಾರಣ ಇಂದು ಆ‌ ಸೇತುವೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಕಂಬಿ ಕಿತ್ತಿವೆ, ಇಂಟರ್ ಲಿಂಕ್ ಹೋಗಿವೆ. ತೂಗು‌ಸೇತುವೆ ಸಂಪೂರ್ಣ ತೂಗಾಡ್ತಿದೆ. ಮುಂದೊಂದು ದಿನ ಏನಾದ್ರು ಅನಾಹುತವಾದಾಗ ಸರ್ಕಾರ ಎಚ್ಚೆತ್ತುಕೊಳ್ಳುವ ಬದಲು ಈಗಲೇ ಜನರ ಮನವಿಗೆ ಸ್ಪಂದಿಸುವ ಕೆಲಸ ಮಾಡಬೇಕಿದೆ.

ಓದಿ: ತುಕ್ಕು ಹಿಡಿದು ದುರಸ್ತಿಗೆ ತಲುಪಿದ ತೂಗು ಸೇತುವೆಗಳು: ಉತ್ತರಕನ್ನಡದಲ್ಲಿ ಶುರುವಾದ ಆತಂಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.