ETV Bharat / state

ಬರಿಗೈಲಿ ಕಾಲೇಜಿನ ಶೌಚಾಲಯದ ಕಿಟಕಿ ಗಾಜು ಒಡೆದು ವಿಡಿಯೋ ಹರಿಬಿಟ್ಟ ವಿದ್ಯಾರ್ಥಿ! - Mdudigere Taluk Degree College of Chikkamagaluru District

ವಿದ್ಯಾರ್ಥಿಯೊಬ್ಬ ತನ್ನ ಕಾಲೇಜಿನ ಶೌಚಾಲಯದ ಕಿಟಕಿ ಗಾಜು ಒಡೆದು ಆ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

gdf
ಬರಿಗೈಲಿ ಕಾಲೇಜಿನ ಶೌಚಾಲಯದ ಕಿಟಕಿ ಗಾಜು ಒಡೆದು ವಿಡಿಯೋ ಹರಿಬಿಟ್ಟ ವಿದ್ಯಾರ್ಥಿ!
author img

By

Published : Jan 21, 2021, 4:44 PM IST

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಪದವಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಕಾಲೇಜಿನ ಶೌಚಾಲಯದ ಕಿಟಕಿ ಗಾಜನ್ನು ಕೈಯಿಂದ ಒಡೆದು ಆ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.

ಬರಿಗೈಲಿ ಕಾಲೇಜಿನ ಶೌಚಾಲಯದ ಕಿಟಕಿ ಗಾಜು ಒಡೆದು ವಿಡಿಯೋ ಹರಿಬಿಟ್ಟ ವಿದ್ಯಾರ್ಥಿ!

ವಿಡಿಯೋ ಕಂಡ ಕಾಲೇಜಿನ ಪ್ರಾಂಶುಪಾಲರು, ನೀನು ಕಾಲೇಜಿಗೆ ಸರಿಯಾಗಿ ಬರುವುದಿಲ್ಲ. ಬಂದಾಗ್ಲೂ ಇಂತಹ ಕೆಲಸ ಮಾಡುತ್ತೀಯಾ ಎಂದು ಒಂದು ವಾರ ಸಂಸ್ಪೆಂಡ್ ಮಾಡಿ, ಕೇಸ್ ದಾಖಲಿಸಿದ್ದಾರೆ. ಜೊತೆಗೆ ಅವನ ಹೆತ್ತವರಿಗೂ ವಿಷಯ ಮುಟ್ಟಿಸಿದ್ದಾರೆ.

ಈತ ಬರಿಗೈಲಿ ಈ ರೀತಿ ಕಾಲೇಜಿನ ಗ್ಲಾಸ್ ಹೊಡೆದದ್ದು ಕೋಪಕ್ಕೋ, ಶೋಕಿಗೋ ಗೊತ್ತಿಲ್ಲ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಕಂಡ ಮೂಡಿಗೆರೆ ಜನ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಲೇಜು ಆಡಳಿತ ಮಂಡಳಿ ಆ ವಿದ್ಯಾರ್ಥಿ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.