ಚಿಕ್ಕಮಗಳೂರು: ಶ್ರೀರಾಮ ಸೇನೆಯ ಕಾರ್ಯಕರ್ತರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿ ವರ್ಷದಂತೆ ನಮ್ಮ ಸಂಘಟನೆ ನೇತೃತ್ವದಲ್ಲಿ 13 ನೇ ವರ್ಷದ ದತ್ತಾ ಮಾಲ ಅಭಿಯಾನ ಜಿಲ್ಲೆಯಲ್ಲಿ ನಡೆದಿದ್ದು, ಪ್ರತಿವರ್ಷ ನಾವು ಮಾಡುವ ಶೋಭಾಯಾತ್ರೆಯಲ್ಲಿ ಪಿಒಪಿ, ಕಂಚು, ಪಂಚಲೋಹ, ಮಣ್ಣಿನಿಂದ ತಯಾರು ಮಾಡಿರುವ ದತ್ತಾನ ಮೂರ್ತಿಯನ್ನು ಶೋಭಯಾತ್ರೆಗೆ ಬಳಸುತ್ತಿದ್ದೆವು
13 ವರ್ಷದಲ್ಲಿ ಹಲವು ರೀತಿಯ ವಿಗ್ರಹಗಳನ್ನು ಉಪಯೋಗಿಸಿದಾಗ ಯಾವ ತೊಂದರೆ ಆಗಿಲ್ಲ. ಈ ಬಾರಿ ಹೊಸ ಆಚರಣೆ ಎನ್ನುವ ನೆಪ ಹೇಳಿರೋದು ನಾಚಿಗೇಡಿನ ಸಂಗತಿಯಾಗಿದೆ. ಇದು ಹಿಂದೂಗಳ ಧಾರ್ಮಿಕ ಹಕ್ಕನ್ನು ಹತ್ತಿಕ್ಕುವ ಕ್ರಮ ಹಾಗೂ ಸರ್ಕಾರಕ್ಕೆ ಕಪ್ಪು ಚುಕ್ಕೆಯಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಿ ಟಿ ರವಿ ಕೂಡ ಈ ವಿಚಾರದಲ್ಲಿ ಸ್ವಂದಿಸದಿರುವುದು ಅತ್ಯಂತ ದುರ್ದೈವ ಎಂದು ಶ್ರೀರಾಮ ಸೇನೆ ಆಕ್ರೋಶ ವ್ಯಕ್ತಪಡಿಸಿದೆ.