ETV Bharat / state

ಮಲೆನಾಡಿನ ಸಮಸ್ಯೆಗಳನ್ನು ಬಗೆಹರಿಸುವಂತೆ CMಗೆ ಶೃಂಗೇರಿ ಶಾಸಕರ ಮನವಿ

ಶೃಂಗೇರಿ ವಿಧಾನಸಭಾ ಕ್ಷೇತ್ರದ ಮುತ್ತಿನ ಕೊಪ್ಪದಲ್ಲಿ ಮಳೆಯಲ್ಲಿ ಸಾಕಷ್ಟು ಹಾನಿಯಾಗಿದೆ. ಜನರು ಸಮಸ್ಯೆಯಲ್ಲಿ ಸಿಲುಕಿ ನರಳುತ್ತಿದ್ದಾರೆ. ಹೀಗಾಗಿ ಮಲೆನಾಡು ಜನರ ಸಮಸ್ಯೆಗೆ ಸ್ಪಂದಿಸುವಂತೆ ನೂತನ ಮುಖ್ಯಮಂತ್ರಿಗಳಲ್ಲಿ ಶಾಸಕ ಟಿ. ಡಿ. ರಾಜೇಗೌಡ ಮನವಿ ಮಾಡಿದ್ದಾರೆ.

chikmagalore
ಮುಖ್ಯಮಂತ್ರಿಗಳಿಗೆ ಶೃಂಗೇರಿ ಶಾಸಕ ಮನವಿ
author img

By

Published : Aug 5, 2021, 7:28 PM IST

ಚಿಕ್ಕಮಗಳೂರು: ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಕ್ಕೆ ಶೃಂಗೇರಿ ಶಾಸಕ ಟಿ ಡಿ ರಾಜೇಗೌಡ ಅಭಿನಂದನೆ ಸಲ್ಲಿಸಿದ್ದು, ಜಿಲ್ಲೆಯ ಸಮಸ್ಯೆಯನ್ನು ಸಿಎಂ ಮುಂದಿಟ್ಟು ಬಗೆಹರಿಸುವಂತೆ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿಗಳಿಗೆ ಶೃಂಗೇರಿ ಶಾಸಕ ಮನವಿ

ಜನರು ಅತಿವೃಷ್ಟಿಯಿಂದ ಹಾಗೂ ಕೊರೊನಾದಿಂದ ಕಂಗಲಾಗಿದ್ದಾರೆ. ಮಂತ್ರಿಗಳಿಗೆ ಬೇಗ ಖಾತೆ ಹಂಚಿಕೆಯಾಗಬೇಕು. ಶೃಂಗೇರಿ ವಿಧಾನಸಭಾ ಕ್ಷೇತ್ರದ ಮುತ್ತಿನ ಕೊಪ್ಪದಲ್ಲಿ ಮಳೆಯಲ್ಲಿ ಸಾಕಷ್ಟು ಹಾನಿಯಾಗಿದೆ. ಜನರು ಸಮಸ್ಯೆಯಲ್ಲಿ ಸಿಲುಕಿ ನರಳುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಅತಿ ಹೆಚ್ಚು ಆದಾಯ ತಂದು ಕೊಡುವ ಜಿಲ್ಲೆ, ಈ ಜಿಲ್ಲೆಗೆ ಮಂತ್ರಿ ಮಂಡಲದಲ್ಲಿ ಸ್ಥಾನವಿಲ್ಲ ಎಂದರು.

ಕುಮಾರಸ್ವಾಮಿ, ಸಿ.ಟಿ. ರವಿ ಹಾಗೂ ಬಯಲು ಸೀಮೆ ಭಾಗದ ಜನರಿಗಾದರೂ ಮಂತ್ರಿ ಮಂಡಲದಲ್ಲಿ ಸ್ಥಾನ ನೀಡಬಹುದಿತ್ತು. ಚಿಕ್ಕಮಗಳೂರು ಜಿಲ್ಲೆಯನ್ನು ನೀವು ಕಡೆಗಣಿಸಿದ್ದೀರಾ ಎಂಬ ಮನೋಭಾವನೆ ಕಾಡುತ್ತಿದ್ದು, ಪ್ರತೀ ಬಾರಿಯೂ ಪರಕೀಯರು ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಾರೆ ಎಂದು ಹೇಳಿದ್ದಾರೆ.

ಮಲೆನಾಡು ಭಾಗ ತನ್ನದೇ ಆದ ಕೊಡುಗೆ ನೀಡಿದೆ. ನೂರಾರು ನದಿಗಳು ಉಗಮ ಸ್ಥಾನವಾಗಿದೆ. ನಮ್ಮನ್ನು ಎಲ್ಲದಕ್ಕೂ ಬಳಸಿಕೊಳ್ಳುತ್ತಿದ್ದೀರಾ. ಈ ಹಿಂದೆ ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾದಾಗ ನಾಲ್ಕು ಜನರಿಗೆ ಅವಕಾಶ ನೀಡಿದ್ದರು. ಮುಖ್ಯಮಂತ್ರಿ ಅವರ ತಂದೆಯವರ ಜೊತೆ ಕೆಲಸ ಮಾಡಿದ್ದೇನೆ.

ಯಾವುದೇ ಒತ್ತಡಕ್ಕೂ ಒಳಗಾಗದೇ ಕೆಲಸ ಮಾಡಿ. ಮಲೆನಾಡು ಅಭಿವೃದ್ಧಿಗೆ ಬಂದ ಹಣ ಈ ಹಿಂದೇ ವಾಪಸ್​ ಆಗಿತ್ತು. ನಿಮಗೆ ಎಲ್ಲಾ ಶಾಸಕರು ಒಂದೇ. ಯೋಜನೆಗಳಲ್ಲಿ ಯಾವುದೇ ರೀತಿಯ ತಾರತಮ್ಮ ಮಾಡಬೇಡಿ. ನಮ್ಮ ಜಿಲ್ಲೆ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದೆ. ನೀವು ಚಿಕ್ಕಮಗಳೂರು ಜಿಲ್ಲೆಗೆ ಹೆಚ್ಚಿನ ಪ್ರಾತಿನಿಧ್ಯ ಕೊಡಬೇಕು ಎಂದು ಶಾಸಕರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.