ETV Bharat / state

ದಲಿತ ಕಾರ್ಮಿಕರ ಮೇಲೆ ಹಲ್ಲೆ ಪ್ರಕರಣ: ಗರ್ಭಪಾತವಾದ ಬಗ್ಗೆ ಮಾಹಿತಿ ಇಲ್ಲ ಎಂದ ಎಸ್​​ಪಿ - WOMAN ASSAULTED BY COFFEE PLANT OWNER

ಬಾಳೆಹೊನ್ನೂರು ಸಮೀಪದ ಜೇನುಗದ್ದೆಯ ಪುರ ಗ್ರಾಮದಲ್ಲಿ ಗರ್ಭಿಣಿಗೆ ತೋಟದ ಮಾಲೀಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಇದರಿಂದ ಮಹಿಳೆಗೆ ಗರ್ಭಪಾತ ಆಗಿದೆ ಎಂದು ಹೇಳಲಾಗ್ತಿದೆ. ಆದರೆ ಈ ಬಗ್ಗೆ ಆಕೆ ನಮ್ಮ ಬಳಿ ಏನು ಹೇಳಿಕೊಂಡಿಲ್ಲ ಎಂದು ಎಸ್​ಪಿ ಉಮಾ ಪ್ರಶಾಂತ್ ಹೇಳಿದ್ದಾರೆ.

SP said that there is no information about abortion
ಗರ್ಭಪಾತವಾದ ಬಗ್ಗೆ ಮಾಹಿತಿ ಇಲ್ಲ ಎಂದ ಎಸ್​​ಪಿ
author img

By

Published : Oct 12, 2022, 8:09 PM IST

ಚಿಕ್ಕಮಗಳೂರು: ದಲಿತ ಕಾರ್ಮಿಕರನ್ನು ಕೂಡಿ ಹಾಕಿ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಪ್ರತಿಕ್ರಿಯೆ ನೀಡಿದ್ದು, ಕಳೆದ 10 ರಂದು ಅರ್ಪಿತಾ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಹುಣಸೇಹಳ್ಳಿಯ ಜಗದೀಶ್ ಗೌಡ ಎಂಬುವರ ವಿರುದ್ಧ ದೂರು ದಾಖಲು ಮಾಡಿದ್ದಾರೆ.

ನಾವು ಜಗದೀಶ್ ಗೌಡ ಅವರಿಂದ ಕಾಫಿ ತೋಟದಲ್ಲಿ ಕೆಲಸ ಮಾಡಲು 9 ಲಕ್ಷ ಅಡ್ವಾನ್ಸ್ ತೆಗೆದುಕೊಂಡಿದ್ದೆವು. ಹಣ ವಾಪಸ್ ನೀಡುವ ವಿಚಾರದಲ್ಲಿ ನಮ್ಮ ಮೇಲೆ ಜಗದೀಶ್ ಗೌಡ ಹಾಗೂ ಅವರ ಮಗ ಹಲ್ಲೆ ಮಾಡಿದ್ದಾರೆ. ನಮ್ಮನ್ನು ಕೊಠಡಿಯಲ್ಲಿ ಕೂಡಿ ಹಾಕಿ ನಮ್ಮ ಮೊಬೈಲ್​ಗಳನ್ನು ಕಿತ್ತು ಕೊಂಡಿದ್ದಾರೆ ಎಂಬ ಆರೋಪ ಮಾಡಿದ್ದಾರೆ ಎಂದು ಉಮಾ ಪ್ರಶಾಂತ್​ ಹೇಳಿದ್ದಾರೆ.

ಗರ್ಭಪಾತವಾದ ಬಗ್ಗೆ ಮಾಹಿತಿ ಇಲ್ಲ ಎಂದ ಎಸ್​​ಪಿ

ಈ ಕುರಿತು ಎಸ್ಸಿ, ಎಸ್ಟಿ ದೌರ್ಜನ್ಯದ ಕಾಯ್ದೆ 504, 323, 342 ಅಡಿ ಜಗದೀಶ್ ಗೌಡ ಹಾಗೂ ಆತನ ಮಗ ತಿಲಕ್ ಮೇಲೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಸಂಬಂಧ ಯಾರನ್ನೂ ಬಂಧಿಸಿಲ್ಲ. ಹಲ್ಲೆ ಮಾಡಿದ ಸಮಯದಲ್ಲಿ ಆಕೆಗೆ ಗರ್ಭಪಾತವಾದ ಬಗ್ಗೆ ನಮ್ಮ ಬಳಿ ಅವರು ಏನು ಹೇಳಿಕೊಂಡಿಲ್ಲ.

ಇದನ್ನೂ ಓದಿ: ಚಿಕ್ಕಮಗಳೂರು: ಮಾಲೀಕನಿಂದ ಗರ್ಭಿಣಿ ಮೇಲೆ ಹಲ್ಲೆ.. ಗರ್ಭಪಾತ

ಅದರ ಬಗ್ಗೆಯೂ ನಾವು ಗಂಭೀರವಾಗಿ ತನಿಖೆ ಮಾಡುತ್ತೇವೆ. ಈಗಾಗಲೇ ಎರಡು ಮೂರು ಆಸ್ಪತ್ರೆಗಳಲ್ಲಿ ಅರ್ಪಿತಾ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ತನಿಖೆಯನ್ನು ಮಾಡುತ್ತಿದ್ದೇವೆ ಎಂದು ಚಿಕ್ಕಮಗಳೂರಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ಪ್ರತಿಕ್ರಿಯೆ: ಈ ಘಟನೆ ಮಾನವ ಸಮಾಜ ತಲೆ ತಗ್ಗಿಸುವಂತಹದಾಗಿದೆ. ಬಿಜೆಪಿ ಈ ಘಟನೆಯನ್ನ ಖಂಡಿಸುತ್ತದೆ. ಹಲ್ಲೆ ನಡೆಸಿದವರೂ ಬಿಜೆಪಿ ಕಾರ್ಯಕರ್ತ ಆದರೂ, ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಆಗಲಿ. ಈ ರೀತಿಯ ಘಟನೆಯನ್ನು ನಾವು ಸಹಿಸುವುದಿಲ್ಲ. ಈ ಘಟನೆಯನ್ನು ನಾವು ಖಂಡಿಸುತ್ತೇವೆ. ನಾವು ಸಂತ್ರಸ್ತರ ಪರವಾಗಿ ನಿಲ್ಲುತ್ತೇವೆ. ಆರೋಪಿಗಳ ಮೇಲೆ ಯಾವುದೇ ರೀತಿಯ ಕ್ರಮ ತೆಗೆದುಕೊಂಡರು ನಮ್ಮ ವಿರೋಧವಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.