ಚಿಕ್ಕಮಗಳೂರು: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೃಹತ್ ಗಾತ್ರದ ಕೆರೆ ಹಾವೊಂದು ಕಾಣಿಸಿಕೊಂಡು ಅಧಿಕಾರಿಗಳಲ್ಲಿ ಕೆಲಕಾಲ ನಡುಕ ಹುಟ್ಟಿಸಿದ ಘಟನೆ ನಡೆದಿದೆ.
ಇಂದು ಎರಡನೆ ಶನಿವಾರ ಇದ್ದರೂ ಕೆಲ ಸಿಬ್ಬಂದಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಈ ವೇಳೆ ರೆಕಾರ್ಡ್ ರೂಮ್ಗೆ ಸಿಬ್ಬಂದಿ ಹೋದಾಗ ಕೆರೆ ಹಾವೊಂದು ಕಾಣಿಸಿಕೊಂಡಿದೆ. ತಕ್ಷಣ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಇತರೆ ಅಧಿಕಾರಿಗಳು ಗಾಬರಿಯಿಂದ ಸ್ಥಳದಿಂದ ಓಡಿ ಹೋಗಿದ್ದಾರೆ. ಬಳಿಕ ಉರಗ ತಜ್ಞ ಸ್ನೇಕ್ ನರೇಶ್ ಅವರನ್ನು ಸ್ಥಳಕ್ಕೆ ಕರೆಸಿದ್ದಾರೆ.
ಸತತ 30 ನಿಮಿಷಗಳ ಕಾರ್ಯಾಚರಣೆಯ ಬಳಿಕ ಕೆರೆ ಹಾವು ಸೆರೆ ಹಿಡಿದು ಸುರಕ್ಷಿತವಾಗಿ ಸ್ಥಳೀಯ ಅರಣ್ಯಕ್ಕೆ ಹಾವನ್ನು ಬಿಟ್ಟು ಬಂದಿದ್ದಾರೆ.