ಚಿಕ್ಕಮಗಳೂರು: ಇಲ್ಲಿನ ಟಿಪ್ಪು ನಗರದಲ್ಲಿ ನಿರ್ಮಿಸಲಾಗಿದ್ದ ಅಕ್ರಮ ಕಸಾಯಿಖಾನೆಯನ್ನು ನಗರಸಭೆ ವತಿಯಿಂದ ತೆರವುಗೊಳಿಸಲಾಗಿದೆ. ಈ ಹಿಂದೆ ಕಸಾಯಿಖಾನೆಯ ಮೇಲೆ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣು ಗೋಪಾಲ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಆರೋಪಿಗಳ ಮೇಲೆ ದೂರು ದಾಖಲಾಗಿತ್ತು.
ಕಸಾಯಿಖಾನೆಯನ್ನು ಅವರೇ ತೆರವುಗೊಳಿಸಲು ನಗರಸಭೆಯ ವತಿಯಿಂದ ಸಮಯ ಹಾಗೂ ನೋಟಿಸ್ ನೀಡಲಾಗಿತ್ತು. ಆದರೆ ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ವರಸಿದ್ಧಿ ವೇಣು ಗೋಪಾಲ್ ನೇತೃತ್ವದಲ್ಲಿ ನಗರಸಭೆಯ ವತಿಯಿಂದ ಕಸಾಯಿಖಾನೆಯನ್ನು ಜೆಸಿಬಿ ಯಂತ್ರದ ಮೂಲಕ ನೆಲಸಮ ಮಾಡಲಾಗಿದೆ.
ಈ ಜಾಗವು ನಗರಸಭೆಯ ವ್ಯಾಪ್ತಿಗೆ ಬರುವುದರಿಂದ 13.60 ಲಕ್ಷ ವೆಚ್ಚದಲ್ಲಿ ಉತ್ತಮ ಪಾರ್ಕ್ ನಿರ್ಮಾಣ ಮಾಡಲು ಗುದ್ದಲಿ ಪೂಜೆಯನ್ನು ಇದೇ ವೇಳೆ ನೆರವೇರಿಸಲಾಯಿತು.
ಇದನ್ನೂ ಓದಿ: ಜನದಟ್ಟಣೆ ತಗ್ಗಿಸಲು ರೈಲ್ವೆ ಫ್ಲಾಟ್‌ಫಾರಂ ಟಿಕೆಟ್ ದರ ಹೆಚ್ಚಿಸಿದ ನೈರುತ್ಯ ರೈಲ್ವೆ