ಚಿಕ್ಕಮಗಳೂರು : ಜಿಲ್ಲೆಯ ಅಜ್ಜಂಪುರ ತಾಲೂಕಿನ ಅಂತರಘಟ್ಟೆ ಜಾತ್ರೆ ನಡೆದು ತಿಂಗಳಾದ ಹಿನ್ನೆಲೆ ತಿಂಗಳ ಪೂಜೆಗೆಂದು ದಂಪತಿ ಮಗುವಿನೊಂದಿಗೆ ದೇವಸ್ಥಾನಕ್ಕೆ ಹೋಗಿದ್ದರು. ಪೂಜೆಗೆ ರೆಡಿ ಮಾಡುತ್ತಿರುವ ವೇಳೆ ಬಂದ ಆರು ಜನ ದೇವಸ್ಥಾನದ ಆವರಣದಲ್ಲೇ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ದೇವಸ್ಥಾನದ ಆವರಣದಲ್ಲೇ ಆರು ಜನ ಮದ್ಯವ್ಯಸನಿಗಳು ಪೂಜೆ ಮಾಡ್ತಿದ್ದ ಮಹಿಳೆ ಮೇಲೆ ಎಲ್ಲೆಂದರಲ್ಲಿ ಕೈ ಹಾಕಿ ಲೈಂಗಿಕ ಹಿಂಸೆ ನೀಡಿದ್ದಾರೆ ಎಂದು ಮಹಿಳೆಯ ಕುಟುಂಬದ ಸದಸ್ಯರು ಆರೋಪ ಮಾಡಿದ್ದಾರೆ.
ಗಲಾಟೆ ಮಾಡುತ್ತಿದ್ದ ಯುವಕರಿಗೆ ಏಕೆ ಹೀಗೆ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ ಗಂಡನ ಕೈ ಬೆರಳನ್ನೇ ಮುರಿದಿದ್ದಾರೆ. ಅಮ್ಮ ಎಂದು ಓಡಿ ಬಂದ ಮಗುವಿನ ಮೇಲೂ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಓದಿ:ಸಿಡಿ ಪ್ರಕರಣದ ರೂವಾರಿಗಳಾದ ನರೇಶ್, ಅರುಣ್ ಮನೆ ಮೇಲೆ SIT ದಾಳಿ
ಈ ಸಂಬಂಧ ದಂಪತಿ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸದ್ಯ ಈ ಆರು ದುರುಳರನ್ನ ಪೊಲೀಸರು ಬಂಧಿಸಿದ್ದಾರೆ. ಆರು ಜನ ಪೊಲೀಸರಿಗೆ ಸಿಕ್ಕಿ ಬೀಳುತ್ತಲೇ ಮಹಿಳೆಯ ಕುಟುಂಬದ ಸದಸ್ಯರ ಬಳಿ ಬಂದು ರಾಜಿಯಾಗುವ ನಾಟಕ ಕೂಡ ಆಡಿದ್ದಾರೆ.