ಚಿಕ್ಕಮಗಳೂರು : ಕೊರೊನಾ ವೈರಸ್ ಭೀತಿ ಹಿನ್ನೆಲೆ ವಧು-ವರ ಮಾಸ್ಕ್ ಧರಿಸಿ ಸರಳವಾಗಿ ಮದುವೆಯಾಗಿರುವ ಘಟನೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ಸುಶಾಂತ್ ಹಾಗೂ ನಿಶ್ಚಿತಾ ಎಂಬುವರ ವಿವಾಹ ನಗರದ ಚರ್ಚ್ನಲ್ಲಿ ನಿಗದಿಯಾಗಿತ್ತು. ಕೊರೊನಾ ಭೀತಿ ಹಿನ್ನೆಲೆ ಮೂಡಿಗೆರೆಯ ಬಣಕಲ್ ಗ್ರಾಮದ ವಧುವಿನ ಮನೆಯಲ್ಲಿ ಅತ್ಯಂತ ಸರಳವಾಗಿ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ನೆರವೇರಿತು.
ಈ ಮದುವೆಯಲ್ಲಿ ಭಾಗವಹಿಸಿದ್ದ ಕುಟುಂಬದ ಎಲ್ಲಾ ಸದಸ್ಯರು ಹಾಗೂ ಈ ನವ ಜೋಡಿ ಮಾಸ್ಕ್ ಧರಿಸಿರೋದು ವಿಶೇಷವಾಗಿತ್ತು. ಅಲ್ಲದೇ ಕಾರ್ಯಕ್ರಮ ಮುಗಿಯುವವರೆಗೂ ನವ ಜೋಡಿ ಮಾಸ್ಕ್ ಧರಿಸುವ ಮೂಲಕ ಮಾಸ್ಕ್‌ನ ಮಹತ್ವ ತಿಳಿಸಿಕೊಟ್ಟಿದ್ದಾರೆ.