ETV Bharat / state

ಸಿದ್ದಾರ್ಥ್ ನಾಪತ್ತೆ ಪ್ರಕರಣ: ತಾಯಿ ವಸಂತಿ ಹೆಗ್ಡೆ ಆರೋಗ್ಯದಲ್ಲಿ ಏರುಪೇರು - ಚೇತನ ಹಳ್ಳಿ

ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ಹೆಗ್ಡೆ ನಾಪತ್ತೆ ವಿಚಾರ ತಿಳಿಯುತ್ತಿದ್ದಂತೆ ಅವರ ತಾಯಿ ವಸಂತಿ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ತಿಳಿದುಬಂದಿದೆ. ಸಂಬಂಧಿಕರು ಹಾಗೂ ಸ್ನೇಹಿತರು ಆಗಮಿಸಿ, ಸಿದ್ದಾರ್ಥ್ ಅವರ ತಾಯಿಯ ಆರೋಗ್ಯ ವಿಚಾರಿಸುತ್ತಿದ್ದಾರೆ.

ಸಿದ್ದಾರ್ಥ್ ನಾಪತ್ತೆ
author img

By

Published : Jul 30, 2019, 6:17 PM IST

ಚಿಕ್ಕಮಗಳೂರು: ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ಹೆಗ್ಡೆ ಅವರು ನಿನ್ನೆ ಸಂಜೆಯಿಂದಾ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮೂಡಿಗೆರೆ ತಾಲೂಕಿನಲ್ಲಿನ ಚೇತನ ಹಳ್ಳಿಯಲ್ಲಿರುವ ಚೇತನ ಕಾಫಿ ಎಸ್ಟೇಟ್​ಗೆ ಸಂಬಂಧಿಕರು ಹಾಗೂ ಸ್ನೇಹಿತರ ದಂಡು ಹರಿದು ಬರುತ್ತಿದೆ.

ಚೇತನ ಕಾಫಿ ಎಸ್ಟೇಟ್​ನಲ್ಲಿ ಸಿದ್ದಾರ್ಥ್​ ಅವರ ತಾಯಿ ವಸಂತಿ ಹೆಗ್ಡೆ ವಾಸವಾಗಿದ್ದು, ಪುತ್ರನ ನಾಪತ್ತೆ ವಿಚಾರ ತಿಳಿಯುತ್ತಿದ್ದಂತೆಯೇ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎಂದು ಹೇಳಾಗುತ್ತಿದೆ. ಇಂದು ಬೆಳಗ್ಗೆಯಿಂದ ವಸಂತಿ ಹೆಗ್ಡೆ ಅವರನ್ನು ವೈದ್ಯರು ಎರಡು ಬಾರಿ ತಪಾಸಣೆ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಚೇತನ ಹಳ್ಳಿಯಲ್ಲಿರುವ ಚೇತನ ಕಾಫೀ ಎಸ್ಟೇಟ್

ಇನ್ನು ಸಂಬಂಧಿಕರು ಹಾಗೂ ಸ್ನೇಹಿತರು ಮನೆಗೆ ಆಗಮಿಸಿ, ಸಿದ್ಧಾರ್ಥ್​ ಅವರ ತಾಯಿಯ ಆರೋಗ್ಯ ವಿಚಾರಿಸುವುದರ ಜೊತೆಗೆ ಧೈರ್ಯ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಕಳೆದ 15 ದಿನಗಳ ಹಿಂದೆ ಮೈಸೂರಿಗೆ ಹೋಗಿದ್ದ ಸಿದ್ದಾರ್ಥ್ ಅವರ ತಾಯಿ ಬಳಿಕ ವಾಪಸ್ ಚೇತನ ಎಸ್ವೇಟ್​ಗೆ ಬಂದಿದ್ದರು. ಕಳೆದ 15 ದಿನಗಳ ಹಿಂದೆ ಸಿದ್ದಾರ್ಥ್ ಕೂಡ ಎಸ್ಟೇಟ್​ಗೆ ಬಂದು ತಾಯಿಯನ್ನು ನೋಡಿಕೊಂಡು ಹೋಗಿದ್ದರಂತೆ. ಇದೀಗ ತೋಟದ ಮನೆಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.

Intro:Kn_Ckm_06_Siddarat mother sick_av_7202347Body:

ಚಿಕ್ಕಮಗಳೂರು :-

ಕಾಫೀ ಡೇ ಯ ಸಂಸ್ಥಾಪಕ ಸಿದ್ದಾರ್ಥ ಹೆಗ್ಡೆ ಅವರು ನಿನ್ನೆ ಸಂಜೆಯಿಂದಾ ಮಂಗಳೂರಿನ ಉಳ್ಳಾಲದ ನೇತ್ರಾವತಿ ಸೇತುವೆ ಮೇಲಿಂದ ನಾಪತ್ತೆ ಪ್ರಕರಣ ಹಿನ್ನಲೆ ಮೂಡಿಗೆರೆ ತಾಲೂಕಿನಲ್ಲಿರುವ ಚೀಕನಹಳ್ಳಿಯಲ್ಲಿರುವ ಚೇತನ ಕಾಫೀ ಎಸ್ವೇಟ್ ಗೆ ಅವರ ಸಂಭಧಿಕರು ಹಾಗೂ ಸ್ನೇಹಿತರ ದಂಡೇ ಹರಿದು ಬರುತ್ತಿದೆ.ಈ ಚೇತನ ಹಳ್ಳಿ ಎಸ್ವೇಟ್ ನಲ್ಲಿ ಸಿದ್ದಾರ್ಥ ಅವರ ತಾಯಿ ವಸಂತಿ ಹೆಗ್ಡೆ ಅವರು ವಾಸವಾಗಿದ್ದು ಸಿದ್ದಾರ್ಥ ಅವರ ನಾಪತ್ತೆ ವಿಚಾರ ತಿಳಿಯುತ್ತಿದ್ದಂತೆಯೇ ಅವರ ಆರೋಗ್ಯದಲ್ಲಿ ಏರು ಪೇರು ಉಂಟಾಗಿದೆ ಎಂದೂ ಹೇಳಾಗುತ್ತಿದೆ.ಇದೇ ಮನೆಯಲ್ಲಿ ಇವರು ವಾಸವಿದ್ದು ಎಲ್ಲರೂ ಅವರನ್ನು ಹೋಗಿ ಮಾತನಾಡಿಸಿಕೊಂಡು ಆರೋಗ್ಯ ವಿಚಾರಣೆ ಮಾಡುತ್ತಿದ್ದು ಇಂದೂ ಬೆಳಗ್ಗೆಯಿಂದಾ ಎರಡೂ ಬಾರೀ ವೈದ್ಯರು ಬಂದೂ ಹೋಗಿ ಅವರ ಆರೋಗ್ಯ ತಪಾಸಣೆ ಮಾಡಿದ್ದಾರೆ ಎಂದೂ ಮಾಹಿತಿ ಮೂಲಗಳಿಂದಾ ತಿಳಿದು ಬರುತ್ತಿದೆ.ಕಳೆದ 15 ದಿನಗಳ ಹಿಂದೇ ಮೈಸೂರಿಗೆ ಸಿದ್ದಾರ್ಥ ಅವರ ತಾಯಿ ವಾಪಸ್ ಚೇತನ ಎಸ್ವೇಟ್ ಗೆ ಬಂದಿದ್ದರು.ಕಳೆದ 15 ದಿನಗಳ ಹಿಂದೇ ಸಿದ್ದಾರ್ಥ ಅವರು ಈ ಎಸ್ಟೇಟ್ ಗೆ ಬಂದೂ ತಾಯಿಯನ್ನು ನೋಡಿಕೊಂಡು ಹೋಗಿದ್ದರು ಎಂಬ ಮಾಹಿತಿ ಮೂಲಗಳಿಂದಾ ತಿಳಿದು ಬರುತ್ತಿದ್ದು ತೋಟದ ಮನೆಗೆ ಪೋಲಿಸರ ಬಿಗಿ ಭದ್ರತೆಯನ್ನು ಓದಗಿಸಲಾಗಿದೆ.......

Conclusion:ರಾಜಕುಮಾರ್.....
ಈ ಟಿವಿ ಭಾರತ್.....
ಚಿಕ್ಕಮಗಳೂರು.....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.