ETV Bharat / state

ಅಂತಾರಾಜ್ಯ ಜನರ ಪ್ರವೇಶದಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ: ಶೋಭಾ ಕರಂದ್ಲಾಜ್ಞೆ

ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆ ಗ್ರೀನ್ ಜೋನ್​ನಲ್ಲಿದ್ದವು. ಅಂತಾರಾಜ್ಯದಿಂದ ಜನರನ್ನು ಕರೆಸಿಕೊಳ್ಳಲು ಪ್ರಾರಂಭ ಮಾಡಿದ ತಕ್ಷಣ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲಿ ದೊಡ್ಡ ಪ್ರಮಾಣದ ಕ್ವಾರಂಟೈನ್​ ಮಾಡಬೇಕಾಗುತ್ತದೆ ಎಂದು ಸಂಸದೆ ಶೋಭಾ ಕರಂದ್ಲಾಜ್ಞೆ ಹೇಳಿದರು.

shobha-karandlaje-corona-awareness-meeting
ಶೋಭಾ ಕರಂದ್ಲಾಜ್ಞೆ
author img

By

Published : May 22, 2020, 4:15 PM IST

ಚಿಕ್ಕಮಗಳೂರು: ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮದ ಕುರಿತು ಜಿಲ್ಲಾಧಿಕಾರಿ, ಶಾಸಕರು ಹಾಗೂ ತಾಲೂಕುಮಟ್ಟದ ಅಧಿಕಾರಿಗಳ ಜೊತೆ ಜಿಲ್ಲೆಯ ಮೂಡಿಗೆರೆಯ ಪೂರ್ಣಚಂದ್ರ ತೇಜಸ್ವಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಂಸದೆ ಶೋಭಾ ಕರಂದ್ಲಾಜ್ಞೆ ನೇತೃತ್ವದಲ್ಲಿ ಚರ್ಚೆ ಮಾಡಲಾಯಿತು.

ಚರ್ಚೆ ನಂತರ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜ್ಞೆ, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಿಗೆ ಮುಂಬೈಯಿಂದ ಜನರು ಬರುತ್ತಿದ್ದು, ಬಹಳ ಜನರಲ್ಲಿ ಕೊರೊನಾ ಪತ್ತೆಯಾಗುತ್ತಿದೆ. ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆ ಗ್ರೀನ್ ಜೋನ್​ನಲ್ಲಿದ್ದವು. ಅಂತಾರಾಜ್ಯದಿಂದ ಜನರನ್ನು ಕರೆಸಿಕೊಳ್ಳಲು ಪ್ರಾರಂಭ ಮಾಡಿದ ತಕ್ಷಣ ಕೊರೊನಾ ಪಾಸಿಟಿವ್ ಸಂಖ್ಯೆ ಏರುತ್ತಿದೆ.

ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಶಾಸಕರು, ಅಧಿಕಾರಿಗಳ ಜೊತೆ ಸಂಸದೆ ಶೋಭಾ ಕರಂದ್ಲಾಜ್ಞೆ ಚರ್ಚೆ

ಮೂಡಿಗೆರೆ ತಾಲೂಕಿನಲ್ಲಿ ಸುಮಾರು 800 ಜನರನ್ನು ಕ್ವಾರಂಟೈನ್ ಮಾಡಬೇಕು. ಆದರೆ ಅಂತಹ ಸೌಲಭ್ಯ ಈ ಭಾಗದಲ್ಲಿಲ್ಲ. ಒಂದು ಕೊಠಡಿಯಲ್ಲಿ ಹತ್ತರಿಂದ ಇಪ್ಪತ್ತು ಜನರು ವಾಸ ಮಾಡುತ್ತಿದ್ದಾರೆ. ಇದರಿಂದ ಅನಾಹುತ ಹೆಚ್ಚು. ಮಲೆನಾಡಿನ ಒಂಟಿ ಮನೆಗಳಲ್ಲಿ ಕ್ವಾರಂಟೈನ್ ಮಾಡಲು ಮುಖ್ಯ ಕಾರ್ಯದರ್ಶಿ ಅನುಮತಿ ನೀಡಬೇಕು. ಅಲ್ಲದೆ ಎಲ್ಲರೂ ಜಾಗೃತಿ ವಹಿಸಬೇಕು ಎಂದು ಸಂಸದರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.