ಚಿಕ್ಕಮಗಳೂರು: ಅಮೆಜಾನ್ ಕಂಪನಿ ತನ್ನ ಗ್ರಾಹಕನಿಗೆ ಮಹಾ ಪಂಗನಾಮ ಹಾಕಿರುವ ಆರೋಪ ಕೇಳಿ ಬಂದಿದೆ. ಮೊಬೈಲ್ ಬದಲು ಆಲೂಗಡ್ಡೆ, ಕಲ್ಲು, ವಿಮ್ ಸೋಪು ಕಳುಹಿಸಿದ್ದಾಗಿ ಗ್ರಹಾಕರೊಬ್ಬರು ಆರೋಪಿಸಿದ್ದಾರೆ.
ಜಿಲ್ಲೆಯ ಶೃಂಗೇರಿ ನಗರದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ರೆಡ್ಮಿ ಮೊಬೈಲ್ ಬದಲು ಆಲೂಗಡ್ಡೆ, ಸೋಪು, ಕಲ್ಲು ಕಳುಹಿಸಿ ಕೊಟ್ಟಿದೆ. ಶೃಂಗೇರಿ ನಗರದ ಗ್ರಾಹಕ ಹೈದರಾಲಿ ಅಮೆಜಾನ್ ಕಂಪನಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.