ಚಿಕ್ಕಮಗಳೂರು : ಹೆಸರಾಂತ ಸಾಹಿತಿ ಡಾ. ಎಂ. ಚಿದಾನಂದ ಮೂರ್ತಿ ಅವರ ಅಗಲಿಕೆಗೆ ಬಾಳೆಹೊನ್ನೂರು ಪೀಠದ ಶ್ರೀ ರಂಭಾಪುರಿ ಜಗದ್ಗುರುಗಳು ಸಂತಾಪ ಸೂಚಿಸಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಕನ್ನಡ ಸಾರಸ್ವತ ಲೋಕದಲ್ಲಿ ಅತ್ಯಂತ ಹೆಸರು ಮಾಡಿದ್ದ ಡಾ. ಎಂ ಚಿದಾನಂದ ಮೂರ್ತಿ ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಗೈದ ವ್ಯಕ್ತಿಯಾಗಿದ್ದರು. ಕನ್ನಡ ಉಳಿವಿಗಾಗಿ ಅವರು ಮಾಡಿದ ಹೋರಾಟವನ್ನು ಯಾರೂ ಮರೆಯುವಂತಿಲ್ಲ ಎಂದು ಕೊಂಡಾಡಿದ್ದಾರೆ.
ವೀರಶೈವ, ಲಿಂಗಾಯಿತ ಎರಡೂ ಒಂದೆ. ಇವುಗಳನ್ನು ಹಿಂದೂ ಸಂಸ್ಕೃತಿಯಿಂದ ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಅವರ ಗಟ್ಟಿ ನಿರ್ಧಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. 88 ನೇ ವಯಸ್ಸಿನಲ್ಲಿಯೂ ಅವರ ಕಾರ್ಯಚಟುವಟಿಕೆ ನಿರಂತರವಾಗಿತ್ತು. ಆದರೆ ಅವರ ಅಗಲಿಕೆ ಅತ್ಯಂತ ನೋವುಂಟು ಮಾಡಿದ್ದು, ಆತ್ಮಕ್ಕೆ ಪರಮಾತ್ಮ ಚಿರಶಾಂತಿ ನೀಡಲಿ. ಅವರ ಅಗಲಿಕೆಯ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬದ ಸದಸ್ಯರಿಗೆ ನೀಡಲಿ ಎಂದು ಶ್ರೀಗಳು ಸಂತಾಪ ವ್ಯಕ್ತಪಡಿಸಿದ್ದಾರೆ.