ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರ ಪರಿಣಾಮ ನಾನಾ ಅವಾಂತರಗಳು ಸಂಭವಿಸುತ್ತಿವೆ. ತಾಲೂಕಿನ ಜಾವಳಿ-ಕೆಳಗೂರು ಬಳಿ ಕ್ವಾಲಿಸ್ ಕಾರ್ ಪಲ್ಟಿಯಾಗಿದೆ.
ಬೆಂಗಳೂರಿಂದ ಹೊರನಾಡು ದೇವಸ್ಥಾನಕ್ಕೆ ಹೋಗುತ್ತಿದ್ದ ಪ್ರವಾಸಿ ವಾಹನ ಅಪಘಾತಕ್ಕೀಡಾಗಿದ್ದು, ತಡೆ ಗೋಡೆ ಇಲ್ಲದ ಕಾರಣ ಈ ದುರ್ಘಟನೆ ನಡೆದಿದೆ. ಪರಿಣಾಮ ಏಳು ಮಂದಿ ಪ್ರವಾಸಿಗರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಮೂಡಿಗೆರೆ ತಾಲೂಕಿನ ಜಾವಳಿ-ಕೆಳಗೂರು ಬಳಿ ಈ ದುರ್ಘಟನೆ ನಡೆದಿದ್ದು, ಕಳಸ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.