ETV Bharat / state

ಚಿಕ್ಕಮಗಳೂರು: ಮಾಲೀಕನಿಂದ ಗರ್ಭಿಣಿ ಮೇಲೆ ಹಲ್ಲೆ.. ಗರ್ಭಪಾತ - coffee plant owner assault to pregnant woman

ಬಾಳೆಹೊನ್ನೂರು ಸಮೀಪದ ಜೇನುಗದ್ದೆಯ ಪುರ ಗ್ರಾಮದಲ್ಲಿ ಗರ್ಭಿಣಿಗೆ ತೋಟದ ಮಾಲೀಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಇದರಿಂದ ಮಹಿಳೆಗೆ ಗರ್ಭಪಾತ ಆಗಿದೆ.

ಅರ್ಪಿತ
ಅರ್ಪಿತ
author img

By

Published : Oct 11, 2022, 8:28 PM IST

Updated : Oct 11, 2022, 10:23 PM IST

ಚಿಕ್ಕಮಗಳೂರು: ದಲಿತ ಕಾರ್ಮಿಕರನ್ನ ಕೂಡಿ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕನ ವಿಡಿಯೋ ಮಾಡಿದ್ದಕ್ಕೆ ಗರ್ಭಿಣಿ ಮೇಲೂ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ಗರ್ಭಿಣಿ ಮಹಿಳೆಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ತೋಟದ ಮಾಲೀಕ ಜಗದೀಶ್ ಗೌಡ ಎಂಬುವರಿಂದ ಹಲ್ಲೆ ಮಾಡಿರುವ ಆರೋಪವಿದೆ. ಬಾಳೆಹೊನ್ನೂರು ಸಮೀಪದ ಜೇನುಗದ್ದೆಯ ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಹಲ್ಲೆಗೊಳಗಾದ ಮಹಿಳೆ ಅರ್ಪಿತಾ ಅವರು ಮಾತನಾಡಿರುವುದು

ಕಾಫಿ ತೋಟದ ಕೆಲಸಕ್ಕೆ ಸೇರುವಾಗ 9 ಲಕ್ಷ ಅಡ್ವಾನ್ಸ್ ಅನ್ನು ಮಾಲೀಕ ನೀಡಿದ್ದಾರೆ. ಈಗ ಬೇರೆಡೆ ಕೆಲ್ಸಕ್ಕೆ ಹೋಗುತ್ತೇವೆ ಎಂದಾಗ ಹಣ ವಾಪಸ್​​ ಕೇಳಿದ್ದಾರೆ. ಸಮಯ ನೀಡಿ ಹಣ ಕಟ್ಟಿ ಹೋಗ್ತೇವೆ ಎಂದರೂ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

ಗರ್ಭಿಣಿ ಮೇಲೆ ಹಲ್ಲೆ ಮಾಡಿದ ಹಿನ್ನೆಲೆ ಅರ್ಪಿತಾಗೆ ಗರ್ಭಪಾತ ಆಗಿದೆ. ಈ ಕುರಿತು ಆರೋಪಿಗಳ ವಿರುದ್ದ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೆಕ್ಷನ್ 504, 323, 342 ಸೇರಿದಂತೆ ಎಸ್ಸಿ, ಎಸ್ಟಿ ದೌರ್ಜನ್ಯದ ಅಡಿ ಪ್ರಕರಣ ದಾಖಲಾಗಿದೆ.

ಆರೋಪಿಗಳಾದ ಜಗದೀಶ್, ತಿಲಕ್ ವಿರುದ್ದ ಪ್ರಕರಣ ದಾಖಲಾಗಿದ್ದು, ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿ ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

ಓದಿ: ಚಿಕ್ಕಮಗಳೂರು: ಕಾರ್ಮಿಕರನ್ನ ಕೂಡಿ ಹಾಕಿ ಹಲ್ಲೆ ನಡೆಸಿರುವ ಆರೋಪ

Last Updated : Oct 11, 2022, 10:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.