ETV Bharat / state

ಬಾಳೆಹೊನ್ನೂರು ವೈದ್ಯರ ನಿರ್ಲಕ್ಷ್ಯ ಆರೋಪ.. ತುಂಬು ಗರ್ಭಿಣಿ ಸಾವು!

author img

By

Published : Dec 12, 2021, 3:41 PM IST

Updated : Dec 12, 2021, 4:30 PM IST

ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಯ ವೈದ್ಯ ಡಾಕ್ಟರ್ ಎಲ್ಡೋಸ್ ವರ್ಗೀಸ್ ಅವರ ಬೇಜವಾಬ್ದಾರಿಯಿಂದ ಗರ್ಭಿಣಿ ಪ್ರಾಣ ಕಳೆದುಕೊಳ್ಳುವಂತಾಯ್ತು ಎಂದು ಆರೋಪ ಕೇಳಿ ಬಂದಿದೆ..

Pregnant died at balehonnuru
ಬಾಳೆಹೊನ್ನೂರಿನಲ್ಲಿ ಗರ್ಭಿಣಿ ಸಾವು

ಚಿಕ್ಕಮಗಳೂರು : ವೈದ್ಯರ ನಿರ್ಲಕ್ಷ್ಯದಿಂದಾಗಿ ತುಂಬು ಗರ್ಭಿಣಿ ಪ್ರಾಣ ಕಳೆದುಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಯ ವೈದ್ಯ ಡಾಕ್ಟರ್ ಎಲ್ಡೋಸ್ ವರ್ಗೀಸ್ ಅವರ ಬೇಜವಾಬ್ದಾರಿಯಿಂದ ಎರಡು ಜೀವಗಳು ಹೋಗಿದೆ ಎಂದು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಆರೋಪಿಸಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕೂಡಲೇ ನಿರ್ಲಕ್ಷ್ಯ ತೋರಿದ ವೈದ್ಯ ಎಲ್ಡೋಸ್ ಅವರನ್ನು ಬಂಧಿಸಬೇಕೆಂದು ಸಾರ್ವಜನಿಕರು ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುತ್ತಿದ್ದಾರೆ.

ಬಾಳೆಹೊನ್ನೂರಿನಲ್ಲಿ ಗರ್ಭಿಣಿ ಸಾವು.. ಆಸ್ಪತ್ರೆ ಎದುರು ಸಂಬಂಧಿಕರಿಂದ ಪ್ರತಿಭಟನೆ..

ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾದ ಹೆಣ್ಣು ಮಗಳಿಗೆ ಸರಿಯಾಗಿ ಚಿಕಿತ್ಸೆ ನೀಡದೇ, ಅಗತ್ಯ ಸಮಯದಲ್ಲಿ ವೈದ್ಯರು ನೆರವಾಗದೇ ತಾಯಿ-ಮಗುವಿನ ಸಾವಿಗೆ ಕಾರಣರಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ಹಿಂದೆಯೂ ಕೂಡ ನರಸಿಂಹರಾಜಪುರದ ಆಸ್ಪತ್ರೆಯಲ್ಲಿ ಈ ರೀತಿಯದ್ದೇ ಒಂದು ಘಟನೆಗೆ ವೈದ್ಯ ಎಲ್ಡೋಸ್ ವರ್ಗೀಸ್ ಅವರು ಸಿಲುಕಿದ ಕಾರಣ ಅವರನ್ನು ಸಸ್ಪೆಂಡ್ ಮಾಡಲಾಗಿತ್ತು. ನಂತರ ಅವರು ಬಾಳೆಹೊನ್ನೂರಿನ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಇದನ್ನೂ ಓದಿ: ಕಾಪ್ಟರ್​ ದುರಂತದಲ್ಲಿ ಮೃತಪಟ್ಟ ಸೇನಾಧಿಕಾರಿಗಳಿಗೆ ವಿಧಾನಸೌಧದ ಮುಂದೆ ಸೈಕಲ್​ ಕ್ಲಬ್​ನಿಂದ ಶ್ರದ್ಧಾಂಜಲಿ

ಸದ್ಯ ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Last Updated : Dec 12, 2021, 4:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.