ಚಿಕ್ಕಮಗಳೂರು: ರಾಜ್ಯದಲ್ಲಿ ಈ ಬಾರಿ ಸರಿಯಾದ ಸಮಯಕ್ಕೆ ಮಳೆಯಾಗದ ಕಾರಣ ಮಳೆಗಾಗಿ ಪ್ರಾರ್ಥಿಸಿ ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ ಜು. 18ರಂದು ಕಾವೇರಿ ನದಿಗೆ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಮತ್ತು ರೈತರಿಗೆ ಅನುಕೂಲ ಆಗಲಿ ಎಂದು ಶ್ರೀರಂಗಪಟ್ಟಣದ ಕಾವೇರಿ ನದಿಗೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ವಿನಯ್ ಗುರೂಜಿ ಅವರು ಶ್ರೀರಂಗಪಟ್ಟಣಕ್ಕೆ ತೆರಳಿ ಕಾವೇರಿ ನದಿ ದಡದಲ್ಲಿ ನೂರಾರು ಭಕ್ತರೊಂದಿಗೆ ಸೇರಿ ಕಾವೇರಿ ನದಿಗೆ ವಿಶೇಷ ಪೂಜೆ ಸಲ್ಲಿಸಿ ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿದ್ರು. ಇದೇ ಸಂದರ್ಭದಲ್ಲಿ ಅವರ ಭಕ್ತರು ಮಳೆಗಾಗಿ ಭಜನೆ ಹಾಗೂ ಪಾರ್ಥನೆ ಸಲ್ಲಿಸಿದ್ದರು.
ಕಾವೇರಿ ನದಿಗೆ ವಿನಯ್ ಗೂರೂಜಿ ಅವರು ಬಾಗಿನ ಅರ್ಪಿಸಿದ್ದು, ರಾಜ್ಯಕ್ಕೆ ಉತ್ತಮ ಮಳೆಯಾಗಲಿ ಹಾಗೂ ರೈತರಿಗೆ ಒಳ್ಳೆಯದಾಗಲಿ ಎಂದು ಪಾರ್ಥನೆ ಸಲ್ಲಿಸಿದ್ದರು. ನಂತರ ಕಾವೇರಿ ನದಿಯ ನೀರನ್ನು ತೀರ್ಥದ ರೂಪದಲ್ಲಿ ಸ್ವೀಕರಿಸಿ, ನದಿಯ ದಡದಲ್ಲಿ ನೆರೆದಿದ್ದಂತಹ ನೂರೂರು ಭಕ್ತರ ತಲೆಯ ಮೇಲೆ ನೀರನ್ನು ಪ್ರಸಾದವಾಗಿ ಪ್ರೋಕ್ಷಣೆ ಮಾಡಿದ್ದರು. ಇದೀಗ ಈ ವಿಶೇಷ ಪೂಜೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.