ETV Bharat / state

ವಿದ್ಯುತ್​ ವ್ಯತ್ಯಯ: ನಾಡ ಕಚೇರಿ ಮುಂದೆ ಜನರ ಸಾಲು - ಸೋಲಾರ್​ ಮತ್ತು ಯುಪಿಎಸ್​​ ಇದ್ದರೂ ವ್ಯರ್ತ

ನಾಡಕಚೇರಿಗೆ ವಿವಿಧ ಕೆಲಸ ಕಾರ್ಯಗಳಿಗೆ ಎಂದು ಬರುವ ಜನರಿಗೆ ವಿದ್ಯುತ್​ ವ್ಯತ್ಯಯದಿಂದ ಸರಿಯಾದ ಸಮಯಕ್ಕೆ ಕೆಲಸಗಳು ಆಗುತ್ತಿಲ್ಲ. ನಾಡ ಕಚೇರಿಯಲ್ಲಿ ಸೋಲಾರ್​ ಮತ್ತು ಯುಪಿಎಸ್​​ನ ಸೌಲಭ್ಯ ಹಾಳಾಗಿ ವರ್ಷಗಳೇ ಕಳೆದರೂ ಅಧಿಕಾರಿಗಳು ಅದರತ್ತ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

power cut problem
ನಾಡ ಕಚೇರಿಯ ಮುಂದೆ ಜನರ ಸಾಲು
author img

By

Published : Apr 1, 2022, 8:19 PM IST

ಚಿಕ್ಕಮಗಳೂರು: ಸರ್ಕಾರ ಗ್ರಾಮಾಂತರ ಪ್ರದೇಶದ ಜನರಿಗೆ ಇ ಡಿಜಿಟಲ್ ಸೇವೆಯ ಮೂಲಕ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಜನರು ವಿವಿಧ ಸೇವೆಗಳನ್ನು ಪಡೆಯುಲು ನಾಡ ಕಚೇರಿಗೆ ಜನರು ಹೋಗಲೇ ಬೇಕು. ಆದರೆ, ನಾಡಕಚೇರಿಯಲ್ಲಿ ವಿದ್ಯುತ್ ಸಮಸ್ಯೆಯಿಂದ ಜನರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮದಲ್ಲಿ ಬಡಜನರು ಇ ಡಿಜಿಟಲ್ ಸೌಲಭ್ಯ ಪಡೆಯುಲು ಪರದಾಟ ನಡೆಸುತ್ತಿದ್ದಾರೆ. ಏಕೆಂದರೆ ವಿದ್ಯುತ್ ಸಮಸ್ಯೆಯಿಂದ ನಾಡ ಕಚೇರಿಯಲ್ಲಿ ಕೆಲಸವೇ ಆಗುತ್ತಿಲ್ಲ, ಇದರ ಪರಿಣಾಮ ಜನರು ಬಿಸಲ ಧಗೆಯಲ್ಲೇ ನಿಂತಲೇ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಚೇರಿ ಸಿಬ್ಬಂದಿಗಳು ಜನರಿಗೆ ನಾಳೆ ಬನ್ನಿ,ಇಲ್ಲವೇ ಕರೆಂಟ್ ಬರುವ ತನಕ ಕಾಯಿರಿ ಎನ್ನುವ ಉತ್ತರವನ್ನು ನೀಡುತ್ತಿದ್ದಾರೆ.

ವಿದ್ಯುತ್​ ವ್ಯತ್ಯಯ: ನಾಡ ಕಚೇರಿಯ ಮುಂದೆ ಜನರ ಸಾಲು

ವಿಧವಾವೇತನ, 94 ಸಿಗೆ ಅರ್ಜಿ, ಜಾತಿ ದೃಢೀಕರಣ ಪತ್ರ ಮುಂತಾದವನ್ನು ಪಡೆಯಲು ನಾಡಕಚೇರಿಗೆ ಜನರು ಬರಲೇ ಬೇಕು. ಆದರೆ, ವಿದ್ಯುತ್ ಸಮಸ್ಯೆಯಿಂದ ಜನರಿಗೆ ಸರಿಯಾದ ಸಮಯಕ್ಕೆ ದಾಖಲೆಗಳೆ ಸಿಗುತ್ತಿಲ್ಲ.

ಜಾವಳಿ ನಾಡ ಕಚೇರಿಯಲ್ಲಿರುವ ಯೂಪಿಎಸ್ ಮತ್ತು ಸೋಲಾರ್ ಕೆಲ ವರ್ಷದಿಂದ ನಿಷ್ಕ್ರಿಯಗೊಂಡು ಉಪಯೋಗಕ್ಕೆ ಬಾರದಂತಾಗಿದೆ. ಇದರಿಂದಾಗಿ ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಸಾರ್ವಜನಿಕರು ಸೇವೆ ಪಡೆಯಲಾಗದೇ ಪರದಾಡುವಂತಾಗಿದೆ. ಈ ಭಾಗದಲ್ಲಿ ಆಗಾಗ ವಿದ್ಯುತ್ ಕಡಿತಗೊಳ್ಳುವುದು ಸಾಮಾನ್ಯವಾಗಿದ್ದು, ನಾಡ ಕಚೇರಿಗೆ ವಿವಿಧ ಸೇವೆ ಪಡೆಯಲು ಬರುವ ಸಾರ್ವಜನಿಕರು ಸಕಾಲಕ್ಕೆ ಸೇವೆ ಪಡೆಯಲು ಸಾಧ್ಯವಾಗದೇ ಗಂಟೆಗಟ್ಟಲೇ ಕಾಯುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಅಮಿತ್ ಶಾ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ: ಚುನಾವಣಾ ಅಜೆಂಡಾ ಸೆಟ್ ಮಾಡ್ತಾರಾ ಬಿಜೆಪಿ ಚಾಣಕ್ಯ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.