ಚಿಕ್ಕಮಗಳೂರು : ಕೊರೊನಾದಿಂದ ಮೃತಪಟ್ಟರೇ ಸಾಕು ಸ್ವತಃ ಸಂಬಂಧಿಕರೇ ದೂರ ಸರಿಯುತ್ತಿರುವ ಈ ಕಾಲಘಟ್ಟದಲ್ಲಿ ಮಾನವೀಯತೆಯೇ ಇಲ್ಲದಂತಾಗಿದೆ. ಆದರೆ, ಇದಕ್ಕೆ ವಿರುದ್ದವಾಗಿ ಜಿಲ್ಲೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಶವ ಸಂಸ್ಕಾರಕ್ಕೆ ನೆರವಾಗಿ ಮಾದರಿಯಾಗಿದ್ದಾರೆ.
ಜಿಲ್ಲೆಯ ಶೃಂಗೇರಿಯ ವಿದ್ಯಾರಣ್ಯಪುರ ಅಗ್ರಹಾರ ನಿವಾಸಿ ನಾರಾಯಣ ದೀಕ್ಷಿತ್ ಅವರ ತಂದೆ ಪ್ರಕಾಶ್ ದೀಕ್ಷಿತ್ ಕೊರೊನಾದಿಂದ ಮೃತಪಟ್ಟಿದ್ದ ಸಂದರ್ಭದಲ್ಲಿ ಶವ ಸಂಸ್ಕಾರಕ್ಕೆ ಯಾವೊಬ್ಬ ಸಂಬಂಧಿಕರು ಮುಂದೆ ಬಂದಿಲ್ಲ. ಆಗ ಇನ್ನೇನು ಎಂಬ ಚಿಂತೆಯಲ್ಲಿದ್ದ ದೀಕ್ಷಿತ್ಗೆ ನೆರವಿಗೆ ಬಂದದ್ದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು.
ಸಂಘಟನೆಗೆ ಹಾಗೂ ತಂದೆಯ ಅಂತ್ಯ ಸಂಸ್ಕಾರಕ್ಕೆ ಕೈ ಜೋಡಿಸಿದ ಕಾರ್ಯಕರ್ತರಿಗೆ ನಾರಾಯಣ ದೀಕ್ಷಿತ್ ಧನ್ಯವಾದ ಸಲ್ಲಿಸಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಓದಿ: ಅರಬ್ಬೀ ಸಮುದ್ರದಲ್ಲಿ ಸಿಲುಕಿರುವ ಬೋಟ್.. ನೌಕಾಪಡೆ ಹೆಲಿಕಾಪ್ಟರ್ ಮೂಲಕ ನೌಕರರ ರಕ್ಷಣೆಗೆ ಚಿಂತನೆ