ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಿಷೇಧಿತ ಪಿಎಫ್ಐ ಸಂಘಟನೆ ಮೇಲೆ ಪೊಲೀಸರ ದಾಳಿ ಮುಂದುವರೆದಿದೆ. ಪಿಎಫ್ಐ ಸಂಘಟನೆಯ ಜಿಲ್ಲಾಧ್ಯಕ್ಷ ಚಾಂದ್ ಪಾಷಾ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಜೊತೆಗೆ ಚಿಕ್ಕಮಗಳೂರು ನಗರದ ಎಸ್ ಡಿಪಿಐ ಕಚೇರಿ ಮೇಲೂ ಪೊಲೀಸರು ರೇಡ್ ಮಾಡಿದ್ದಾರೆ.
ಪಿಎಫ್ಐ, ಎಸ್ಡಿಪಿಐ ಕಾರ್ಯಕರ್ತರು, ಮುಖಂಡರ ಚಟುವಟಿಕೆ ಬಗ್ಗೆ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದು, ಜಿಲ್ಲಾಧಿಕಾರಿಗಳ ಸರ್ಚ್ ವಾರೆಂಟ್ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದಾರೆ. ಎಸ್ಡಿಪಿಐ ಜಿಲ್ಲಾಧ್ಯಕ್ಷ ಗೌಸ್ ಮುನೀರ್ ಮನೆ ಹಾಗೂ ಕಚೇರಿಗಳ ಮೇಲೂ ಪೊಲೀಸರು ದಾಳಿ ನಡೆಸಿದ್ದು, ಗೌಸ್ ಮುನೀರ್ ನ ಉಪ್ಪಳ್ಳಿಯ ಮನೆ ಹಾಗೂ ಮಲ್ಲಂದೂರು ರಸ್ತೆಯ ಕಚೇರಿಯಲ್ಲೂ ಪರಿಶೀಲಿಸಲಾಗುತ್ತಿದೆ.
ಜಿಲ್ಲಾಧಿಕಾರಿ ನಿಯೋಜಿತ ವಿವಿಧ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ ನಡೆಯುತ್ತಿದ್ದು, ಜೊತೆಗೆ ಎಸ್ಡಿಪಿಐ ಜಿಲ್ಲಾ ಕಚೇರಿ ಮೇಲೂ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಗರದ ಮಲ್ಲಂದೂರು ರಸ್ತೆಯಲ್ಲಿರುವ ಎಸ್ಡಿಪಿಐ ಕಚೇರಿಯಲ್ಲಿ ಕಡತಗಳ ಪರಿಶೀಲನೆ ನಡೆಯುತ್ತಿದೆ.
ಇದನ್ನೂ ಓದಿ : ಪಿಎಫ್ಐನ ಎಲ್ಲಾ ಶಾಖಾ ಕಚೇರಿಗಳಿಗೆ ಸಂಜಯೊಳಗೆ ಬೀಗಮುದ್ರೆ: ಪೊಲೀಸ್ ಆಯುಕ್ತರ ಆದೇಶ