ಚಿಕ್ಕಮಗಳೂರು : ಜಿಲ್ಲೆಯ ತರೀಕೆರೆ ತಾಲೂಕಿನ ಬೆಟ್ಟದ ಹಳ್ಳಿ ಸಮೀಪದ ಕೆರೆಯಲ್ಲಿ ಪೊಲೀಸ್ ಪೇದೆಯ ಶವ ಪತ್ತೆಯಾಗಿದ್ದು, ಮೃತ ಪೇದೆಯನ್ನು ಬಿ.ಮಲ್ಲೇಶ್ ಎಂದು ಗುರ್ತಿಸಲಾಗಿದೆ.
ಮೃತ ಮಲ್ಲೇಶ್ ಕಡೂರು ತಾಲೂಕಿನ ಜಿ.ಯಾರದಕೆರೆ ಗ್ರಾಮದ ನಿವಾಸಿಯಾಗಿದ್ದಾರೆ. ಬಿ.ಮಲ್ಲೇಶ್ ಉಡುಪಿ ಜಿಲ್ಲೆಯ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೆರೆಯಲ್ಲಿ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗುತ್ತಿದೆ.
ತರೀಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತ ಶವವನ್ನು ಕೆರೆಯಿಂದ ಹೊರ ತೆಗೆದಿದ್ದು, ತರೀಕೆರೆಯ ತಾಲೂಕು ಆಸ್ವತ್ರೆಗೆ ರವಾನೆ ಮಾಡಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.