ETV Bharat / state

ಜನತಾ ಕರ್ಫ್ಯೂ ಜನರು ಪಾಲಿಸಬೇಕು: ಸಚಿವ ಸಿ.ಟಿ. ರವಿ - ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಮನವಿ

ಪ್ರಧಾನಿ ಮೋದಿ ಅವರು ಮಾನಸಿಕವಾಗಿ ಕೊರೊನಾ ವೈರಸ್ ಎದುರಿಸಲು ಜನರೇ ನಿರ್ಬಂಧ ಹೇರಿ ಕೊಳ್ಳಬೇಕು ಎಂದು ಹೇಳಿದ್ದಾರೆ. ನಾಳೆ ಅವರು ಕರೆ ನೀಡಿರುವ ಜನತಾ ಕರ್ಫ್ಯೂ ಜನರು ಪಾಲಿಸಬೇಕು ಎಂದು ಪ್ರವಾಸೋದ್ಯಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಮನವಿ ಮಾಡಿದ್ದಾರೆ.

: Minister C.T. Ravi
ಜನತಾ ಕರ್ಫ್ಯೂವನ್ನು ಜನರು ಪಾಲಿಸಬೇಕು: ಸಚಿವ ಸಿ.ಟಿ. ರವಿ
author img

By

Published : Mar 21, 2020, 4:55 PM IST

ಚಿಕ್ಕಮಗಳೂರು: ಇಡೀ ಸಮಾಜ ಒಟ್ಟಾಗಿ ನಿಂತು ಕೋವಿಡ್​-19 ಎದುರಿಸ ಬೇಕಾಗಿದೆ ಎಂದು ಪ್ರವಾಸೋದ್ಯಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಸಲಹೆ ನೀಡಿದರು.

ಜನತಾ ಕರ್ಫ್ಯೂವನ್ನು ಜನರು ಪಾಲಿಸಬೇಕು: ಸಚಿವ ಸಿ.ಟಿ. ರವಿ

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಮಾನಸಿಕವಾಗಿ ಕೊರೊನಾ ವೈರಸ್ ಎದುರಿಸಲು ಜನರೇ ನಿರ್ಬಂಧ ಹೇರಿ ಕೊಳ್ಳಬೇಕು ಎಂದು ಹೇಳಿದ್ದಾರೆ. ನಾಳೆ ಅವರು ಕರೆ ನೀಡಿರುವ ಜನತಾ ಕರ್ಫ್ಯೂವನ್ನು ಜನರು ಪಾಲಿಸಬೇಕು. ಕೊರೊನಾ ತಡೆಗಟ್ಟಲು ಜಿಲ್ಲಾಡಳಿತದ ಜೊತೆ ನಾನು ಚರ್ಚಿಸಿದ್ದೇನೆ. ಈ ಕುರಿತು ಜಾಗೃತಿ ಮೂಡಿಸಲು ಎನ್​ಎಸ್​ಎಸ್, ಹೋಂ ಗಾರ್ಡ್ಸ್, ಸ್ಕೌಟ್ ಅಂಡ್ ಗೈಡ್ ಕಾರ್ಯಕರ್ತರನ್ನು ಬಳಸಿಕೊಳ್ಳಲು ಚಿಂತನೆ ಕೂಡ ನಡೆಸಿದ್ದೇವೆ. ಚಿಕ್ಕಮಗಳೂರಿನಲ್ಲಿ ಈಗಾಗಲೇ 128 ಜನರ ಮೇಲೆ ನಿಗಾ ಇಡಲಾಗಿದೆ. ಎಲ್ಲ ನೆಗೆಟಿವ್ ಅಂಶ ಕಂಡು ಬಂದಿದೆ. ಯಾವುದೇ ಪರಿಸ್ಥಿತಿ ಬಂದರೂ ಪ್ರಾಥಮಿಕ ಹಂತದಲ್ಲಿ ಅದನ್ನು ನಿವಾರಿಸಲು ನಾವು ತಯಾರಿದ್ದೇವೆ. ನಾಳೆ, ನನ್ನನ್ನು ಭೇಟಿ ಮಾಡಲು ಸಾರ್ವಜನಿಕರು ಬರಬೇಡಿ. ಸ್ಯಾನಿಟೈಸರ್ ಉತ್ಪನ್ನಗಳನ್ನು ಸ್ಥಳೀಯವಾಗಿ ತಯಾರಿಸಲು ಜಿಲ್ಲಾ ಪಂಚಾಯಿತ್​ ಸಿಇಒ ಅವರಿಗೆ ಹೇಳಿದ್ದೇವೆ. ಮನೆಯಲ್ಲಿಯೇ ಈ ವಸ್ತುಗಳನ್ನು ತಯಾರಿಸಲು ಯೋಜನೆ ಮಾಡಲಾಗುವುದು. ಒಂದು ವಾರದ ನಂತರ ಕೊರೊನಾ ಬೆಳವಣಿಗೆ ನೋಡಿಕೊಂಡು ನಂತರದ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಹಾಗೇ ಪ್ರವಾಸಿ ತಾಣಗಳನ್ನು ನೋಡಲು ಯಾವ ಪ್ರವಾಸಿಗರು ಚಿಕ್ಕಮಗಳೂರು ಜಿಲ್ಲೆಗೆ ಬರಬೇಡಿ ಎಂದು ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.