ಚಿಕ್ಕಮಗಳೂರು: ಹಿಜಾಬ್ ಪ್ರಕರಣ ಸಂಬಂಧ ಕೆಲವರು ನಿಮ್ಮ ಕೋರ್ಟ್ ತೀರ್ಪು ನಮಗೆ ಲಾಭವಾಗುವುದಿಲ್ಲ ಎಂಬ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಯಾವ ಭದ್ರತೆಯಿಲ್ಲದೇ ಈ ದೇಶದಲ್ಲಿ ಬದುಕುತ್ತೇನೆ ಎಂಬ ಮಾನಸಿಕ ಸ್ಥಿತಿ ನಿರ್ಮಾಣವಾಗುತ್ತಿದೆ. ಆ ಎಲ್ಲಾ ಜನರನ್ನು ಮುಖ್ಯವಾಹಿನಿಗೆ ಕರೆ ತರುವ ಕೆಲಸ ಆಗಬೇಕಿದೆ. ಈ ಕೆಲಸವನ್ನು ಮಠಾಧಿಪತಿಗಳು, ಸರ್ಕಾರ ಹಾಗೂ ಸಾರ್ವಜನಿಕರೆಲ್ಲರೂ ಸೇರಿ ಮಾಡಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕರೆ ನೀಡಿದರು.
ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಮಾತನಾಡಿದ ಅವರು, ನಮ್ಮ ಧರ್ಮದ ಪ್ರಕಾರವೇ ನಾವು ಬದುಕುವುದು. ನಿಮ್ಮ ಸಂವಿಧಾನ ನಮಗೆ ಮುಖ್ಯವಲ್ಲ. ಕಾಯ್ದೆಗಳು ಲಾಭವಾಗುವುದಿಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಈ ವಿಚಾರವಾಗಿ ರಾಜಕಾರಣಿಗಳು ಸತ್ಯ ಹೇಳಲು ಭಯಪಡುತ್ತೇವೆ.
ನಮ್ಮ ಕಣ್ಣೆದುರು ವೋಟು ಇರುವುದರಿಂದ ಸತ್ಯ ಹೇಳಿ ಬಿಟ್ಟರೆ ಎಲ್ಲಿ ವೋಟು ಹೋಗುತ್ತದೆ ಎಂಬ ಭಯವಿದೆ. ಆದರೆ ಸಂತರು, ಮಠಾಧೀಶರಿಗೆ ಯಾವುದೇ ಭಯವಿಲ್ಲ. ಹಾಗಾಗಿ ನೀವು ಆದ್ಯತೆ ಕೊಟ್ಟು ಭಾರತೀಯ ಧರ್ಮದ ನೆಲಗಟ್ಟನ್ನ ಭದ್ರಪಡಿಸಬೇಕು. ಹಾಗಿದ್ದಲ್ಲಿ ಮಾತ್ರ ದೇಶ ಉಳಿಯುತ್ತದೆ. ಶಾಂತಿ-ಸುವ್ಯವಸ್ಥೆ ನೆಲೆಸುತ್ತದೆ. ಇದಕ್ಕಾಗಿ ನಾವು ನಿಮ್ಮನೇ ಆಶ್ರಯಿಸುತ್ತಿದ್ದೇವೆ. ನಿಮ್ಮ ತ್ಯಾಗವೇ ನಿಮ್ಮ ಬದುಕಿಗೆ ಅರ್ಥ ಎಂದರು.
ಇದನ್ನೂ ಓದಿ: ಆರ್ಟಿಇ ಆ್ಯಕ್ಟ್ನಲ್ಲಿ ಬದಲಾವಣೆ ತರುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ: ಸಚಿವ ನಾಗೇಶ್