ETV Bharat / state

ಆಣೆ ಪ್ರಮಾಣ ಪಾಲಿಟಿಕ್ಸ್ : ಶೃಂಗೇರಿ ಧರ್ಮಸ್ಥಳ ಸನ್ನಿಧಿಗೆ ತಾಕತ್ತಿದ್ರೆ ಬನ್ನಿ..​ ಜೀವರಾಜ್​​ಗೆ ಶಾಸಕ ರಾಜೇಗೌಡ ಸವಾಲ್

ಆಸ್ತಿ ಖರೀದಿ ವೇಳೆ ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂದು ಮಾಜಿ ಶಾಸಕ ಡಿ ಎನ್ ​ಜೀವರಾಜ್​​ ಆರೋಪಿಸಿದ ಹಿನ್ನೆಲೆ ಶೃಂಗೇರಿ ಶಾಸಕ ಟಿ ಡಿ ರಾಜೇಗೌಡ ಅವರು ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡುವಂತೆ ಸವಾಲ್ ಹಾಕಿದ್ದಾರೆ.

Former MLA D.N Jeevaraj,MLA TD Rajegowda
ಮಾಜಿ ಶಾಸಕ ಡಿ.ಎನ್ ಜೀವರಾಜ್ ಶಾಸಕ ಟಿ ಡಿ ರಾಜೇಗೌಡ
author img

By

Published : Dec 4, 2022, 7:47 PM IST

Updated : Dec 4, 2022, 8:17 PM IST

ಚಿಕ್ಕಮಗಳೂರು: ಶೃಂಗೇರಿ ಶಾಸಕ ರಾಜೇಗೌಡ ವಿರುದ್ಧದ ಆಸ್ತಿ ಖರೀದಿ ಅವ್ಯವಹಾರ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯ ರಾಜಕೀಯದಲ್ಲಿ ಮತ್ತೆ ಆಣೆ ಪ್ರಮಾಣ ಪಾಲಿಟಿಕ್ಸ್ ಪ್ರಾರಂಭವಾಗಿದೆ. ಮಾಜಿ ಶಾಸಕ ಡಿ.ಎನ್ ಜೀವರಾಜ್ ಅವರಿಗೆ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ಸವಾಲ್ ಹಾಕಿದ್ದು, ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡುವಂತೆ ಆಗ್ರಹಿಸಿದ್ದಾರೆ.

ಶಾಸಕ ಟಿ ಡಿ ರಾಜೇಗೌಡ

ದಿ. ಸಿದ್ದಾರ್ಥ್ ಕುಟುಂಬದ ಬಳಿ 211 ಎಕರೆ ಕಾಫಿ ತೋಟವನ್ನು ಟಿ.ಡಿ ರಾಜೇಗೌಡ ಖರೀದಿ ಮಾಡಿದ್ದು, ಆಸ್ತಿ ಖರೀದಿ ವೇಳೆ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಮೋಸ ಮಾಡಿದ್ದಾರೆಂದು ಡಿ.ಎನ್. ಜೀವರಾಜ್ ಆರೋಪ ಮಾಡಿದ್ದರು.

ಕಾನೂನು ಪ್ರಕಾರವೇ ನಾನು ಆಸ್ತಿ ಖರೀದಿ ಮಾಡಿದ್ದೇನೆ. ಆ ತೋಟ ಕೇವಲ 14 ರಿಂದ 15 ಕೋಟಿ ಬೆಲೆ ಬಾಳುತ್ತೆ. ಆದರೆ 270 ಕೋಟಿ ಕೊಟ್ಟು ಆಸ್ತಿ ಖರೀದಿ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

15 ಕೋಟಿಗೂ, 270 ಕೋಟಿಗೂ ವ್ಯತ್ಯಾಸ ಗೊತ್ತಿಲ್ವಾ, ಬುದ್ಧಿ ಇಲ್ವಾ? 80 ಕೋಟಿ ಸರ್ಕಾರಕ್ಕೆ ನಷ್ಟ ಮಾಡಿದ್ದೀನಿ ಅಂತಾ ಹೇಳ್ತಿರಿ. ಇದನ್ನು ನಾನು ಇಲ್ಲಿಗೆ ಸುಮ್ಮನೆ ಬಿಡೋದಿಲ್ಲ. ನಾನು ನಂಬುವ ಧರ್ಮಸ್ಥಳಕ್ಕೆ ಹೋಗಿ ಕೈ ಮುಗಿಯುತ್ತೇನೆ. ನಾನು ಅನ್ಯಾಯ ಮಾಡಿದ್ರೆ ನನಗೆ ತೊಂದರೆಯಾಗಲಿ ಎಂದು ಹೇಳಿದ್ದಾರೆ.

ನನ್ನ ಬಗ್ಗೆ ಅಪಪ್ರಚಾರ ಮಾಡಿದವರಿಗೆ ದೇವರೇ ನೋಡಿಕೊಳ್ಳಲಿ. ಶೃಂಗೇರಿ ಶಾರದಾಂಬೆ, ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ತಾಕತ್ತಿದ್ರೆ ಬನ್ನಿ. ನೀವೇ ನಿಗದಿ ಮಾಡಿದ ದಿನಾಂಕ, ಸಮಯದಂದು ನಾನು ಬರಲು ಸಿದ್ದನಿದ್ದೇನೆ. ನಾನು ಪ್ರಮಾಣ ಮಾಡುತ್ತೇನೆ. ನೀವು ಕೂಡ ಬಂದು ಪ್ರಮಾಣ ಮಾಡಿ ಎಂದು ಚಿಕ್ಕಮಗಳೂರಲ್ಲಿ ಶೃಂಗೇರಿ ಶಾಸಕ ಟಿ ಡಿ ರಾಜೇಗೌಡ ಸವಾಲ್ ಹಾಕಿದ್ದಾರೆ.

ಇದನ್ನೂ ಓದಿ:ಕಾನ್​ಸ್ಟೇಬಲ್​ಗೆ ಕಪಾಳಮೋಕ್ಷ ಆರೋಪ.. ಬಿಜೆಪಿ ಮಾಜಿ ಸಂಸದೆ ವಿರುದ್ಧ ಎಫ್​ಐಆರ್​

Last Updated : Dec 4, 2022, 8:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.