ಚಿಕ್ಕಮಗಳೂರು: ನೂತನ ಸಚಿವರಾದ ಸಿ.ಟಿ.ರವಿ ಮತ್ತು ಮಾಧುಸ್ವಾಮಿ ಮೂಡಿಗೆರೆ ತಾಲೂಕಿನ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮೊನ್ನೆಯವರೆಗೂ ಸಿಎಂ ಒಬ್ಬರೇ ನೆರೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸುವ ಕಾರ್ಯದಲ್ಲಿದ್ದರು. ಆದರೆ, ಈಗ ಮಂತ್ರಿ ಮಂಡಲ ರಚನೆಯಾದ್ದರಿಂದ ಮಂತ್ರಿಗಳು ಅನಾಹುತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ.
ಬಣಕಲ್, ಬಾಳೂರು, ಆಲೆಖಾನ್, ಹೊರಟ್ಟಿ, ಮಲೆಮನೆ, ದುರ್ಗದಹಳ್ಳಿ ಗ್ರಾಮಗಳಲ್ಲಿ ಪರಿಸ್ಥಿತಿ ಅವಲೋಕನ ಮಾಡುತ್ತಿದ್ದು, ನೂತನ ಸಚಿವರಿಗೆ ಮೂಡಿಗೆರೆ ಎಂಎಲ್ಎ ಎಂ.ಪಿ.ಕುಮಾರಸ್ವಾಮಿ ಸಾಥ್ ನೀಡಿದ್ದಾರೆ.