ETV Bharat / state

ಮುಂದಿನ ಸಿಎಂ ಯಾರು ಎನ್ನುವ ತೀರ್ಮಾನಕ್ಕೆ ಕಾಂಗ್ರೆಸ್ ಬಂದಿಲ್ಲ.. ಸಿದ್ದರಾಮಯ್ಯರಿಗೆ ಕ್ಷೇತ್ರವೇ ಇಲ್ಲ: ಕಟೀಲ್​ - Etv Bharat Kannada

ಮುಂದಿನ ಸಿಎಂ ಅಭ್ಯರ್ಥಿಯಾರು ಎಂಬ ಗೊಂದಲದಲ್ಲಿ ಕಾಂಗ್ರೆಸ್​ ಪಕ್ಷ ಇದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರ ಹುಡುಕಾಟದಲ್ಲಿದ್ದಾರೆ ಎಂದು ನಳಿನ್​ ಕುಮಾರ್​ ಕಟೀಲ್​ ಹೇಳಿದರು.

nalin-kumar-kateel
ನಳಿನ್ ಕುಮಾರ್​ ಕಟೀಲ್​
author img

By

Published : Jan 24, 2023, 10:03 PM IST

Updated : Jan 24, 2023, 10:59 PM IST

ನಳಿನ್​ ಕುಮಾರ್​ ಕಟೀಲ್ ಪ್ರತಿಕ್ರಿಯೆ​

ಚಿಕ್ಕಮಗಳೂರು: ಮುಂದಿನ ಸಿಎಂ ಯಾರು ಎನ್ನುವ ತೀರ್ಮಾನಕ್ಕೆ ಕಾಂಗ್ರೆಸ್ ಪಕ್ಷ ಇನ್ನೂ ಬಂದೇ ಇಲ್ಲ. ಅತೀ ಹೆಚ್ಚು ಬಜೆಟ್ ಮಂಡನೆ ಮಾಡಿದ ಅಗ್ರಗಣ್ಯ ನಾಯಕ ಎಂದು ಹೇಳಿಕೊಳ್ಳುವ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಕ್ಷೇತ್ರವೇ ಇಲ್ಲ. ಇನ್ನೂ ಕ್ಷೇತ್ರದ ಹುಡುಕಾಟದಲ್ಲೇ ಇದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಕಾಂಗ್ರೆಸ್​ ನೇರವಾಗಿ ಹೋರಾಟದಲ್ಲಿ ಯಶಸ್ಸು ಕಾಣಲ್ಲ, ಕಾರ್ಯಕರ್ತರ ಕೊರತೆ ಇದೆ, ಪಕ್ಷದ ನಾಯಕರ ಒಳಗಡೆಯೇ ಗೊಂದಲಗಳಿವೆ, ಮುಂದಿನ ಮುಖ್ಯಮಂತ್ರಿ ಯಾರು ಎಂಬ ತೀರ್ಮಾನಕ್ಕೆ ಪಕ್ಷ ಇನ್ನೂ ಬಂದಿಲ್ಲ, ರಾಜ್ಯದಲ್ಲಿ ಅತೀ ಹೆಚ್ಚ ಬಜೆಟ್​​ ಮಂಡನೆ ಮಾಡಿರುವ ಅಗ್ರಗಣ್ಯ ನಾಯಕ ಎಂದು ಹೋಳಿಕೋಳ್ಳುವ, 5 ವರ್ಷಗಳ ಕಾಲ ಯಾವುದೇ ವಿರೋಧವಿಲ್ಲದೆ ಆಡಳಿತ ಮಾಡುತ್ತೇನೆ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುವಂತವರಿಗೆ ಕ್ಷೇತ್ರವಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಇನ್ನು ಕಾಂಗ್ರೆಸ್ ಅಧ್ಯಕ್ಷರು ನಿನ್ನೆಯಿಂದ ತಮ್ಮ ಮಾತನ್ನು ಬದಲಾಯಿಸಿದ್ದು, ಕನಕಪುರದಲ್ಲಿ ನಿಲ್ಲುವುದು ಅಥವಾ ಮದ್ದೂರಿನಲ್ಲಿ ನಿಲ್ಲುವುದು ಎನ್ನುವ ಗೊಂದಲದಲ್ಲಿದ್ದಾರೆ. ಅಲ್ಲದೇ ತಮ್ಮನ್ನು ಎಲ್ಲಾ ಕ್ಷೇತ್ರದ ಜನರು ಕರಿತಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೇ, ಇವರನ್ನು ಯಾರು ಕರೆಯುತ್ತಿಲ್ಲ, ಬದಲಾಗಿ ಜನರೇ ಕ್ಷೇತ್ರದಿಂದ ಹೊರ ಹಾಕುತ್ತಿದ್ದಾರೆ. ಹಾಗಾಗಿ ಕ್ಷೇತ್ರಗಳನ್ನು ಹುಡುಕುತ್ತಿದ್ದಿರಿ ಎಂದರು.

ಇನ್ನು ಈಗ ಬಂದಿರುವ ವರದಿ ಪ್ರಕಾರ ಅತಿ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆದ್ದು ಮತ್ತೇ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಲಾಗಿದೆ. ಆ ಕಾರಣದಿಂದಾಗಿ ಕಾಂಗ್ರೆಸ್ ಷಡ್ಯಂತರ ರಾಜಕಾರಣ ಮಾಡಿದೆ. ಅಲ್ಲದೇ ಕಾಂಗ್ರೆಸ್​ ಅಧಿಕಾರದಲ್ಲಿರದೆ ಇದ್ದಾಗ ಈ ರೀತಿಯಾಗಿ ಪರದಾಡುತ್ತದೆ. ಆದ ಕಾರಣ ಭ್ರಷ್ಟಾಚಾರದ ಹೆಸರಲ್ಲಿ ಆರೋಪಗಳನ್ನು ಮಾಡುತ್ತಿದೆ. ಇನ್ನು ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಲೋಕಾಯುಕ್ತವನ್ನು ಯಾಕೆ ಮುಚ್ಚಿಹಾಕಲಾಯಿತು.? ಇಂದು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಲೋಕಾಯುಕ್ತವನ್ನು ಮತ್ತೇ ಮರುಸ್ಥಾಪನೆ ಮಾಡಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್​ಗೆ ಕಾರ್ಯಕರ್ತರ ಕೊರತೆ ಇದೆ. ಬಿಜೆಪಿಯಲ್ಲಿ ಮತದಾರರ ಪಟ್ಟಿಯ ಪೇಜಿಗೊಬ್ಬ ಕಾರ್ಯಕರ್ತರಿದ್ದಾರೆ, ಕಾಂಗ್ರೆಸ್​ಗೆ ಇಡೀ ಪಟ್ಟಿಗೆ ಒಬ್ಬನೇ ಒಬ್ಬ ಕಾರ್ಯಕರ್ತ ಇಲ್ಲ. ಇದು ಇವತ್ತಿನ ಕಾಂಗ್ರೆಸಿನ ಹೀನಾಯ ಪರಿಸ್ಥಿತಿ. ನೇರವಾದ ಹೋರಾಟದಲ್ಲಿ ಕಾಂಗ್ರೆಸ್ ಯಶಸ್ಸು ಕಾಣುವುದಿಲ್ಲ. ಕಾಂಗ್ರೆಸ್ ನಾಯಕರಲ್ಲಿ ಗೊಂದಲ ಇದೆ, ಜಟಾಪಟಿ ಇದೆ. ಸೋನಿಯಾ ಗಾಂಧೀ, ರಾಹುಲ್ ಗಾಂಧೀ, ವಾದ್ರ ಬೇಲಲ್ಲಿ, ರಾಜ್ಯದ ಅಧ್ಯಕ್ಷರು ಕೂಡ ಬೇಲಲ್ಲಿ ಇದ್ದಾರೆ. ಕಾಂಗ್ರೇಸ್ ಪಕ್ಷ ಬೇಲಲ್ಲಿ ಇರಬೇಕಾದ ಪಾರ್ಟಿ. ಭ್ರಷ್ಟಾಚಾರದ ಇನ್ನೊಂದು ಹೆಸರು ಕಾಂಗ್ರೆಸ್, ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್, ಭ್ರಷ್ಟಾಚಾರ ಮುಕ್ತ ಆಗ್ಬೇಕು ಅಂದ್ರೆ ಕಾಂಗ್ರೆಸ್ ಮುಕ್ತ ಭಾರತ ಆಗಬೇಕು. ಜನರನ್ನ ಹಾದಿ ತಪ್ಪಿಸುವ ಕೆಲಸ ಮಾಡ್ತಿದೆ ಕಾಂಗ್ರೆಸ್, ಭ್ರಷ್ಟಾಚಾರಿಗಳ ಪಾರ್ಟಿ ಕಾಂಗ್ರೆಸ್ ಎಂದು ಆರೋಪಿಸಿದರು.

ಇನ್ನು ಯಡಿಯೂರಪ್ಪನವರು ನಮ್ಮ ಸರ್ವೋಚ್ಚ ನಾಯಕ. ನಮ್ಮ ಎಲೆಕ್ಷನ್ ಬೋರ್ಡ್, ಪಾರ್ಲಿಮೆಂಟರಿ ಬೋರ್ಡ್ ಸದಸ್ಯರಿದ್ದಾರೆ. ಯಡಿಯೂರಪ್ಪ ಹಿರಿಯ ನಾಯಕ, ಅವರಿಗೆ ಏನೆಲ್ಲಾ ಜವಾಬ್ದಾರಿಗಳನ್ನು ಕೊಡಬೇಕು ಪಾರ್ಟಿ ಕೊಡ್ತಾ ಇದೆ. ಅವರಿಗೂ ಸಂತೃಪ್ತಿ ಇದೆ, ಪಾರ್ಟಿಯನ್ನು ಅವರೇ ಮುನ್ನಡೆಸುತ್ತಿದ್ದಾರೆ, ಅವರ ಮಾರ್ಗದರ್ಶನದಲ್ಲೆ ಸರ್ಕಾರ ನಡಿತಾ ಇದೆ ಎಂದು ಚಿಕ್ಕಮಗಳೂರಿನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಇದನ್ನೂ ಓದಿ: ಚಿರತೆ ದಾಳಿಯಲ್ಲಿ ಮೃತಪಟ್ಟ ಬಾಲಕ ಮತ್ತು ವೃದ್ದೆಯ ಮನೆಗೆ ಸಚಿವ ಸೋಮಶೇಖರ್ ಭೇಟಿ ; ಪರಿಹಾರ ಚೆಕ್​ ವಿತರಣೆ

Last Updated : Jan 24, 2023, 10:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.