ಚಿಕ್ಕಮಗಳೂರು : ಒಂದೇ ಜಾಗದಲ್ಲಿ 100 ಕ್ಕೂ ಹೆಚ್ಚು ಕುರಿಗಳು ಸಾವನಪ್ಪಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಕ್ಷಣ ಕ್ಷಣಕ್ಕೂ ಕುರಿಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, 150 ಕ್ಕೂ ಹೆಚ್ಚು ಕುರಿಗಳು ಸಾಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಜಿಲ್ಲೆಯ ಕಡೂರು ತಾಲೂಕಿನ ಎರೆಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಶಿರಾ ಮತ್ತು ಹಿರಿಯೂರಿನಿಂದ ಬಂದಿರುವ ಕುರಿಗಳ ಹಿಂಡಿನಲ್ಲಿ ಈ ದುರಂತ ಕಂಡು ಬಂದಿದೆ.
ನಿನ್ನೆ ಬೆಳಗ್ಗೆಯಿಂದಲೂ ಒಂದೊಂದು ಕುರಿಗಳು ಸಾವನ್ನಪ್ಪುತ್ತಿವೆ. ಸಾವಿನ ಸಂಖ್ಯೆ ಒಟ್ಟು 100 ಕ್ಕೂ ಅಧಿಕವಾಗಿದ್ದು, ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಪಶುವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಕುರಿಗಳ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದು, ಕುರಿಗಳ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ.