ETV Bharat / state

ಮತಾಂಧ ಶಕ್ತಿಗಳಿಂದ ಪೌರಕಾರ್ಮಿಕರ ಮೇಲೆ ಹಲ್ಲೆ: ಸಂಸದೆ ಶೋಭಾ ಕರಂದ್ಲಾಜೆ ಕಿಡಿ

ಮೊನ್ನೆ ರಾತ್ರಿ ಪಾದರಾಯನಪುರದಲ್ಲಿ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ನಡೆಯಿತು. ಈಗ ಚಿಕ್ಕಮಗಳೂರಿನ ಸರತಿ ಪ್ರಾರಂಭವಾಗಿದ್ದು, ಉಪ್ಪಳ್ಳಿಯ ಮಸೀದಿ ಬಳಿ ಬೆಳಿಗ್ಗೆ ಕ್ಲೀನಿಂಗ್​ಗೆ ಹೋದ ಸಮಯದಲ್ಲಿ ಪೌರಕಾರ್ಮಿಕರ ಮೇಲೆ ಮತಾಂಧ ಶಕ್ತಿಗಳು, ದೇಶದ್ರೋಹಿಗಳು ಹಲ್ಲೆ ಮಾಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದರು.

ಸಂಸದೆ ಶೋಭಾ ಕರಂದ್ಲಾಜೆ
ಸಂಸದೆ ಶೋಭಾ ಕರಂದ್ಲಾಜೆ
author img

By

Published : Apr 21, 2020, 10:33 PM IST

ಚಿಕ್ಕಮಗಳೂರು: ನಗರದ ಉಪ್ಪಳ್ಳಿಯ ಮಸೀದಿಯ ಬಳಿ ಪೌರಕಾರ್ಮಿಕ ಮಂಜುನಾಥ್ ಮತ್ತು ಗೀತಮ್ಮ ಎಂಬುವವರ ಮೇಲೆ ಕಿಡಿಗೇಡಿಗಳಿಂದ ಹಲ್ಲೆ ನಡೆದಿತ್ತು. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯೋಗಕ್ಷೇಮ ವಿಚಾರಿಸಲು ಸಂಸದೆ ಶೋಭಾ ಕರಂದ್ಲಾಜೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದರು.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಇಡೀ ವಿಶ್ವವೇ ಕೊರೊನಾ ವೈರಸ್​ನಿಂದ ಬಳಲುತ್ತಿದೆ. ಈ ಹಿನ್ನೆಲೆ ಕೇಂದ್ರ, ರಾಜ್ಯ ಸರ್ಕಾರಗಳು ಹಗಲು-ರಾತ್ರಿ ಕೆಲಸ ಮಾಡುತ್ತಿವೆ. ನಮ್ಮ ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸ್​ ಸಿಬ್ಬಂದಿ, ಪೌರಕಾರ್ಮಿಕರಿಗೆ ಪ್ರಧಾನಿ ಮೋದಿ ಕೊರೊನಾ ವಾರಿಯರ್ಸ್ ಎಂಬ ಹೆಸರು ಇಟ್ಟಿದ್ದಾರೆ. ನಮ್ಮ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಯುತ್ತಿದೆ. ಬೆಂಗಳೂರಿನ ಸಿದ್ದಿಕಿ ಲೇಔಟ್​ನಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಯಿತು. ಮೊನ್ನೆ ರಾತ್ರಿ ಪಾದರಾಯನಪುರದಲ್ಲಿ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ನಡೆಯಿತು. ಈಗ ಚಿಕ್ಕಮಗಳೂರಿನ ಸರತಿ ಪ್ರಾರಂಭವಾಗಿದ್ದು, ಉಪ್ಪಳ್ಳಿಯ ಮಸೀದಿ ಬಳಿ ಬೆಳಿಗ್ಗೆ ಕ್ಲೀನಿಂಗ್​ಗೆ ಹೋದ ಸಮಯದಲ್ಲಿ ಪೌರಕಾರ್ಮಿಕ ಮಂಜುನಾಥ್​ ಮತ್ತ ಗೀತಮ್ಮ ಎಂಬುವವರ ಮೇಲೆ ಮತಾಂಧ ಶಕ್ತಿಗಳು, ದೇಶದ್ರೋಹಿಗಳು ಹಲ್ಲೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ಈಗ ಅವರ ಕುಟುಂಬ ಕಣ್ಣೀರು ಹಾಕುವಂತಾಗಿದೆ. ಅವರ ಎಲ್ಲರ ರಕ್ಷಣೆ ಸರ್ಕಾರದ ಹೊಣೆಯಾಗಿದ್ದು, ಪೌರಕಾರ್ಮಿಕರ ಮೇಲೆ ಹಲ್ಲೆ ಮಾಡಿದವರ ಮೇಲೆ ಗೂಂಡಾ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲು ಮಾಡಬೇಕು. ಇವರು ಐದು ವರ್ಷಗಳ ಕಾಲ ಜೈಲಿನಿಂದ ವಾಪಸ್​ ಬರಬಾರದು. ದೇಶ ಕಾಯುವಂತ ವ್ಯಕ್ತಿಗಳ ಮೇಲೆ ಹಲ್ಲೆ ಮಾಡುತ್ತಿರುವ ವ್ಯಕ್ತಿಗಳ ಪರ ಸರ್ಕಾರ ಮೃದು ಧೋರಣೆ ತೆಗೆದುಕೊಳ್ಳಬಾರದು. ನಿನ್ನೆ ಕ್ಯಾಬಿನೆಟ್​ ಮೀಟಿಂಗ್​ನಲ್ಲಿ ತೆಗೆದುಕೊಂಡ ನಿರ್ಧಾರದಂತೆ ಹಲ್ಲೆ ಮಾಡಿದ ವ್ಯಕ್ತಿಯ ಆಸ್ತಿ-ಪಾಸ್ತಿಯನ್ನು ವಶಪಡಿಸಿಕೊಳ್ಳಬೇಕು ಎಂದು ಸರ್ಕಾರಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದರು.

ಇದು ಜಿಹಾದ್, ಭಯೋತ್ಪಾದನೆಯ ಮುಂದುವರೆದ ಭಾಗ:

ಬೆಂಗಳೂರು, ಮಂಡ್ಯ, ಬೀದರ್​, ಬೆಳಗಾವಿಯಲ್ಲಿ ತಬ್ಲಿಘಿ ಸಭೆಗೆ ಹೋದವರು ಇದ್ದಾರೆ ಎಂಬ ಮಾಹಿತಿ ಇದೆ. ಬೆಳಗಾವಿಯಲ್ಲಿ ಸುಮಾರು 70 ಜನ ತಬ್ಲಿಘಿ ಸಭೆಗೆ ಹೋದವರು ಸಿಕ್ಕಿದ್ದಾರೆ. ಅವರು ವೈದ್ಯಕೀಯ ಸಿಬ್ಬಂದಿ ಜತೆ ಅನುಚಿತವಾಗಿ ವರ್ತಿಸಿದರು. ದೇಶದ ಪ್ರಜೆಗಳಂತೆ ನಡೆದುಕೊಳ್ಳುತ್ತಿಲ್ಲ. ಕೊರೊನಾ ವೈರಸ್​ಅನ್ನು ಉಳಿದವರಿಗೂ ಹಬ್ಬಿಸಬೇಕು ಎಂಬ ವ್ಯವಸ್ಥಿತ ಪಿತೂರಿ ನಡೆಸಿದ್ದಾರೆ. ಇದು ಜಿಹಾದ್ ಹಾಗೂ ಭಯೋತ್ಪಾದನೆಯ ಮುಂದುವರೆದ ಭಾಗ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಲವಾರು ಜನರು ಕ್ವಾರಂಟೈನ್​ಗೆ ಬಂದಿಲ್ಲ. ಆಸ್ಪತ್ರೆಗೆ ಹೋಗಿಲ್ಲ. ಪೊಲೀಸರಿಗೆ ತಿಳಿಸಿಲ್ಲ. ಸರ್ಕಾರ ಈ ಕುರಿತು ಜಾಗೃತಿ ವಹಿಸಿ ಅವರನ್ನೆಲ್ಲ ಕ್ವಾರಂಟೈನ್​ನಲ್ಲಿ ಇಡಬೇಕು ಎಂದು ಆಗ್ರಹಿಸಿದರು.

ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧ ಕಿಡಿ:

ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಕೊರೊನಾ ವೈರಸ್​ನಿಂದ ತೀರಿಕೊಂಡವರ ಶವ ಸಂಸ್ಕಾರಕ್ಕೆ ಹೋಗಿದ್ದಾರೆ ಎಂಬ ಮಾಹಿತಿ ಇದೆ. ಒಂದು ವೇಳೆ ಅವರು ಅಲ್ಲಿಗೆ ಹೋಗಿದ್ದರೆ ಅವರನ್ನೂ ಕ್ವಾರಂಟೈನ್​ನಲ್ಲಿ ಇಡಬೇಕು. ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆಯನ್ನು ಅವರು ಸಮರ್ಥನೆ ಮಾಡಿಕೊಂಡಿದ್ದಾರೆ. ಅವರನ್ನು ಗೃಹ ಬಂಧನದಲ್ಲಿ ಇಡಬೇಕು. ಹಲ್ಲೆ ಮಾಡಿದವರ ಮೇಲೆ ಯಾವ ಪ್ರಕರಣ ದಾಖಲು ಮಾಡುತ್ತಾರೋ ಪ್ರಚೋದಿಸಿದವರ ಮೇಲೆಯೂ ಅದನ್ನೇ ಹಾಕಬೇಕು. ಜಮೀರ್ ಅಹ್ಮದ್ ಖಾನ್ ತಪ್ಪು ಮಾಡಿದ್ದರೆ ಅವರ ಮೇಲೆಯೂ ಅದೇ ಕೇಸ್ ಹಾಕಬೇಕು. ಅವರು ಶವ ಸಂಸ್ಕಾರದಲ್ಲಿ ಭಾಗಿ ಆಗಿದ್ದರ ಹಿಂದೆ ದುರುದ್ದೇಶವಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.