ETV Bharat / state

ಯಾರದೋ ಮೇಲಿನ ಸಿಟ್ಟಿಗೆ ಮಗಳ ಕುತ್ತಿಗೆಗೆ ಇರಿದ ತಾಯಿ

ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಮುತ್ತಿನ ಕೊಪ್ಪ ಗ್ರಾಮದಲ್ಲಿ ಸಾರ್ವಜನಿಕರು ಮತ್ತು ಪೊಲೀಸರ ಮುಂದೆಯೇ ತಾಯಿ ತನ್ನ ಮಗಳ ಕುತ್ತಿಗೆಗೆ ಚಾಕುವಿನಿಂದ ಇರಿದು ಬಿಟ್ಟಿದ್ದಾಳೆ.

ಮಗಳ ಕುತ್ತಿಗೆಗೆ ಚಾಕು ಇರಿದ ತಾಯಿ
author img

By

Published : Jun 20, 2019, 3:33 AM IST

ಚಿಕ್ಕಮಗಳೂರು: ನಗರದಲ್ಲಿ ಮತ್ತೊಮ್ಮೆ ಸಾರ್ವಜನಿಕರು ಬೆಚ್ಚಿ ಬೀಳುವಂತಹ ಘಟನೆ ನಡೆದಿದೆ. ನಿನ್ನೆ ತಂದೆಯೊಬ್ಬ 40 ದಿನದ ಹೆಣ್ಣು ಮಗುವಿನ ಕತ್ತು ಹಿಸುಕಿ ಕೊಂದು ಹಾಕಿರುವ ಘಟನೆಯ ಬೆನ್ನಲೆ ತಾಯಿಯೇ ತನ್ನ ಮಗಳಿಗೆ ಚಾಕುವಿನಿಂದ ಕುತ್ತಿಗೆಗೆ ಇರಿದ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಮುತ್ತಿನ ಕೊಪ್ಪ ಗ್ರಾಮದಲ್ಲಿ ಸಾರ್ವಜನಿಕರು ಮತ್ತು ಪೊಲೀಸರ ಮುಂದೆಯೇ ತಾಯಿ ತನ್ನ ಮಗಳ ಕುತ್ತಿಗೆಗೆ ಚಾಕುವಿನಿಂದ ಇರಿದು ಬಿಟ್ಟಿದ್ದಾಳೆ. ಅದೃಷ್ಟವಶಾತ್ ಮಗಳಿಗೆ ಯಾವುದೇ ತೊಂದರೆ ಆಗದೇ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾಳೆ. ಮುತ್ತಿನ ಕೊಪ್ಪ ಗ್ರಾಮದಲ್ಲಿ ಸೈಯದ್ ಶಫೀರ್ ಹಾಗೂ ಅನುಜೋಭಿ ನಡುವೆ ಮನೆಯ ಹಿಂಭಾಗದ ಕಾಪೌಂಡ್ ವಿಚಾರವಾಗಿ ಜಗಳ ಆಗುತ್ತಿತ್ತು. ಸೈಯದ್ ಶಫೀರ್ ಅವರ ಬಿಲ್ಡಿಂಗ್​ನಲ್ಲಿಯೇ ಅನುಜೋಭಿ ಹೊಟೇಲ್ ನಡೆಸುತ್ತಿದ್ದಳು.

ಮಗಳ ಕುತ್ತಿಗೆಗೆ ಚಾಕು ಇರಿದ ತಾಯಿ

ಜಗಳದ ಹಿನ್ನೆಲೆ ಮಾಲೀಕ ಸೈಯದ್ ಶಫೀರ್ ಹೊಟೇಲ್ ಖಾಲಿ ಮಾಡಿಸುತ್ತಾನೆ ಎಂಬ ಉದ್ದೇಶದಿಂದ ಅನುಜೋಭಿ ಮಾಲೀಕನ ವಿರುದ್ದ ಕೋರ್ಟ್​ಗೆ ಹೋಗಿ ತಡೆಯಾಜ್ಞೆ ತಂದಿದ್ದಳು. ಆದರೂ ಮಾಲೀಕ ಕಟ್ಟಡದ ಹಿಂದಿನ ಕಾಪೌಂಡ್ ತೆರವಿಗೆ ಮುಂದಾದಾಗ ಇಬ್ಬರ ನಡುವೆ ಜಗಳವಾಗಿದೆ. ಕೋಪಗೊಂಡ ಅನುಜೋಭಿ ತನ್ನ ಮಗಳನ್ನು ಸಾಯಿಸಿ ನಾನು ಸಾಯುತ್ತೇನೆ ಎಂದು ಬೆದರಿಕೆ ಹಾಕಿ ಮೊದಲು ತನ್ನ ಮಗಳಿಗೆ ಚಾಕುವಿನಿಂದ ಕುತ್ತಿಗೆ ಭಾಗಕ್ಕೆ ಇರಿದು ಬಿಟ್ಟಿದ್ದಾಳೆ.

ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ಆಕೆಯ ಕೈಯಿಂದ ಚಾಕು ಕಿತ್ತುಕೊಂಡು ಗಂಭೀರ ಗಾಯಗೊಂಡ ಮಗುವನ್ನು ಮುತ್ತಿನ ಕೊಪ್ಪ ಪ್ರಾಥಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಎನ್ ಆರ್ ಪುರ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆರೋಪಿ ಅನುಜೋಭಿಯನ್ನು ಪೋಲಿಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಈ ಕುರಿತು ಎನ್ ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Intro:R_Kn_Ckm_01_20_Tayi kopa_Rajkumar_Ckm_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ಮತ್ತೋಮ್ಮೆ ಸಾರ್ವಜನಿಕರು ಬೆಚ್ಚಿ ಬೀಳುವಂತಹ ಘಟನೆ ನಡೆದಿದೆ. ನಿನ್ನೆ ತಂದೆಯಿಂದಾ 40 ದಿನದ ಹೆಣ್ಣು ಮಗುವಿನ ಕತ್ತು ಹಿಸುಕಿ ಕೊಂದು ಹಾಕಿರುವ ಘಟನೆಯ ಬೆನ್ನಲೆ ತಾಯಿಯೇ ತನ್ನ ಮಗಳನ್ನು ಚಾಕುವಿನಿಂದಾ ಕುತ್ತಿಗೆಗೆ ಇರಿದಿರುವ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಮುತ್ತಿನ ಕೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಸಾರ್ವಜನಿಕರು ಮತ್ತು ಪೋಲಿಸರ ಮುಂದೆಯೇ ತಾಯಿ ತನ್ನ ಮಗಳ ಕುತ್ತಿಗೆಗೆ ಚಾಕುವಿನಿಂದಾ ಇರಿದು ಬಿಟ್ಟಿದ್ದಾಳೆ. ಅದೃಷ್ಟವಶಾತ್ ಮಗಳಿಗೆ ಯಾವುದೇ ತೊಂದರೆ ಆಗದೇ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾಳೆ. ಮುತ್ತಿನ ಕೊಪ್ಪ ಗ್ರಾಮದಲ್ಲಿ ಸೈಯದ್ ಶಫೀರ್ ಹಾಗೂ ಅನುಜೋಭಿ ನಡುವೆ ಮನೆಯ ಹಿಂಬಾದ ಕಾಪೌಂಡ್ ವಿಚಾರವಾಗಿ ಜಗಳ ಆಗುತ್ತಿತ್ತು. ಸೈಯದ್ ಶಫೀರ್ ಅವರ ಬಿಲ್ಡಿಂಗ್ ನಲ್ಲಿಯೇ ಅನುಜೋಭಿ ಹೊಟೇಲ್ ನಡೆಸುತ್ತಿದ್ದಳು. ಮಾಲೀಕ ಸೈಯದ್ ಶಫೀರ್ ಹೊಟೇಲ್ ಖಾಲಿ ಮಾಡಿಸುತ್ತಾನೆ ಎಂಬ ಉದ್ದೇಶದಿಂದಾ ಅನುಜೋಭಿ ಮಾಲೀಕನ ವಿರುದ್ದ ಕೋರ್ಟ್ ಗೆ ಹೋಗಿ ತಡೆಯಾಜ್ಞೆ ತಂದಿದ್ದಳು.ಆದರೂ ಮಾಲೀಕ ಕಟ್ಟಡದ ಹಿಂದಿನ ಕಾಪೌಂಡ್ ತೆರವಿಗೆ ಮುಂದಾದಾಗ ಇಬ್ಬರ ನಡುವೆ ಜಗಳವಾಗಿದೆ.ಕೋಪಗೊಂಡ ಅನುಜೋಭಿ ತನ್ನ ಮಗಳನ್ನು ಸಾಯಿಸಿ ನಾನು ಸಾಯುತ್ತೇನೆ ಎಂದೂ ಬೆದರಿಕೆ ಹಾಕಿ ಮೊದಲು ತನ್ನ ಮಗಳಿಗೆ ಚಾಕುವಿನಿಂದಾ ಕುತ್ತಿಗೆ ಭಾಗಕ್ಕೆ ಇರಿದು ಬಿಟ್ಟಿದ್ದಾಳೆ. ತಕ್ಷಣ ಸ್ಥಳೀಯರು ಹಾಗೂ ಪೋಲಿಸರು ಆಕೆಯ ಕೈ ಯಿಂದಾ ಚಾಕು ಕಿತ್ತುಕೊಂಡು ಗಂಭೀರ ಗಾಯಗೊಂಡ ಮಗುವನ್ನು ಮುತ್ತಿನ ಕೊಪ್ಪ ಪ್ರಾಥಮಿಕ ಆಸ್ವತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಎನ್ ಆರ್ ಪುರ ತಾಲೂಕ್ ಸರ್ಕಾರಿ ಆಸ್ವತ್ರೆಗೆ ದಾಖಲು ಮಾಡಿದ್ದಾರೆ. ಆರೋಪಿ ಅನುಜೋಭಿಯನ್ನು ಪೋಲಿಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಈ ಕುರಿತು ಎನ್ ಆರ್ ಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ......

Conclusion:ರಾಜಕುಮಾರ್.......
ಈ ಟಿವಿ ಭಾರತ್......
ಚಿಕ್ಕಮಗಳೂರು.......
ETV Bharat Logo

Copyright © 2024 Ushodaya Enterprises Pvt. Ltd., All Rights Reserved.