ETV Bharat / state

ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಶಾಸಕ ಹೆಚ್.ಡಿ.ತಮ್ಮಯ್ಯ ಭೇಟಿ; ರೋಗಿಗಳ ಅಹವಾಲು ಸ್ವೀಕಾರ, ವೈದ್ಯರಿಗೆ ಸೂಚನೆ

ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಭೇಟಿ ಕೊಟ್ಟ ಶಾಸಕ ಹೆಚ್.ಡಿ.ತಮ್ಮಯ್ಯ ರೋಗಿಗಳ ಆರೋಗ್ಯ ವಿಚಾರಿಸಿ, ಸಮಸ್ಯೆ ಆಲಿಸಿದರು.

ಶಾಸಕ ಹೆಚ್.ಡಿ ತಮ್ಮಯ್ಯ
ಶಾಸಕ ಹೆಚ್.ಡಿ ತಮ್ಮಯ್ಯ
author img

By

Published : Jun 21, 2023, 7:26 PM IST

ಚಿಕ್ಕಮಗಳೂರು : ಕೆಲವು ದಿನಗಳಿಂದ ನೂತನ ಶಾಸಕರು ಮತ್ತು ಸಚಿವರು ತಮ್ಮ ತಮ್ಮ ಜಿಲ್ಲಾಸ್ಪತ್ರೆಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ಮಾಡುತ್ತಿದ್ದಾರೆ. ಇಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಜಿಲ್ಲಾಸ್ಪತ್ರೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ರೋಗಿಗಳ ಆರೋಗ್ಯ ವಿಚಾರಿಸಿ, ಸಾರ್ವಜನಿಕರ ಸಮಸ್ಯೆ ಆಲಿಸಿ ವೈದ್ಯರಿಗೆ ಕೆಲವು ಸೂಚನೆಗಳನ್ನು ನೀಡಿದರು.

ಹೊರ ರೋಗಿಗಳ ವಾರ್ಡ್‌ಗೆ ಭೇಟಿ ನೀಡಿದ ಶಾಸಕರಿಗೆ ಸಮಸ್ಯೆಗಳ ದರ್ಶನವಾಯಿತು. ನಾಲ್ಕು ದಿನಗಳಿಂದ ಹಾಸಿಗೆ ಬದಲಿಸಿಲ್ಲ ಎಂದು ವ್ಯಕ್ತಿಯೋರ್ವರು ದೂರು ನೀಡಿದರು. ಆಗ ಹಾಸಿಗೆ ಮೇಲೆತ್ತಿ ಪರಿಶೀಲಿಸಿದ ಶಾಸಕ ತಿಮ್ಮಯ್ಯ, ಕೂಡಲೇ ಆಸ್ಪತ್ರೆಯಲ್ಲಿರುವ ಎಲ್ಲ ಹಾಸಿಗೆ, ಹೊದಿಕೆಗಳನ್ನು ತೆರವುಗೊಳಿಸುವಂತೆ ಜಿಲ್ಲಾ ಸರ್ಜನ್ ಮೋಹನ್ ಕುಮಾರ್ ಅವರಿಗೆ ತಿಳಿಸಿದರು. ಶೌಚಾಲಯಕ್ಕೆ ಸರಿಯಾಗಿ ನೀರಿಲ್ಲವೆಂದು ಮಹಿಳಾ ರೋಗಿಯೊಬ್ಬರು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯ ಎಂ.ಚಂದ್ರಶೇಖರ್, ನೀರು ಸಾಕಾಗುತ್ತಿಲ್ಲ ಎಂದರು. ಈ ಸ್ಥಳದಲ್ಲಿ ಸಬೂಬು ಹೇಳುವುದು ಸರಿಯಲ್ಲ. ಸಾರ್ವಜನಿಕರನ್ನು ಸರಿಯಾಗಿ ನೋಡಿಕೊಳ್ಳಿ ಎಂದೇ ನನ್ನನ್ನು ಆಯ್ಕೆ ಮಾಡಿದ್ದಾರೆ. ಆಸ್ಪತ್ರೆಯನ್ನು ಶುಚಿಯಾಗಿಟ್ಟುಕೊಂಡು ಉತ್ತಮ ಚಿಕಿತ್ಸೆ ನೀಡಲು ಸರ್ಕಾರ ನಮ್ಮನ್ನು ನೇಮಕ ಮಾಡಿದೆ. ಇದನ್ನು ಮೊದಲು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು ಎಂದು ತಿಮ್ಮಯ್ಯ ಗರಂ ಆದರು.

ಸಾರ್ವಜನಿಕ ಆಸ್ಪತ್ರೆ ಹಿಂದೆ ಹೇಗಿತ್ತು ಎನ್ನುವುದು ಬೇಕಿಲ್ಲ. ಮುಂದೆ ಹೇಗಿರಬೇಕೆನ್ನುವುದನ್ನು ಚಿಂತಿಸಬೇಕು. ಸಾರ್ವಜನಿಕರ ಸಮಸ್ಯೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುವವರನ್ನು ಕೆಲಸಕ್ಕೆ ಬಿಡಿ. ಸಾರ್ವಜನಿಕರಿಗೆ ಜಿಲ್ಲಾಸ್ಪತ್ರೆಯಲ್ಲಿ ಬದಲಾವಣೆ ಆಗಿದೆ ಎಂದೆನಿಸಬೇಕು. ಯಾವುದೇ ಕಾರಣಕ್ಕೂ ರೋಗಿಗಳಿಗೆ ತೊಂದರೆಯಾಗಬಾರದು. ಹೆರಿಗೆ ಆಸ್ಪತ್ರೆಯಲ್ಲಿ ನಾರ್ಮಲ್ ಡಿಲಿವರಿಗೆ ಯತ್ನಿಸದೆ ಸಿಜೆರಿಯನ್​ಗೆ ಒತ್ತು ಕೊಡಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಅದನ್ನು ಮೊದಲು ತಪ್ಪಿಸಬೇಕೆಂದು ಹೆರಿಗೆ ಆಸ್ಪತ್ರೆ ಮೇಲುಸ್ತುವಾರಿ ಡಾ.ಚಂದ್ರಶೇಖರ ಸಾಲಿಮಠ ಅವರಿಗೆ ಸೂಚಿಸಿದರು.

ಇದೇ ವೇಳೆ ಡಯಾಲಿಸ್ ಕೇಂದ್ರಕ್ಕೆ ತೆರಳಿದ ತಿಮ್ಮಯ್ಯ ಅವರಿಗೆ, ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಸಂಸ್ಥೆಯೊಂದು ಅರ್ಧಕ್ಕೆ ಬಿಟ್ಟುಹೋಗಿದೆ. ಈಗ ಮತ್ತೊಂದು ಖಾಸಗಿ ಸಂಸ್ಥೆ ಈ ಕೇಂದ್ರವನ್ನು ವಹಿಸಿಕೊಂಡಿದೆ. ಕೇಂದ್ರಕ್ಕೆ ರಾಜ್ಯಸಭಾ ಸದಸ್ಯರಾದ ಜೈರಾಂ ರಮೇಶ್ ಸ್ವಲ್ಪ ಅನುದಾನ ನೀಡಿದ್ದಾರೆ. ಐಡಿಬಿಐ ಬ್ಯಾಂಕ್ ಆರ್ಥಿಕ ಸಹಾಯ ಮಾಡಿದೆ ಎಂದು ಜಿಲ್ಲಾ ಸರ್ಜನ್ ಮಾಹಿತಿ ನೀಡಿದರು.

ಕೆಲಸ ನಿರ್ವಹಿಸುತ್ತಿದ್ದ ನರ್ಸಗಳಾದ ಗೀತಾ ಮತ್ತು ಶಾನ್ಯ ಸಂಬಳ ಕಡಿಮೆ ಇದ್ದು, ಇಎಸ್ಐ, ಪಿಎಫ್ ನೀಡುತ್ತಿಲ್ಲ. ಸಮಯಕ್ಕೆ ಸರಿಯಾಗಿ ಸಂಬಳ ಸಿಗುತ್ತಿಲ್ಲ ಎಂದರು. ಈ ಕುರಿತು ಆರೋಗ್ಯ ಸಚಿವರೊಂದಿಗೆ ಚರ್ಚಿಸುವುದಾಗಿ ತಿಮ್ಮಯ್ಯ ತಿಳಿಸಿದರು. ಶಾಸಕರು ಆಸ್ಪತ್ರೆಗೆ ಭೇಟಿ ನೀಡುವ ವಿಷಯ ಮೊದಲೇ ತಿಳಿದಿದ್ದರಿಂದ ಶೌಚಾಲಯಗಳಿಗೆ ಸ್ವಚ್ಚಗೊಳಿಸಿದ್ದು ಕಂಡುಬಂತು.

ಇದನ್ನೂ ಓದಿ : ಗ್ಯಾರಂಟಿ ಯೋಜನೆಗಳನ್ನು ಘೋಷಿಸುವಾಗ ತಲೆಯಲ್ಲಿ ಮೆದುಳು ಇರಲಿಲ್ವಾ, ಸಗಣಿ ತುಂಬಿತ್ತಾ?: ಶೋಭಾ ಕರಂದ್ಲಾಜೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.