ETV Bharat / state

ಮನೆ ಕಳೆದುಕೊಂಡು ಗುಹೆ ಸೇರಿದ್ದ ಕುಟುಂಬಕ್ಕೆ ಸೂರು ಕಲ್ಪಿಸಿದ ಶಾಸಕ ಕುಮಾರಸ್ವಾಮಿ

author img

By

Published : Apr 25, 2020, 6:14 PM IST

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸದ ವ್ಯಕ್ತಿಯ ಕುಟುಂಬ ಮನೆ ಕಳೆದುಕೊಂಡು ಗುಹೆಯಲ್ಲಿ ವಾಸವಾಗಿದ್ದರು. ಈ ವಿಷಯನ್ನರಿತ ಶಾಸಕ ಅವರನ್ನು ಗ್ರಾಮಕ್ಕೆ ಕರೆ ತಂದು ವಾಸಿಸಲು ವ್ಯವಸ್ಥೆ ಮಾಡಿದ್ದಾರೆ.

MLA Kumaraswamy helps the homeless family at Chikmagalur
ಮನೆ ಕಳೆದುಕೊಂಡ ವ್ಯಕ್ತಿಗೆ ಸೂರು ಕಲ್ಪಿಸಿದ ಶಾಸಕ ಕುಮಾರಸ್ವಾಮಿ

ಚಿಕ್ಕಮಗಳೂರು: ಕಳೆದೆರಡು ವರ್ಷಗಳ ಹಿಂದೆ ಸುರಿದ ಮಳೆಯಿಂದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸದ ವ್ಯಕ್ತಿಯ ಕುಟುಂಬ ಮನೆ ಕಳೆದುಕೊಂಡು ಗುಹೆಯಲ್ಲಿ ವಾಸವಾಗಿತ್ತು. ಈ ವಿಷಯನ್ನರಿತ ಶಾಸಕ ಅವರನ್ನು ಗ್ರಾಮಕ್ಕೆ ಕರೆ ತಂದು ವಾಸಿಸಲು ವ್ಯವಸ್ಥೆ ಮಾಡಿದ್ದಾರೆ.

ಮನೆ ಕಳೆದುಕೊಂಡ ವ್ಯಕ್ತಿಯ ಕುಟುಂಬಕ್ಕೆ ಸೂರು ಕಲ್ಪಿಸಿದ ಶಾಸಕ ಕುಮಾರಸ್ವಾಮಿ

ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದ ತಾಲೂಕಿನ ಕಳಸದ ಕಲ್ಲಕ್ಕಿ ಗ್ರಾಮದಲ್ಲಿ ಸಾವಿರಾರು ಜನರ ಮನೆಗಳು ಕೊಚ್ಚಿ ಹೋಗಿ ಸಾಕಷ್ಟು ಸಂಕಷ್ಟ ಅನುಭವಿಸಿದ್ದರು. ಅದರಂತೆ ಅರುಣ್​ ಎಂಬ ವ್ಯಕ್ತಿಯ ಕುಟುಂಬ ಕೂಡ ಮನೆ ಕಳೆದುಕೊಂಡು ಇರಲು ಸೂರಿಲ್ಲದೆ ಗುಹೆಯೊಂದರಲ್ಲಿ ವಾಸಿಸುತ್ತಿದ್ದರು.

ಈ ಕುರಿತು ಮಾಧ್ಯಮಗಳು ಸಾಕಷ್ಟು ವದರಿ ಪ್ರಸಾರ, ಪ್ರಕಟ ಮಾಡಿದ ಪರಿಣಾಮ ಮುಖ್ಯಮಂತ್ರಿ ಯಡಿಯೂರಪ್ಪನವರು ಸ್ಥಳೀಯ ಶಾಸಕರಾದ ಎಂ.ಪಿ.ಕುಮಾರಸ್ವಾಮಿಯವರಿಗೆ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಿದ್ದರು. ಇದರಿಂದ ಎಚ್ಚೆತ್ತ ಶಾಸಕರು, ಅರುಣ್​ ಕುಟುಂಬವನ್ನು ಗ್ರಾಮಕ್ಕೆ ಕರೆ ತಂದಿದ್ದು, ಕಳಸದ ಶಾಲೆಯಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿ ಕೊಡಲಾಗಿದೆ. ಕೆಲ ದಿನಗಳಲ್ಲಿ ಮನೆ ಕಟ್ಟಿಕೊಡುವ ಭರವಸೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.