ಚಿಕ್ಕಮಗಳೂರು : ಕಾಶ್ಮೀರ ಕಣಿವೆಯಲ್ಲಾದ ಬ್ರಾಹ್ಮಣರ ಹತ್ಯಾಕಾಂಡ ಕುರಿತು ಚಿತ್ರಿಸಲಾದ 'ದಿ ಕಾಶ್ಮೀರ ಫೈಲ್ಸ್' ಸಿನಿಮಾದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಕಿಡಿಕಾರಿದ್ದಾರೆ.
ಕಾಶ್ಮೀರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಕ್ಕಳಿದ್ದರೂ ಕೂಡ ಅವರು ಸಿದ್ದರಾಮಯ್ಯ ಅವರ ಹೆಸರೇಳಿಕೊಂಡೂ ಬದುಕಲು ಅಸಾಧ್ಯ. ಸಿದ್ರಾಮುಲ್ಲಾ ಖಾನ್ ಎಂದೇ ಹೇಳಬೇಕಿತ್ತು ಎಂದು ಟೀಕಿಸಿದರು.
ಕಾಶ್ಮೀರಿ ಫೈಲ್ಸ್ ಸತ್ಯದ ಘಟನೆಗಳ ಆಧಾರಿತ ಸಿನಿಮಾ. ಸಿದ್ದರಾಮಯ್ಯ ಅವರು ವಕೀಲರು ಮತ್ತು ಬುದ್ಧಿವಂತರಿದ್ದಾರೆ. ಸಿನಿಮಾದ ಘಟನೆಗಳ ಬಗ್ಗೆ ಆಕ್ಷೇಪ ಇರುವವರಿಗೆ ಆಯಾ ಕಾಲಘಟ್ಟದ ಸರ್ಕಾರಿ ದಾಖಲೆಗಳನ್ನು ಪರಿಗಣಿಸಿದರೆ ಸತ್ಯ ಅರಿವಾಗುತ್ತದೆ. ಸಿನಿಮಾದ ಸತ್ಯವನ್ನು ಟೀಕಿಸುವ ಕಾಂಗ್ರೆಸ್ ನಾಯಕರಿಗೆ ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ ಎಂದರು.
ಗಾಂಧಾರಿ ಎಂದೇ ಪ್ರಸಿದ್ಧವಾಗಿದ್ದ ಆಫ್ಘಾನಿಸ್ತಾನದ ಬಾಮಿಯಾನ್ನಲ್ಲಿದ್ದ ಲಾಫಿಂಗ್ ಬುದ್ಧನ ಪ್ರತಿಮೆಯನ್ನು ತಾಲಿಬಾನಿಗಳು ಫಿರಂಗಿ ಇಟ್ಟು ಉಡಾಯಿಸಿದ್ದು, ಕಾಶ್ಮೀರಿ ಪಂಡಿತರು, ಹಿಂದೂಗಳು ಕಾಶ್ಮೀರ ಕಣಿವೆಯನ್ನು ತೊರೆಯಬೇಕೆಂದು ಮೈಕ್ ಮೂಲಕ ಕೂಗಿದರು. ಅಲ್ಲದೇ, ಹಿಂದೂಗಳಲ್ಲಿ ಭಯ ಹುಟ್ಟಿಸಲು ಅವರನ್ನು ಕೊಲೆ ಮಾಡಿದರು ಎಂದರು.
ಕಾಶ್ಮೀರಿ ಭಯೋತ್ಪಾದನೆಯ ಬಗ್ಗೆ ಸಾಕ್ಷಿ ಬೇಕಾದರೆ ಸಾವಿರ ಸಿಗುತ್ತವೆ. ಅಂದು ಸಂತ್ರಸ್ತರಾಗಿ ಊರು ಬಿಟ್ಟು ಬಂದ ನೂರಾರು ಕಾಶ್ಮೀರಿ ಪಂಡಿತರ ಕುಟುಂಬದವರು ಇನ್ನೂ ಬದುಕಿದ್ದಾರೆ. ಅವರ ಬಳಿ ಈ ಬಗ್ಗೆ ಎಲ್ಲಾ ದಾಖಲೆಗಳು ಇರುತ್ತವೆ. ಎಲ್ಲದರಲ್ಲೂ ರಾಜಕೀಯ ಹುಡುಕಬಾರದು ಎಂದು ಟೀಕಿಸಿದರು.
ಓದಿ: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನಿರ್ದೇಶಕರ ಕಲ್ಪನೆ ಅಷ್ಟೇ: ಪ್ರಿಯಾಂಕ್ ಖರ್ಗೆ